Advertisement

ಅದಮ್ಯ ಚೇತನದಿಂದ ಹಸಿರು ಜೀವನ ಕ್ರಮ

12:28 PM Sep 11, 2018 | |

ಬೆಂಗಳೂರು: “ಹಸಿರು ಜೀವನ ಕ್ರಮ’ದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅದನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಣೆ ನೀಡುವ ಉದ್ದೇಶದಿಂದ ಅದಮ್ಯ ಚೇತನ ಸಂಸ್ಥೆಯು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಎನರ್ಜಿ ಆ್ಯಂಡ್‌ ವೆಟ್‌ಲ್ಯಾಂಡ್ಸ್‌ ಗ್ರೂಪ್‌ನ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ “ನೇಚರ್‌-ಸೈನ್ಸ್‌ ಅವೇರ್‌ನೆಸ್‌ ಟೆಸ್ಟ್‌-2018’ರಲ್ಲಿ ನೂರಾರು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. 

Advertisement

ಅದಮ್ಯ ಚೇತನ ಸಂಸ್ಥೆಯ ಮಹಾ ಪೋಷಕರು ಹಾಗೂ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್‌, ಜುಲೈ 29ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಭಾನುವಾರ (ಸೆ.9) ನಡೆದ “ನೇಚರ್‌-ಸೈನ್ಸ್‌ ಅವೇರ್‌ನೆಸ್‌ ಟೆಸ್ಟ್‌-2018’ರಲ್ಲಿ ಬೆಂಗಳೂರಿನ ವಿವಿಧ 30ಕ್ಕೂ ಹೆಚ್ಚು ಶಾಲೆಗಳಿಂದ 1,300ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಈ ವೇಳೆ ಅದಮ್ಯ ಚೇತನದ ಶೂನ್ಯ ತ್ಯಾಜ್ಯ ಮತ್ತು ಹೊಗೆ ಮುಕ್ತ “ಬೃಹತ್‌ ಅಡುಗೆ ಮನೆ’ ಗೆ (ಮೆಗಾ ಕಿಚನ್‌) ಭೇಟಿ ಕೊಟ್ಟು ಅಲ್ಲಿಯ ವ್ಯವಸ್ಥೆಯ ಬಗ್ಗೆ ತಿಳಿದುಕೊಂಡರು. 

ಈ ಸಂದರ್ಭದಲ್ಲಿ ಐಐಎಸ್ಸಿಯ ಪ್ರೊ. ಟಿ.ವಿ. ರಾಮಚಂದ್ರ ಅವರು ತಮ್ಮ ತಜ್ಞರ ತಂಡದೊಂದಿಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಜೊತೆಗೆ ಸಂವಾದ ನಡೆಸಿದರು. ಬಳಿಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಮ್ಮ ದಿನನಿತ್ಯದ ಬದುಕಿನಲ್ಲಿ ಹಸಿರು ಜೀವನ ಕ್ರಮ ಅಳವಡಿಸಿಕೊಳ್ಳುವ ಪ್ರತಿಜ್ಞೆ ಕೈಗೊಂಡರು.

ಅದ್ಯಮ ಚೇತನದ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌, ಯುವ ಮನಸ್ಸುಗಳಲ್ಲಿ ಹಸಿರುವ ಜೀವನ ಕ್ರಮದ ಬಗ್ಗೆ ಅರಿವು ಮೂಡಿಸುವುದು ನಮ್ಮ ಕಾರ್ಯಕ್ರಮದ ಉದ್ದೇಶವಾಗಿದೆ. ಆ ಮೂಲಕ ವಿದ್ಯಾರ್ಥಿ-ಯುವಕರು ಹಸಿರು ಜೀವನ ಕ್ರಮವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಒಂದು ಹೆಜ್ಜೆ ಮುಂದಿಡಬೇಕು ಮತ್ತು ಈ ಪ್ರಯಾಣವನ್ನು ಅವರು ಮುಂದುವರಿಸಬೇಕು ಅನ್ನುವುದು ನಮ್ಮ ಗುರಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next