Advertisement
ಅವರು ಫೆ. 7 ರಂದು ನಗರದ ಪ್ರಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜೇಶ್ ಶೆಟ್ಟಿ ಅವರು, ಕಳೆದ ವರ್ಷ ರೀಬರ್ತ್ ಸಂಸ್ಥೆಯಿಂದ ಪ್ರಥಮವಾಗಿ ಇಂತಹ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ದೇಶದಾದ್ಯಂತ ಸುಮಾರು 96 ನೋಂದಣಿಗಳು ಬಂದಿದ್ದು ಬಹುಮಾನ ವಿತರಣಾ ಸಮಾರಂಭಕ್ಕೆ ಪುಣೆ ಮೇಯರ್ ಮುಕ್ತಾ ತಿಲಕ್, ಪುಣೆ ಮನಪಾ ಆಯುಕ್ತರಾದ ಕುಣಾಲ್ ಕುಮಾರ್ ಮಾತ್ತಿತರ ಕ್ಷೇತ್ರದ ಗಣ್ಯರು ಆಗಮಿಸಿ ಪ್ರೋತ್ಸಾಹಿಸಿದ್ದರು. ಪ್ರಸ್ತುತ ದ್ವಿತೀಯ ವರ್ಷ ಸುಮಾರು ಮೂರು ಲಕ್ಷದ ನಲವತ್ತು ಸಾವಿರ ಮೊತ್ತದ ಬಹುಮಾನವನ್ನು ಅತ್ಯುತ್ತಮ ಫಿಲ್ಮ…ಗಳಿಗೆ ನೀಡಲಾಗುವುದು. 5 ನಿಮಿಷಗಳ ಕಿರು ಚಿತ್ರವನ್ನು ತಯಾರಿಸಲು ಕಾಲಾವಕಾಶವಿದೆ. ಯಾವುದೇ ರೀತಿಯ ಪ್ರವೇಶ ಶುಲ್ಕವಿಲ್ಲದೆ ಮಾ. 15 ರವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದ್ದು ಆಯ್ಕೆಗೊಂಡ ಅತ್ಯುತ್ತಮ ಕಿರುಚಿತ್ರಕ್ಕೆ ಮಾ. 25 ರಂದು ನಡೆಯುವ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಒಂದು ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ನೀಡಲಾಗುವುದು. ಅಲ್ಲದೆ ದ್ವಿತೀಯ, ತೃತೀಯ, ಶ್ರೇಷ್ಠ ನಟ, ಶ್ರೇಷ್ಠ ನಟಿ, ಅತ್ಯುತ್ತಮ ಛಾಯಾಚಿತ್ರ, ಎಡಿಟಿಂಗ್, ಸೌಂಡ್ ಮುಂತಾದ ಹಲಾವಾರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು. ಈಗಾಗಲೇ ದೇಶದ ವಿವಿಧ ರಾಜ್ಯಗಳಿಂದ ಹಾಗೂ ಬಾಂಗ್ಲಾದೇಶದಿಂದಲೂ ಎರಡು ಫಿಲ್ಮ…ಗಳು ನೋಂದಣಿಗೊಂಡಿದ್ದು ಸುಮಾರು 200 ಕ್ಕೂ ಹೆಚ್ಚು ಫಿಲ್ಮ…ಗಳು ನೋಂದಣಿಗೊಳ್ಳುವ ಉದ್ದೇಶ ನಮ್ಮದಾಗಿದೆ ಎಂದು ತಿಳಿಸಿದರು.
Related Articles
ಪುಣೆಯಲ್ಲಿ ವಿವಿಧ ಕ್ಷೇತ್ರದಲ್ಲಿರುವ ಉದ್ಯಮ ಕ್ಷೇತ್ರದ ಸಾಮಾಜಿಕ ಕಾರ್ಯಕರ್ತರು ಸೇರಿಕೊಂಡು ರೀಬರ್ತ್ ಎನ್ನುವ ಸ್ವಯಂಸೇವಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಮುಖ್ಯವಾಗಿ ಅಂಗಾಂಗದಾನದ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ಈ ಸಂಸ್ಥೆ ನಿರೀಕ್ಷೆಗೂ ಮೀರಿ ಶ್ರಮಿಸುತ್ತಿದೆ. ಇದರಲ್ಲಿ ಡಾಕ್ಟರ್‌ಗಳು, ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಕ್ಷೇತ್ರದ ದಿಗ್ಗಜರು ಕೈಜೋಡಿಸಿ¨ªಾರೆ. ಪುಣೆ ರೀಬರ್ತ್ ಫೌಂಡೇಶನ್ ಆರಂಭಿಸಿದ ಟೋಲ್ ಫ್ರೀ ನಂಬರ್ 18002747444 ನ್ನು ರಾಜ್ಯ ಸರಕಾರವು ಅಧಿಕೃತ ಅಂಗಾಂಗದಾನದ ಟೋಲ್ ಫ್ರೀ ನಂಬರ್ ಆಗಿ ನೋಂದಣಿಗೊಳಿಸಿದೆ. ಮಾತ್ರವಲ್ಲದೆ ಸಂಸ್ಥೆಯ ಅಧ್ಯಕ್ಷರಾದ ಪುಣೆಯ ಹೊಟೇಲ್ ಉದ್ಯಮಿ ರಾಜೇಶ್ ಆರ್. ಶೆಟ್ಟಿ ಅವರನ್ನು ರಾಜ್ಯ ಸರ್ಕಾರವು ಅಂಗಾಂಗ ದಾನದ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಸದಸ್ಯರಾಗಿಯೂ ನೇಮಕಗೊಳಿಸಿ¨ªಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಗ್ರಾಮೀಣ ಭಾಗಗಳ ಜನರಲ್ಲೂ ಜಾಗೃತಿ ಮೂಡಿಸಿ ಜೀವರಕ್ಷಣೆಗೆ ಆದ್ಯತೆ ನೀಡುವ ಮಾನವೀಯ ಉದ್ದೇಶದಿಂದ ಸಂಸ್ಥೆ ಕಾರ್ಯ ಪ್ರವೃತ್ತವಾಗಲಿದೆ.
Advertisement
ಚಿತ್ರ-ವರದಿ :ಕಿರಣ್ ಬಿ. ರೈ ಕರ್ನೂರು