Advertisement

IPL; ರಿಯಾದ್‌ನಲ್ಲಿ ಮಹಾ ಹರಾಜು?: 204 ಸ್ಥಾನಗಳಿಗೆ ಪೈಪೋಟಿ

11:42 PM Nov 04, 2024 | Team Udayavani |

ಮುಂಬಯಿ: ಜಗತ್ತಿನ ಶ್ರೀಮಂತ ಕ್ರಿಕೆಟ್‌ ಪಂದ್ಯಾವಳಿ ಎಂದು ಕರೆಸಿಕೊಳ್ಳುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 18ನೇ ಆವೃತ್ತಿಗೆ ಆಟಗಾರರ ಮಹಾ ಹರಾಜು ಪ್ರಕ್ರಿಯೆ, ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನ.24 ಮತ್ತು 25ರಂದು ನಡೆಯುವುದು ಬಹುತೇಕ ಅಂತಿಮಗೊಂಡಿರುವುದಾಗಿ ವರದಿಗಳು ಹೇಳಿವೆ.

Advertisement

ಐಪಿಎಲ್‌ ಹರಾಜು ರಿಯಾದ್‌ನಲ್ಲಿ ನಡೆಯಲಿದೆ. ಈ ಬಗ್ಗೆ ಫ್ರಾಂಚೈಸಿ ಗಳಿಗೆ ಸೂಚನೆ ನೀಡಲಾಗಿದೆ. ನ. 24 ಮತ್ತು 25ರಂದು ಹರಾಜು ನಡೆಯುವುದನ್ನು ನಿರೀಕ್ಷಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

204 ಸ್ಥಾನಗಳಿಗೆ ಪೈಪೋಟಿ
ಹರಾಜಿನ ವೇಳೆ ಎಲ್ಲ 10 ತಂಡಗಳು ಸುಮಾರು 641.5 ಕೋಟಿ ರೂ. ಹಣವನ್ನು 204 ಸ್ಥಾನಗಳಿಗೆ ವ್ಯಯಿಸುವ ನಿರೀಕ್ಷೆಯಿದೆ. ಖಾಲಿಯಿರುವ ಈ 204 ಸ್ಥಾನಗಳಲ್ಲಿ 70 ಸ್ಥಾನಗಳು ವಿದೇಶಿಯರಿಗೆ ಮೀಸಲಿಡಲಾಗಿದೆ. ಆ.31ರಂದು ಫ್ರಾಂಚೈಸಿಗಳು ಉಳಿಕೆ ಆಟಗಾರರ ಪಟ್ಟಿ ಪ್ರಕಟಿಸಿದ್ದು, 558.5 ಕೋಟಿ ರೂ. ಮೊತ್ತದಲ್ಲಿ ಒಟ್ಟಾರೆ 46 ಆಟಗಾರರನ್ನು ಉಳಿಸಿಕೊಂಡಿವೆ.

ಈ ಬಾರಿ ನಡೆಯಲಿರುವುದು ಮಹಾ ಹರಾಜು. ಈ ಬಾರಿ ತಾರಾ ಆಟಗಾರರಾದ ರಿಷಭ್‌ ಪಂತ್‌, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌, ಅರ್ಶದೀಪ್‌ ಸಿಂಗ್‌ ಮತ್ತಿತರರು ಕಣದಲ್ಲಿದ್ದಾರೆ. ಇವರೆಲ್ಲ ದೊಡ್ಡ ಮೊತ್ತಕ್ಕೆ ಹರಾಜಾಗುವ ಎಲ್ಲ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next