Advertisement

ಮರಿಯಾನೆಯ ದೊಡ್ಡ ಮನಸ್ಸು

11:01 AM Nov 30, 2017 | Team Udayavani |

ಒಂಟಿ ಮರಿ ಆನೆಯೊಂದು ಗೆಳೆಯರಿಗಾಗಿ ಕಾಡಿನಲ್ಲೆಲ್ಲ ಓಡಾಡುತ್ತಿತ್ತು. ಅದಕ್ಕೆ ಮರದ ಮೇಲೆ ಮಂಗವೊಂದು ಕಾಣಿಸಿತು. “ನೀನು ನನ್ನ ಗೆಳೆಯನಾಗ್ತಿಯಾ?’ ಅಂತ ಆಸೆಯಿಂದ ಕೇಳಿತು ಆನೆ. ಪಕ್ಕದ ಮರಕ್ಕೆ ಜಿಗಿದ ಮಂಗ, “ನೀನೂ ಹೀಗೆ ಮರದಿಂದ ಮರಕ್ಕೆ ಹಾರಿದರೆ ಮಾತ್ರ’ ಎಂದು ಅದನ್ನು ಅಣಕಿಸಿತು. ಮುಂದೆ ಆನೆಗೆ ಮೊಲವೊಂದು ಎದುರಾಯಿತು. ಆನೆ ಮತ್ತೆ “ನಾನೂ ನೀನು ಗೆಳೆಯರಾಗೋಣ’ ಎಂದಿತು. “ಅಯ್ಯೋ, ನಿನ್ನಂಥ ಡುಮ್ಮನೊಂದಿಗೆ ನನಗೆ ಗೆಳೆತನ ಬೇಡ’ ಎಂದು ಮೊಲ ಕುಪ್ಪಳಿಸುತ್ತಾ ಮರೆಯಾಯಿತು. ಕಪ್ಪೆ, ನರಿ, ಗಿಳಿ, ನವಿಲು, ಕಾಗೆ, ತೋಳ, ಆಮೆ… ಹೀಗೆ ಯಾರೂ ಆನೆಯೊಂದಿಗೆ ಸ್ನೇಹ ಮಾಡಲು ಮುಂದಾಗಲಿಲ್ಲ. ಆನೆಗಂತೂ ಅಳುವೇ ಬಂದುಬಿಟ್ಟಿತು. ಅದು ಅಳುತ್ತಳುತ್ತಾ ಒಂದೆಡೆ ಮಲಗಿಬಿಟ್ಟಿತು. 

Advertisement

ಸ್ವಲ್ಪ ಹೊತ್ತಿನ ನಂತರ ಅದಕ್ಕೆ ಎಚ್ಚರವಾಯ್ತು. ಆಗ ಕಾಡಿನ ಪ್ರಾಣಿಗಳೆಲ್ಲವೂ ದಿಕ್ಕಾಪಾಲಾಗಿ ಓಡುತ್ತಿರುವುದು ಕಾಣಿಸಿತು. ಓಡುತ್ತಿದ್ದ ಜಿಂಕೆಯನ್ನು ತಡೆದು ನಿಲ್ಲಿಸಿದಾಗ ಅದು, “ಪಕ್ಕದ ಕಾಡಿನಿಂದ ಬಂದ ಹುಲಿ ನಮ್ಮನ್ನೆಲ್ಲ ಬೇಟೆಯಾಡಿ ತಿನ್ನುತ್ತಿದೆ’ ಎಂದು ಹೇಳಿ ಓಡಿಹೋಯ್ತು. ಸಣ್ಣ ಗಾತ್ರದ ಪ್ರಾಣಿಗಳು ಹುಲಿಗೆ ಹೆದರುತ್ತಿರುವುದನ್ನು ನೋಡಿ ಮರಿಯಾನೆಗೆ ದುಃಖವಾಯ್ತು. ಅದು ಹುಲಿಯಲ್ಲಿಗೆ ಹೋಗಿ, ಪ್ರಾಣಿಗಳಿಗೆ ತೊಂದರೆ ಕೊಡದಂತೆ ಕೇಳಿಕೊಂಡಿತು. ಹುಲಿ ಅದರ ಮಾತನ್ನು ಕೇಳದಿದ್ದಾಗ ಜೋರಾಗಿ ಒಂದು ಒದೆ ಕೊಟ್ಟು ಅದನ್ನು ಕಾಡಿನಿಂದ ಆಚೆಗಟ್ಟಿತು. ಆನೆಮರಿಯ ಒಳ್ಳೆತನವನ್ನು ಕಂಡು ಎಲ್ಲ ಪ್ರಾಣಿಗಳಿಗೆ ತಮ್ಮ ಸಣ್ಣತನದ ಬಗ್ಗೆ ಪಶ್ಚಾತ್ತಾಪವಾಯ್ತು. “ನಿನ್ನ ದೇಹದಷ್ಟೇ ನಿನ್ನ ಮನಸ್ಸೂ ದೊಡ್ಡದು’ ಎಂದು ಮರಿಯಾನೆಯಲ್ಲಿ ಕ್ಷಮೆ ಕೇಳಿದವು.

ಪ್ರಿಯಾ 

Advertisement

Udayavani is now on Telegram. Click here to join our channel and stay updated with the latest news.

Next