Advertisement
ಚಾಮರಾಜನಗರ ಜಿಲ್ಲೆಯಲ್ಲಿ ಈ ವರ್ಷ ಆನೆಗಳ ಸಾವಿನ ಪ್ರಮಾಣ ಹೆಚ್ಚಾಗಿದ್ದು, 25 ಆನೆಗಳು ಸಹಜ ಸಾವಿನಿಂದ ಮೃತಪಟ್ಟಿವೆ. (ಗುರುವಾರ ಹೊಸಪುರದಲ್ಲಿ ಕಂದಕಕ್ಕೆ ಬಿದ್ದು ಆನೆಯೊಂದು ಸತ್ತಿರುವುದು ಹೊರತುಪಡಿಸಿ). ಕೊಡಗಿನಲ್ಲಿ 22, ಮೈಸೂರು ಜಿಲ್ಲೆಯಲ್ಲಿ 4, ಚಿಕ್ಕಮಗಳೂರು 5, ದ.ಕನ್ನಡ, ಉ.ಕನ್ನಡ, ಬೆಂಗಳೂರು ಜಿಲ್ಲೆಯಲ್ಲಿ ತಲಾ 1 ಆನೆ ಮೃತಪಟ್ಟಿದೆ.
Related Articles
ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಬಲರಾಮ ಕಳೆದ ವರ್ಷದ ಫೆಬ್ರವರಿಯಲ್ಲಿ ಮೇಯಲು ಹೋಗುವಾಗ ಗುಂಡೇಟು ತಿಂದು ಮೃತಪಟ್ಟಿತ್ತು. ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲಿದ್ದ ಅಂಬಾರಿ ಹೊತ್ತ ಅರ್ಜುನ ಆನೆ ಕಳೆದ ವರ್ಷ ಹಾಸನ ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಹೋದಾಗ ಜೀವ ಕಳೆದುಕೊಂಡಿತು. ಕೆಲವು ತಿಂಗಳ ಹಿಂದೆಯಷ್ಟೇ ನಾಗರಹೊಳೆಯ ಬಳ್ಳೆ ಶಿಬಿರದಲ್ಲಿದ್ದ ಕುಮಾರಸ್ವಾಮಿ ಎಂಬ ಆನೆ ಕಾಣೆಯಾಗಿ ಶವವಾಗಿ ಪತ್ತೆಯಾಗಿತ್ತು. ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಕೃಷ್ಣ ಎನ್ನುವ ಆನೆ ಕೆಲ ದಿನಗಳ ಹಿಂದೆ ಮೃತಪಟ್ಟಿದೆ. ಈ ಆನೆಯನ್ನು ವರ್ಷದ ಹಿಂದೆಯಷ್ಟೇ ಸೆರೆ ಹಿಡಿದು ತರಲಾಗಿತ್ತು.
Advertisement
ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ ಸಂರಕ್ಷಿತ ಅರಣ್ಯ ಸೇರಿ 4 ಅರಣ್ಯಗಳಿದ್ದು, ಇಲ್ಲಿ ಅತಿ ಹೆಚ್ಚು ಆನೆಗಳು ಆವಾಸಸ್ಥಾನವಾಗಿರುವುದರಿಂದ ಸಹಜ ಸಾವಿನ ಪ್ರಕರಣಗಳು ಸಹ ಹೆಚ್ಚು. ಆನೆಗಳು ಮೃತಪಟ್ಟ ಅನೇಕ ದಿನಗಳ ಅನಂತರ ಪತ್ತೆಯಾಗಿರುವುದು ಸಮಸ್ಯೆಯನ್ನು ಎತ್ತಿ ತೋರಿಸಿದೆ.-ಟಿ.ಹೀರಾಲಾಲ್,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಾ.ನಗರ ವೃತ್ತ ಕೆ.ಎಸ್. ಬನಶಂಕರ ಆರಾಧ್ಯ