Advertisement

ಮಿಡತೆ ಹಿಂಡು ಪತ್ತೆ, ಆತಂಕ

01:35 AM May 31, 2020 | Sriram |

ಕಲ್ಲುಗುಡ್ಡೆ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ. ಪಂ. ವ್ಯಾಪ್ತಿಯ ರೆಂಜಿಲಾಡಿ ಹೇರ ಎಂಬಲ್ಲಿ ಕೃಷಿಕರೊಬ್ಬರ ತೋಟದಲ್ಲಿ ಮಿಡತೆ ಗುಂಪೊಂದು ಶುಕ್ರವಾರ ಸಂಜೆ ಹೊತ್ತು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.

Advertisement

ಪಾಕಿಸ್ಥಾನ ಕಡೆಯಿಂದ ಬಂದಿ ರುವ ಕೋಟ್ಯಂತರ ಮಿಡತೆಗಳ ಹಿಂಡು ಈಗಾಗಲೇ ಉತ್ತರ ಭಾರತದ ಹಲವು ಕಡೆಗಳು ಮತ್ತು ಉತ್ತರ ಕರ್ನಾಟಕದ ಕೆಲವೆಡೆಗಳಲ್ಲಿ ಹಾನಿ ಉಂಟು ಮಾಡುತ್ತಿದೆ. ಇದು ಕರಾವಳಿ ಮತ್ತು ಒಳನಾಡಿಗೂ ದಾಂಗುಡಿ ಇರಿಸಿದೆಯೇ ಎಂಬ ಕಳವಳ ವ್ಯಕ್ತವಾಗಿದೆ.

ಕೊಣಾಜೆ ಕಾಡಂಚಿನ ಪ್ರದೇಶದ ಹೇರ ಪ್ರದೇಶದ ಕೃಷಿಕ ಆನಂದ ಅವರ ತೋಟದ ಬಳಿ ಮರವೊಂದ ರಲ್ಲಿ ಈ ಮಿಡತೆ ಹಿಂಡು ಕಾಣಿಸಿ ಕೊಂಡಿದೆ. ರಾತ್ರಿಯ ವರೆಗೂ ಕಾಣಿಸಿಕೊಂಡಿದ್ದು, ಹಗಲು ಹೊತ್ತು ಗೋಚ ರಿಸಿಲ್ಲ ಎಂದು ಆನಂದ ಅವರು ಹೇಳಿದ್ದಾರೆ. ಶನಿವಾರ ಬೆಳಗ್ಗೆ ಇದೇ ಸ್ಥಳದಲ್ಲಿ ಹಕ್ಕಿಗಳು ಹಾರಾಡುತ್ತಿದ್ದವು, ಮಿಡತೆಗಳು ಇರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಬೆಳ್ತಂಗಡಿಯಲ್ಲೂ ಪತ್ತೆ
ಬೆಳ್ತಂಗಡಿ ತಾ|ನ ಕರಂಬಾರು ಗ್ರಾಮದ ದರ್ಬೆ ನಿವಾಸಿ ಅನೀಶ್‌ಅವರ ರಬ್ಬರ್‌ ತೋಟದಲ್ಲಿ, ಶಿರ್ಲಾಲು ಕಿಶೋರ್‌ ಮ್ಯಾಥ್ಯೂ ಅವರ ರಬ್ಬರ್‌ ತೋಟದಲ್ಲೂ ಮಿಡತೆಗಳು ಕಾಣಿಸಿಕೊಂಡಿವೆ. ಶಿರ್ಲಾಲು ಪ್ರದೇಶದಲ್ಲಿಅತೀ ಹೆಚ್ಚು ತರಕಾರಿ ಬೆಳೆ ಬೆಳೆಯ ಲಾಗುತ್ತಿದ್ದು, ಮಿಡತೆಗಳಿಂದಾಗಿ ಕೃಷಿಕರು ಆತಂಕದಲ್ಲಿದ್ದಾರೆ.

ನಮ್ಮ ಪ್ರದೇಶದಲ್ಲಿ ಮಿಡತೆ ಹಿಂಡು ಕಾಣಿಸಿಕೊಂಡಿದ್ದು, ಆತಂಕ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
– ವಿಶ್ವನಾಥ ಹೇರ ರೆಂಜಿಲಾಡಿ, ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next