Advertisement

ರಾಮ ಮಂದಿರಕ್ಕೆ ಶಿಲಾನ್ಯಾಸವಾದರೂ ಉಪವಾಸ ಬಿಡದ ಅಜ್ಜಿ

08:29 AM Aug 06, 2020 | mahesh |

ಭೋಪಾಲ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇ ಬೇಕು. ಇದಕ್ಕೆ ಅಡಿಗಲ್ಲು ಹಾಕುವಲ್ಲಿವರೆಗೆ ಊಟ ಮಾಡುವುದಿಲ್ಲ ಎಂದು ಶಪಥ ತೊಟ್ಟಿದ್ದ ಅಜ್ಜಿಯೊಬ್ಬಳ ಮಾತು ಬುಧವಾರಕ್ಕೆ ಈಡೇರಿದರೂ ಉಪವಾಸ ಮಾತ್ರ ಬಿಟ್ಟಿಲ್ಲ!

Advertisement

1992, ಡಿ.6ರಂದು ಬಾಬರಿ ಮಸೀದಿ ಸ್ಥಳದಲ್ಲಿ ರಾಮಲಲ್ಲಾನ ಸ್ಥಾಪನೆಯಾದ ಸಂದರ್ಭ, ಜಬಲ್ಪುರ ಮೂಲದ ಉರ್ಮಿಳಾ ಚತುರ್ವೇದಿ ಅವರು ಉಪವಾಸದ ಶಪಥ ಕೈಗೊಂಡಿದ್ದರು. ಅಂದಿನಿಂದ ಅವರು ಊಟ ಮಾಡೇ ಇಲ್ಲ. ಬರೀ ಹಣ್ಣು ಹಂಪಲು ತಿಂದುಕೊಂಡೇ ಜೀವನ ನಡೆಸುತ್ತಿದ್ದಾರೆ. ಮೂರು ಹೊತ್ತೂ ರಾಮಧ್ಯಾನ ಮಾಡುತ್ತಾರೆ. ಇಂತಹ ಅಜ್ಜಿಗೆ ಅಯೋಧ್ಯೆಗೆ ಹೋಗಿ ರಾಮ ಮಂದಿರ ಶಿಲಾನ್ಯಾಸ ನೋಡಬೇಕೆಂಬ ಉತ್ಕಟ ಇಚ್ಛೆ ಇತ್ತು. ಆದರೆ ಕೋವಿಡ್‌ ಮತ್ತು ಭದ್ರತೆ ಕಾರಣಕ್ಕಾಗಿ ಈಗ ಊರು ಬಿಟ್ಟು ಹೋಗಲು ಸಾಧ್ಯವಾಗಿಲ್ಲ. ಆಕೆ ಶಪಥ ಕೈಗೊಂಡು 28 ವರ್ಷಗಳಾಗಿವೆ. ಉಪವಾಸದ ಶಪಥ ಏನಿದ್ದರೂ ಅಯೋಧ್ಯೆಯಲ್ಲಿ ರಾಮನ ಎದುರೇ ಬಿಡುತ್ತೇನೆ ಎಂಬ ಮಾತು ಆಕೆಯದ್ದು. ಸದ್ಯ ಅದು ಈಡೇರದ್ದರಿಂದ ಉಪವಾಸ ಮುಂದುವರಿಸಲಿದ್ದೇನೆ ಎಂಬ ಮಾತು ಅಜ್ಜಿಯದ್ದು.

ಹೋಗಬೇಕೆನ್ನುವ ಆಸೆ ಹೆಚ್ಚಿತ್ತು. ಆದರೆ ಈಗಿನ ಸಂದರ್ಭದಲ್ಲಿ ಸಾಧ್ಯವಿಲ್ಲ. ಮನೆಯವರು ಮುಂದೊಂದು ದಿನ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಲಿದ್ದಾರೆ. ನಾನೂ ಮಂತ್ರಿಯವರೊಬ್ಬರ ಬಳಿ ಮಾತನಾಡಿದ್ದು, ಕರೆದುಕೊಂಡು ಹೋಗಬೇಕಾದವರ ಪಟ್ಟಿ ಮಾಡಿದ್ದಾರಂತೆ ಎಂದು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಮ್ಮ ಉಳಿದ ಜೀವನವನನ್ನು ಅಯೋಧ್ಯೆ-ಸರಯೂ ನದಿ ತೀರದಲ್ಲೇ ಕಳೆಯಬೇಕೆನ್ನುವ ಆಸೆ ಅಜ್ಜಿಯದ್ದಂತೆ. ಅಲ್ಲೇ ನನಗೆ ಉಳಿದುಕೊಳ್ಳಲೂ ಒಂದು ವ್ಯವಸ್ಥೆಯಾದರೆ ನಾನೇ ಧನ್ಯ ಎಂದಿದ್ದಾರೆ ಅಜ್ಜಿ.

Advertisement

Udayavani is now on Telegram. Click here to join our channel and stay updated with the latest news.

Next