Advertisement

ಗ್ರಾಮ ಪಂಚಾಯತ್‌ ಸ್ವಚ್ಛತೆಗೆ ಸ್ತ್ರೀ ಸಾರಥ್ಯ

02:19 AM Oct 26, 2021 | Team Udayavani |

ಶಿವಮೊಗ್ಗ: ಇನ್ನು ಮುಂದೆ ಹಳ್ಳಿಗಳಲ್ಲಿ ಮಹಿಳೆಯರೇ ವಾಹನ ಚಲಾಯಿಸಿ ಕೊಂಡು ಬಂದು ಮನೆ ಮನೆಯ ಕಸ ಸಂಗ್ರಹಿ ಸುತ್ತಾರೆ. ಕಸ ಸಂಗ್ರಹಣೆ, ವಿಂಗಡಣೆಯನ್ನು ಕೂಡ ಅವರೇ ಮಾಡಲಿದ್ದಾರೆ.

Advertisement

ಮಹಿಳಾ ಸಶಕ್ತೀಕರಣ ಆಶಯದ ಅನುಷ್ಠಾನಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಈ ಮಹತ್ವದ ಹೆಜ್ಜೆ ಇರಿಸಿದ್ದು, ಸ್ವಚ್ಛತೆಯ ಸಂಪೂರ್ಣ ಹೊಣೆಯನ್ನು ಮಹಿಳೆಯರಿಗೆ ವಹಿಸಲು ಮುಂದಾಗಿದೆ.

ರಾಜ್ಯದ ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಕಸ ಸಂಗ್ರಹಣೆ, ವಿಂಗಡಣೆಗೆ ವ್ಯವಸ್ಥೆ ಮಾಡ ಲಾಗಿದ್ದು, ಮೊದಲ ಹಂತದಲ್ಲಿ ಆಯ್ದ ಗ್ರಾ.ಪಂ.ಗಳಲ್ಲಿ ಕಸ ಸಂಗ್ರಹಣೆಗೆ ಚಾಲನೆ ನೀಡಲಾಗಿದೆ.

ದಕ್ಷಿಣ ಕನ್ನಡ, ಉಡುಪಿಯ ಕೆಲವು ಗ್ರಾ.ಪಂ.ಗಳು ಈಗಾಗಲೇ ಕಸ ಸಂಗ್ರ ಹಣೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು, ಅದನ್ನೇ ಮಾದರಿಯಾಗಿರಿಸಿ ಯೋಜನೆ ರೂಪಿಸಲಾಗಿದೆ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ವತಿಯಿಂದ ಗ್ರಾ.ಪಂ. ಮಟ್ಟದಲ್ಲಿ ಸ್ವಚ್ಛ ಸಂಕೀರ್ಣ ಘಟಕದ ನಿರ್ವಹಣೆ ವಹಿಸಿಕೊಂಡಿದ್ದು, ಹೊರಗುತ್ತಿಗೆ ಆಧಾರದ ಮೇಲೆ ಸಿಬಂದಿ ನೇಮಕ, ತರಬೇತಿ, ವೇತನ ನೀಡುತ್ತದೆ. ಆಯಾ ಗ್ರಾ.ಪಂ.ಗಳ ಆರ್ಥಿಕ ಶಕ್ತಿ ಆಧಾರದ ಮೇಲೆ ಆಕರ್ಷಕ ವೇತನ ಕೂಡ ನಿಗದಿಯಾಗಿದೆ.

Advertisement

ಇದನ್ನೂ ಓದಿ:ಕೋವಿಡ್‌ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾ: ಅರ್ಜಿದಾರ ವಕೀಲರಿಗೆ ಹೈಕೋರ್ಟ್‌ ತರಾಟೆ

ಚಾಲನೆ ತರಬೇತಿ, ಪರವಾನಿಗೆ
“ಕೌಶಲ್ಯ ಕರ್ನಾಟಕ’ದ ವತಿಯಿಂದ ಆಯಾ ಗ್ರಾ.ಪಂ. ವ್ಯಾಪ್ತಿಯ ಮಹಿಳೆಯರನ್ನು ಆಯ್ಕೆ ಮಾಡಿ ವಾಹನ ಚಾಲನೆ ತರಬೇತಿ, ಡಿಎಲ್‌ ಕೊಡಿಸಲಾಗಿದೆ. ಸ್ವಚ್ಛ ಭಾರತ, 15ನೇ ಹಣಕಾಸು ನಿ ಧಿ, ಜಿ.ಪಂ. ಅನುದಾನ ಬಳಸಿ ವಾಹನ ವ್ಯವಸ್ಥೆ, ಡಂಪಿಂಗ್‌ ಯಾರ್ಡ್‌ ಆಯ್ಕೆ, ಮನೆ ಮನೆಗೆ ಕಿಟ್‌ ವ್ಯವಸ್ಥೆ ಮಾಡಲಾಗಿದೆ. ತರಬೇತಾದ ಮಹಿಳೆಯರು ಗ್ರಾ.ಪಂ. ವ್ಯಾಪ್ತಿಯ ಎಲ್ಲ ಮನೆಗಳಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಕಸದಿಂದ ಬಂದ ಆದಾಯವನ್ನು ಸಿಬಂದಿ, ವಾಹನ ವೆಚ್ಚಕ್ಕೆ ಬಳಸಿಕೊಳ್ಳಲು ಅವಕಾಶ ಇದೆ.

ಮಹಿಳೆಯರಿಗೆ ಆದ್ಯತೆ
ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾ.ಪಂ.ಗಳಿದ್ದು ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಮೊದಲ ಹಂತ ದಲ್ಲಿ ಶಿವಮೊಗ್ಗ ಜಿಲ್ಲೆಯ 30, ಹಾವೇರಿ, ಚಿತ್ರ ದುರ್ಗ 30, ರಾಯಚೂರು ಜಿಲ್ಲೆಯ 31 ಮಂದಿಗೆ ವಾಹನ ಚಾಲನೆ ತರಬೇತಿ ನೀಡಲಾಗಿದೆ. ಇವರು ನ. 1ರಿಂದ ಅಧಿ ಕೃತವಾಗಿ ಕಾರ್ಯಾರಂಭ ಮಾಡಲಿದ್ದಾರೆ.

ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ದೃಷ್ಟಿಯಿಂದ ರಾಜ್ಯದಲ್ಲಿ ಕಸ ಸಂಗ್ರಹಣೆಗೆ ವಾಹನ ಖರೀದಿಸಲಾಗಿದೆ. ಅದಕ್ಕೆ ಮಹಿಳಾ ಚಾಲಕರೇ ಬೇಕೆಂದು ಅಪೇಕ್ಷೆ ವ್ಯಕ್ತವಾಗಿತ್ತು. ಅದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮನೆ ಸ್ವಚ್ಛವಾಗಿ ಇರಿಸಿಕೊಳ್ಳುವ ಮಹಿಳೆಯರು ಗ್ರಾಮ ವನ್ನೂ ಸ್ವಚ್ಛವಾಗಿ ಇರಿಸಿಕೊಳ್ಳಬಲ್ಲರು.
-ಕೆ.ಎಸ್‌. ಈಶ್ವರಪ್ಪ  ,
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಸಚಿವ

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next