Advertisement
ಆಡಳಿತ ಪಕ್ಷ ಬಿಜೆಪಿ ಮುಂದಿನ ಅಸೆಂಬ್ಲಿ ಚುನಾವಣೆಗೆ ಈಗಲೇ ರಣಕಹಳೆ ಊದಿದಂತೆ ಅಖಾಡಕ್ಕೆ ಇಳಿದಿತ್ತು. ಹಳೇ ಮೈಸೂರು ಭಾಗದಲ್ಲಿ ದಕ್ಷಿಣ ಪದವೀಧರ ಕ್ಷೇತ್ರ ಗೆದ್ದು ಮತ್ತಷ್ಟು ಆಕ್ರಮಣಕಾರಿಯಾಗಿ ಮುನ್ನುಗ್ಗಲು ಹೊರಟಿತ್ತು. ಈ ಚುನಾವಣೆಯ ಸೋಲು ಬಿಜೆಪಿಯ ಉತ್ಸಾಹಕ್ಕೆ ತಣ್ಣಿರೆರಚಿದೆ.
Related Articles
Advertisement
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ನಿಕಟವರ್ತಿಯಾಗಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವೇನೆಂಬ ಬಗ್ಗೆ ಆ ಪಕ್ಷದ ವೇದಿಕೆಯಲ್ಲಿ ಚರ್ಚೆಯೇ ಆಗಲಿಲ್ಲ. ಆತ್ಮಾವಲೋಕನ ಸಭೆಯೇ ನಡೆಯಲಿಲ್ಲ. ಸೋಲಿನಿಂದ ಪಾಠವನ್ನೂ ಕಲಿಯಲಿಲ್ಲ. ರವಿಶಂಕರ್ ಕಳೆದ ಬಾರಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬಾರಿ 12 ಸಾವಿರ ಮತಗಳ ಅಂತರದಿಂದ ಸೋತಿರುವ ಬಗ್ಗೆ ಬಿಜೆಪಿ ತನ್ನ ಬೈಠಕ್‌ನಲ್ಲಿ ಚರ್ಚಿಸುವಂತೆ ಮಾಡಿದೆ.
ಮೈಸೂರು ಭಾಗದಲ್ಲಿ ಬಿಜೆಪಿಯಲ್ಲಿ ವಲಸಿಗರಲ್ಲಿ ಕೆಲವು ಪ್ರಮುಖ ನಾಯಕರನ್ನು ಕಡೆಗಣಿಸಲಾಗಿದೆ. ಇದು ಕೂಡ ಸೋಲಿಗೆ ಮತ್ತಷ್ಟು ಕಾರಣವಾಗಿದೆ ಎಂಬ ಚರ್ಚೆ ಶುರುವಾಗಿದೆ. ಬಿಜೆಪಿ ಸಂಘಟನಾತ್ಮಕವಾಗಿ ಪ್ರಚಾರವೇನೋ ನಡೆಸಿತ್ತು. ಆದರೆ, ಪಕ್ಷದ ಬಣ ರಾಜಕಾರಣದ ಒಳೇಟು ಬಿದ್ದಿರುವುದನ್ನು ಕಾಣಬಹುದು. ಚುನಾವಣಾ ಪ್ರಚಾರದ ವೇಳೆ ಬಿಜೆಪಿಯ ಕೆಲವು ನಾಯಕರು ನಾಲಿಗೆಯನ್ನು ಹರಿಬಿಟ್ಟು ಮಾತನಾಡಿದ್ದು ಕೂಡ ಆ ಪಕ್ಷಕ್ಕೆ ದುಬಾರಿಯಾಗಿರುವುದನ್ನು ತಳ್ಳಿ ಹಾಕುವಂತಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಜೂ.20ರಂದು ಮೈಸೂರಿಗೆ ಆಗಮಿಸಲಿದ್ದಾರೆ. ಮೋದಿ ಅವರು ಮೈಸೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅವರಿಗೆ ಪದವೀಧರ ಕ್ಷೇತ್ರದ ಗೆಲುವನ್ನು ಉಡುಗೊರೆಯಾಗಿ ನೀಡೋಣ ಎಂದು ಬಿಜೆಪಿ ನಾಯಕರು ಮತಯಾಚಿಸಿದ್ದರು. ಆದರೆ, ಈಗ ಸೋಲು ಅವರನ್ನು ಕಂಗೆಡಿಸಿದೆ.
*ಕೂಡ್ಲಿ ಗುರುರಾಜ