ನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 18ರಿಂದ ಪೂರ್ಣಪ್ರಮಾಣದಲ್ಲಿ ದೇಶೀಯ ವಿಮಾನ ಸಂಚರಿಸಲಿದೆ ನಾಗರಿಕ ವಿಮಾನಯಾನ ಸಚಿವಾಲಯ ಯಾವುದೇ ನಿರ್ಬಂಧ ವಿಧಿಸದೇ ಮಂಗಳವಾರ(ಅಕ್ಟೋಬರ್ 12) ಅನುಮತಿ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಏರಿಳಿತದ ವಹಿವಾಟಿನ ನಡುವೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 148 ಅಂಕ ಏರಿಕೆ, ನಿಫ್ಟಿ ಜಿಗಿತ
ವಿಮಾನ ಪ್ರಯಾಣದ ಕುರಿತು ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆ ನಡೆಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಆದೇಶದಲ್ಲಿ ತಿಳಿಸಿದೆ. ಅಲ್ಲದೇ ಯಾವುದೇ ನಿರ್ಬಂಧ ವಿಧಿಸದೇ ಅಕ್ಟೋಬರ್ 18ರಿಂದ ನಿಗದಿತ ಎಲ್ಲಾ ದೇಶೀಯ ವಿಮಾನ ಸಂಚಾರ ಆರಂಭಗೊಳ್ಳಲಿದೆ ಎಂದು ಹೇಳಿದೆ.
ವಿಮಾನ ಸಿಬಂದಿ, ವಿಮಾನ ನಿಲ್ದಾಣದ ಸಿಬಂದಿಗಳು ಕೋವಿಡ್ ಸೋಂಕು ತಡೆಯವ ಮುಂಜಾಗ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಅಷ್ಟೇ ಅಲ್ಲ ಪ್ರಯಾಣಿಕರು, ಸಿಬಂದಿಗಳು ಕೂಡಾ ಎಚ್ಚರಿಕೆ ವಹಿಸಬೇಕು ಎಂದು ಆದೇಶದಲ್ಲಿ ವಿವರಿಸಿದೆ.
ಜುಲೈ 5 ಮತ್ತು ಆಗಸ್ಟ್ 12ರ ನಡುವೆ ಶೇ.65ರಷ್ಟು ಸೀಟು ಭರ್ತಿಗೆ, ಜೂನ್ 1 ಮತ್ತು ಜುಲೈ 5ರ ನಡುವೆ ಶೇ.50ರಷ್ಟು ಪ್ರಯಾಣಿಕರ ಸೀಟು ಭರ್ತಿಗೆ ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿತ್ತು. ಇದೀಗ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರು ವಿಮಾನ ಯಾನ ಕೈಗೊಳ್ಳಬಹುದಾಗಿದೆ.