Advertisement

ಮಾಹಿತಿಯಿಲ್ಲಿದ ದಾಖಲಾತಿಯಲ್ಲಿ ಸರ್ಕಾರಿ ಸೀಲ್‌-ಸಹಿ!

04:10 PM Mar 31, 2022 | Team Udayavani |

ಚಳ್ಳಕೆರೆ: ಇಲ್ಲಿನ ತಾಲೂಕು ಕಚೇರಿಗೆ ಬುಧವಾರ ಸಲ್ಲಿಕೆಯಾದ ವಯಸ್ಸು ದೃಢೀಕರಣ ದಾಖಲಾತಿಯಲ್ಲಿ ಹಿರಿಯ ತಜ್ಞರು, ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ ಎಂಬ ಸೀಲ್‌ ಹಾಗೂ ಸಹಿ ಇರುವುದು ಪತ್ತೆಯಾಗಿದ್ದು, ಅದರಲ್ಲಿ ಯಾರಿಗೆ ನೀಡಲಾಗಿದೆ ಎಂಬ ಮಾಹಿತಿಯೇ ಇರಲಿಲ್ಲ.

Advertisement

ಇದರಿಂದ ಅನುಮಾನಗೊಂಡ ಗ್ರೇಡ್‌ -2 ತಹಶೀಲ್ದಾರ್‌ ಸಂಧ್ಯಾ, ದಾಖಲಾತಿ ಸಲ್ಲಿಸಿದ ವ್ಯಕ್ತಿಯನ್ನು ಈ ಬಗ್ಗೆ ಪ್ರಶ್ನಿಸಿದರು. ಆ ವ್ಯಕ್ತಿ ಅಲ್ಲಿ ಡಬ್ಟಾ ಅಂಗಡಿಯ ಲಕ್ಷ್ಮಕ್ಕ ಎಂಬಾಕೆ ನೀಡಿದ್ದಾಗಿ ತಿಳಿಸಿದ್ದಾನೆ. ನಂತರ ಗ್ರೇಡ್‌-2 ತಹಶೀಲ್ದಾರ್‌ ಸಂಧ್ಯಾ, ಶಿರಸ್ತೇದಾರ್‌ ಸದಾಶಿವ, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮಲೆಕ್ಕಿಗ ಪ್ರಕಾಶ್‌ ಮತ್ತಿತರರು ಮಹಿಳೆಯನ್ನು ಪ್ರಶ್ನಿಸಿದಾಗ ಮಹಿಳೆ ಉತ್ತರ ಕೊಡಲು ತಡವರಿಸಿದಳು. ಸಾರ್ವಜನಿಕವಾಗಿ ಪ್ರಶ್ನೆ ಮಾಡುತ್ತಿದ್ದ ಸಂದರ್ಭದಲ್ಲೇ ಎಲ್ಲರ ಕಣ್ತಪ್ಪಿಸಿ ನಾಪತ್ತೆಯಾಗಿದ್ದಾಳೆ. ಹಿರಿಯ ತಜ್ಞರು, ಜಿಲ್ಲಾ ಆಸ್ಪತ್ರೆ ಎಂಬ ಮೊಹರು ಇರುವ ದಾಖಲಾತಿಯನ್ನು ಪಡೆದಿದ್ದೇವೆ. ಇದನ್ನು ಪೊಲೀಸ್‌ ಠಾಣೆ ಹಸ್ತಾಂತರಿಸಿ ದೂರು ನೀಡುತ್ತೇವೆ. ಯಾರಿಗೆ ವಂಚನೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ಗ್ರೇಡ್‌-2 ತಹಶೀಲ್ದಾರ್‌ ಸಂಧ್ಯಾ ತಿಳಿಸಿದರು.

ಮಧ್ಯವರ್ತಿಗಳು ಇಂತಹ ಸುಳ್ಳು ದಾಖಲಾತಿ ನೀಡಿ ಮಂಜೂರಾತಿ ದೊರಕಿಸಿಕೊಡುತ್ತಿದ್ದಾರೆ. ಸರ್ಕಾರದ ತನಿಖೆ ಸಂದರ್ಭದಲ್ಲಿ ನಕಲಿ ಎಂದು ಸಾಬೀತಾದರೆ ಮಂಜೂರಾತಿ ರದ್ದಾಗಿ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next