Advertisement

ಗೊರಖ್ಪುರ ಆಸ್ಪತ್ರೆ ಹಂದಿ, ನಾಯಿಗಳ ವಾಸಸ್ಥಾನ!

07:45 AM Aug 15, 2017 | Team Udayavani |

ನವದೆಹಲಿ: ಮಕ್ಕಳ ಸಾವಿನ ದುರಂತದಿಂದಾಗಿ ಗೊರಖ್ಪುರದ ಬಾಬಾ ರಾಘವ ದಾಸ್‌ ವೈದ್ಯ ಕಾಲೇಜಿನ ಕರಾಳ ರೂಪ ಬಯಲಾಗಿದೆ. ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಎಳ್ಳಷ್ಟೂ ಸ್ವತ್ಛತೆ ಇಲ್ಲ. ಪ್ರತಿ ನಿತ್ಯ ಹಂದಿ ಹಾಗೂ ನಾಯಿಗಳು ಆಸ್ಪತ್ರೆ ಪ್ರವೇಶಿಸಿ, ವಾರ್ಡ್‌ಗಳಲ್ಲೇ ಠಿಕಾಣಿ ಹೂಡುತ್ತವೆ.

Advertisement

ಘಟನೆಗೆ ಮುನ್ನ ಮಕ್ಕಳ ವಾರ್ಡ್‌ನಲ್ಲಿ ಒಂದೊಂದು ಹಾಸಿಗೆಯಲ್ಲಿ ಮೂವರು ಅಥವಾ ನಾಲ್ವರು ಮಕ್ಕಳನ್ನು ಮಲಗಿಸಲಾ ಗಿತ್ತು. ಆ ಮಟ್ಟಿನ ಹಾಸಿಗೆ ಕೊರತೆ ಇಲ್ಲಿದೆ. ಕನಿಷ್ಠ ಮೂಲ ಸೌಲಭ್ಯಗಳೂ ಇಲ್ಲದ ಆಸ್ಪತ್ರೆಗೆ ವಿವಿಧ ವೈದ್ಯಕೀಯ ಸಲಕರಣೆ ಪೂರೈಸುವ ಗುತ್ತಿಗೆದಾರರಿಗೆ ಸಮರ್ಪಕವಾಗಿ ಹಣ ಪಾವತಿಸುತ್ತಿಲ್ಲ. ಆದರೂ ಸರ್ಕಾರ ಈ ಬಗ್ಗೆ ಗಮನಹರಿಸಿಲ್ಲ.

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಒಂದೆಡೆಯಾ ದರೆ, ಇನ್ನೊಂದೆಡೆ ವೈದ್ಯರು ತಮ್ಮ “ಖಾಸಗಿ ದುಡಿಮೆ’ಗೆ ಸರ್ಕಾರಿ ಕ್ವಾಟ್ರಸ್‌ಗಳನ್ನೇ ಕ್ಲಿನಿಕ್‌ಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಒಬ್ಬೊಬ್ಬ ವೈದ್ಯರ ಖಾಸಗಿ ಕ್ಲಿನಿಕ್‌ಗಳು ಕನಿಷ್ಠ ಮೂರು-ನಾಲ್ಕು ಹಾಸಿಗೆಗಳನ್ನು ಒಳ ಗೊಂಡಿವೆ. ಆದರೆ ಆಸ್ಪತ್ರೆಯಲ್ಲಿ ಮಕ್ಕಳು ಸಾವಿನ ದವಡೆಗೆ ಸಿಲುಕಿದ್ದಾಗ ಒಬ್ಬ ವೈದ್ಯ 
ಕೂಡ ತಮ್ಮ ಖಾಸಗಿ ಕ್ಲಿನಿಕ್‌ಗೆ ಅವರನ್ನು ಕರೆತರುವ ಕರುಣೆ ತೋರಿಲ್ಲ. ವೈದ್ಯರ ಕಳ್ಳಾಟ ದಿಂದಾಗಿ ಮಕ್ಕಳು ಬಲಿಪಶುಗಳಾಗಿದ್ದಾರೆ.

ವಜಾಗೆ ವೈದ್ಯರ ವಿರೋಧ: ಇದೇ ವೇಳೆ, ಆಮ್ಲಜನಕವಿಲ್ಲದೆ ಮಕ್ಕಳು ಕೊನೆಯುಸಿರೆಳೆ ಯುವಾಗ ತಮ್ಮ ಶಕ್ತಿ ಮೀರಿ ಪ್ರಯತ್ನಿಸಿ ಕೆಲ ಮಕ್ಕಳ ಪ್ರಾಣ ಉಳಿಸಿದ ವೈದ್ಯ ಡಾ. ಕಫೀಲ್‌ ಖಾನ್‌ ಅವರನ್ನು ಕೆಲಸದಿಂದ ವಜಾ ಗೊಳಿಸಿದ ಸರ್ಕಾರದ ಕ್ರಮಕ್ಕೆ ಏಮ್ಸ್‌ ವೈದ್ಯರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರ ತಾನು ಮಾಡುವ ತಪ್ಪುಗಳಿಗೆ ವೈದ್ಯರನ್ನು “ಬಲಿಪಶು’ ಗಳನ್ನಾಗಿ ಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. “ದುರಂತ ನಡೆದ ಗೊರಖ್ಪುರದ ಆಸ್ಪತ್ರೆಯ ಆಮ್ಲಜನಕ, ಗ್ಲೌಸ್‌ಗಳು ಇಲ್ಲದಿರುವು ದಕ್ಕೆ ವೈದ್ಯರು ಕಾರಣವೇ ಎಂದು ಪ್ರಶ್ನಿಸಿ ರುವ ವೈದ್ಯರ ಸಂಘದ ಅಧ್ಯಕ್ಷ ಡಾ. ಹರಿಜಿತ್‌ ಸಿಂಗ್‌ ಅವರು, ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ.

ಆದರೆ ಪ್ರತಿ ಬಾರಿ ಸರ್ಕಾರ ನಿರ್ಲಕ್ಷ್ಯ ತೋರುತ್ತದೆ. ಆಗೆಲ್ಲಾ ವೈದ್ಯರೇ ಹರಕೆಯ ಕುರಿಗಳಾಗುತ್ತಾರೆ,’ ಎಂದು ಆರೋಪಿಸಿದ್ದಾರೆ. ಅಲ್ಲದೆ ಈ ಘಟನೆಗೆ ಉತ್ತರ ಪ್ರದೇಶ ಸರ್ಕಾರವೇ ಸಂಪೂರ್ಣ ಹೊಣೆ ಎಂದು ದೂರಿದ್ದಾರೆ.

Advertisement

ವಿಚಾರಣೆಗೆ ನಿರಾಕರಿಸಿದ ಸುಪ್ರೀಂ: ಗೊರಖ್ಪುರ ದುರಂತಕ್ಕೆ ಸಂಬಂಧಿಸಿ ಸ್ವಯಂಪ್ರೇರಿ ತವಾಗಿ ವಿಚಾರಣೆ ನಡೆಸಬೇಕು ಎಂಬ ವಕೀಲರೊಬ್ಬರ ವಾದವನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಳ್ಳಿಹಾಕಿದೆ. ಈ ಕುರಿತು ನೀವು ಅಲಾಹಾಬಾದ್‌ ಹೈಕೋರ್ಟ್‌ ಮೊರೆ ಹೋಗಿ ಎಂದು ನ್ಯಾಯಪೀಠ ಸೂಚಿಸಿದೆ. ಈ ನಡುವೆ ಘಟನೆ ಬಗ್ಗೆ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಇದೇ ವೇಳೆ ದುರಂತಕ್ಕೆ ಸ್ಪಂದಿ ಸಿರುವ ಸಂಸದ ವರುಣ್‌ ಗಾಂಧಿ, ಸುಲ್ತಾನ್‌ಪುರ ಜಿಲ್ಲೆಯಲ್ಲಿ ಸುಸಜ್ಜಿತ ಮಕ್ಕಳ ಆಸ್ಪತ್ರೆ ನಿರ್ಮಿಸಲು ತಮ್ಮ ಸಂಸದರ ಅಭಿವೃದ್ಧಿ ನಿಧಿಯಿಂದ 5 ಕೋಟಿ ರೂ. ಅನುದಾನ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next