Advertisement

ವೀಕೆಂಡ್‌ ಲಾಕ್‌ಡೌನ್‌ಗೆ ಮುಕಿ: ಹೊಸಬರ ಸಿನ್ಮಾ ರಿಲೀಸ್‌ಗೆ ಇದು ಸಕಾಲ

11:57 AM Jan 22, 2022 | Team Udayavani |

ಜನಾಕ್ರೋಶಕ್ಕೆ ಮಣಿದ ಸರ್ಕಾರ ರಾಜ್ಯಕ್ಕೆ ವಿಧಿಸಿದ್ದ ವೀಕೆಂಡ್‌ ಲಾಕ್‌ಡೌನ್‌ ಅನ್ನು ತೆರವುಗೊಳಿಸಿದೆ. ಈ ಮೂಲಕ ಬೇರೆ ಬೇರೆ ಕ್ಷೇತ್ರಗಳ ಮಂದಿಯ ಮೊಗದಲ್ಲಿ ನಗು ಮೂಡಿದೆ. ಅದರಲ್ಲಿ ಚಿತ್ರರಂಗ ಕೂಡಾ ಒಂದು. ಸಾಮಾನ್ಯವಾಗಿ ಸಿನಿಮಾಗಳಿಗೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರೋದು ವೀಕೆಂಡ್‌ನಲ್ಲಿ. ಆದರೆ, ವೀಕೆಂಡ್‌ನಲ್ಲೇ ಲಾಕ್‌ಡೌನ್‌ ಆಗಿರುವಾಗ ಸಿನಿಮಾ ಯಾಕೆ ಬಿಡುಗಡೆ ಮಾಡಬೇಕು ಎಂಬ ನಿರ್ಧಾರಕ್ಕೆ ಸಿನಿಮಾ ಮಂದಿ ಬಂದಿದ್ದರು. ಅದೇ ಕಾರಣದಿಂದ ಹೊಸಬರು ಕೂಡಾ ತಮ್ಮ ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದರು. ಈಗ ಹೊಸಬರು ತಮ್ಮ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಳ್ಳಬಹುದು. ಹಾಗೆ ನೋಡಿದರೆ ಹೊಸಬರ ಸಿನಿಮಾ ಬಿಡುಗಡೆಗೆ ಇದು ಸಕಾಲ.

Advertisement

ಸದ್ಯ ಚಿತ್ರಮಂದಿರಗಳಲ್ಲಿ ಶೇ 50 ಸೀಟು ಭರ್ತಿಗೆ ಅವಕಾಶವಿದೆ. ಶೇ 50 ಅನ್ನೋದು ಅನೇಕರಿಗೆ ಅಸಮಾಧಾನವಾಗಿರಬಹುದು. ಆದರೆ, ವಾಸ್ತವವಾಗಿ ಹೊಸಬರ ಸಿನಿಮಾಗಳಿಗೆ ಶೇ 50 ಸೀಟು ಭರ್ತಿಯಿಂದ ಹೆಚ್ಚಿನ ತೊಂದರೆಯಾಗಲ್ಲ. ಸಾಮಾನ್ಯವಾಗಿ ಸ್ಟಾರ್‌ ಸಿನಿಮಾಗಳು ಬಿಡುಗಡೆಯಾದಾಗ ಒಂದು ವಾರ ಹೌಸ್‌ಫ‌ುಲ್‌ ಪ್ರದರ್ಶನವಾಗುತ್ತದೆ. ಆ ನಂತರ ವೀಕೆಂಡ್‌ ಬಿಟ್ಟು ಮಿಕ್ಕ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಹೌಸ್‌ಫ‌ುಲ್‌ ಪ್ರದರ್ಶನ ಕಾಣೋದು ಕಡಿಮೆ. ಅದರಲ್ಲೂ ಹೊಸಬರ ಸಿನಿಮಾ ಹೌಸ್‌ಫ‌ುಲ್‌ ಪ್ರದರ್ಶನ ಕಾಣಬೇಕಾದರೆ, ಆ ಸಿನಿಮಾ ಬಿಡುಗಡೆಯಾಗಿ, ಅದರ ಬೆನ್ನಿಗೆ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರಬೇಕು. ಸಿನಿಮಾ ಚೆನ್ನಾಗಿದೆ ಎಂಬ ಮಾತು ಹರಿದಾಡಿದಾಗ ಸಹಜವಾಗಿಯೇ ಜನರಿಗೆ ಕುತೂಹಲ ಹೆಚ್ಚಾಗಿ ಸಿನಿಮಾ ಮಂದಿರದತ್ತ ಹೋಗುತ್ತಾರೆ. ಹಾಗಾಗಿ, ಶೇ 50 ಹೊಸಬರಿಗೆ ತೊಂದರೆಯಾಗಲ್ಲ.

ಅದಕ್ಕೆ ಒಳ್ಳೆಯ ಉದಾಹರಣೆ ಎಂದರೆ, “ಆ್ಯಕ್ಟ್ 1978′ ಚಿತ್ರ. ಮೊದಲ ಲಾಕ್‌ಡೌನ್‌ ತೆರವುಗೊಂಡು ಚಿತ್ರಮಂದಿರಗಳಲ್ಲಿ ಶೇ 50ಕ್ಕೆ ಅನುಮತಿ ಸಿಕ್ಕ ಬಳಿಕ ಬಿಡುಗಡೆಯಾದ ಈ ಚಿತ್ರ ಯಶಸ್ವಿಯಾಯಿತು. ಅದಕ್ಕೆ ಕಾರಣ ಆ ಸಿನಿಮಾದ ಕಥೆ ಹಾಗೂ ಚಿತ್ರಕ್ಕೆ ಸಿಕ್ಕ ಪ್ರಚಾರ. ಈ ಎಲ್ಲಾ ಕಾರಣಗಳಿಂದಾಗಿ ಜನ ಚಿತ್ರಮಂದಿರಕ್ಕೆ ಬಂದರು. ಹಾಗೆ ನೋಡಿದರೆ, ಆಗ ಕೊರೊನಾ ಭಯ ಜನರಲ್ಲಿ ಹೆಚ್ಚಿದ್ದ ಸಮಯ.

ಇದನ್ನೂ ಓದಿ:ನಟಿ Riya Suman ಹಾಟ್ & ಬ್ಯೂಟಿ ಲುಕ್ಸ್

ಆದರೆ, ಈಗ ಜನರಲ್ಲಿ ಕೊರೊನಾ ಭಯ ಕಡಿಮೆಯಾಗಿದೆ. ಮೂರನೇ ಅಲೆಯ ತೀವ್ರತೆ ಕೂಡಾ ಹೆಚ್ಚಿಲ್ಲ. ಸಾರಿಗೆ, ಹೋಟೆಲ್‌, ಮಾರುಕಟ್ಟೆ … ಎಲ್ಲಾ ಕಡೆ ಜನ ತಮ್ಮ ಮುನ್ನೆಚ್ಚರಿಕೆಯೊಂದಿಗೆ ಓಡಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಮಾತುಗಳು ಕೇಳಿಬಂದರೆ ಈ ಬಾರಿಯೂ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲು ಹಿಂದೇಟು ಹಾಕುವುದಿಲ್ಲ. ಹಾಗಾಗಿ, ಹೊಸಬರಿಗೆ ತಮ್ಮ ಸಿನಿಮಾ ಬಿಡುಗಡೆ ಮಾಡಲು ಇದು ಸಕಾಲ.

Advertisement

ಪರಭಾಷಾ ಸಿನಿಮಾಗಳು ಕಾಯುತ್ತಿವೆ….

ಕನ್ನಡದ ಸ್ಟಾರ್‌ ನಟರ ಸಿನಿಮಾಗಳ ಜೊತೆ ಪರಭಾಷೆಯ ಬಿಗ್‌ ಬಜೆಟ್‌ ಸಿನಿಮಾಗಳು ಕೂಡಾ ದೊಡ್ಡ ಮಟ್ಟದಲ್ಲಿ ರಿಲೀಸ್‌ ಆಗಲಿವೆ. “ಆರ್‌ಆರ್‌ಆರ್‌’, “ರಾಧೆ ಶ್ಯಾಮ್‌’ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದವು. ಆ ಚಿತ್ರಗಳು ಶೇ 100 ಸೀಟು ಭರ್ತಿಗೆ ಅವಕಾಶ ಸಿಕ್ಕ ಕೂಡಲೇ ಬರಲಿವೆ. ಸಹಜವಾಗಿಯೇ ಬೇರೆ ಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್‌ ಆಗುವುದರಿಂದ ಮತ್ತೆ ಹೊಸಬರಿಗೆ ಥಿಯೇಟರ್‌ ಸಮಸ್ಯೆ ಕಾಡಲಿದೆ

Advertisement

Udayavani is now on Telegram. Click here to join our channel and stay updated with the latest news.

Next