Advertisement

Dams; ದೇಶಾದ್ಯಂತ ಉತ್ತಮ ಮಳೆ:ಡ್ಯಾಂಗಳಲ್ಲಿ ನೀರಿನ ಮಟ್ಟ ಏರಿಕೆ

12:06 AM Jul 10, 2024 | Team Udayavani |

ಹೊಸದಿಲ್ಲಿ: ಪ್ರಸಕ್ತ ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಉತ್ತಮ ಮಳೆಯಾಗುತ್ತಿದ್ದಂತೆ ಕಳೆದ ವರ್ಷದ ಸೆಪ್ಟಂಬರ್‌ ಬಳಿಕ ಇದೇ ಮೊದಲ ಬಾರಿಗೆ ದೇಶದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ ಎಂದು ಕೇಂದ್ರ ಜಲ ಆಯೋಗ ಹೇಳಿದೆ.

Advertisement

ಹಿಂದಿನ ವಾರದಿಂದ ಶೇ.2ರಷ್ಟು ಕನಿಷ್ಠ ಏರಿಕೆ ಹೊರತಾಗಿಯೂ, ಸಂಗ್ರಹಣ ಸಾಮರ್ಥ್ಯವು ಶೇ.73ರಷ್ಟಿದ್ದಾಗ ಸೆ.29ರಿಂದ ನಿರಂತರ ನೀರಿನ ಮಟ್ಟವು ಕುಸಿತದಿಂದ ಪಾರಾಗು ತ್ತಿರುವುದನ್ನು ಇದು ಸೂಚಿಸುತ್ತದೆ ಎಂಬುದು ವರದಿಯಿಂದ ತಿಳಿದು ಬರುತ್ತದೆ. ದೇಶದ 150 ಜಲಾಶಯಗಳ ಲೈವ್‌ ಸ್ಟೋರೇಜ್‌ ಸ್ಥಿತಿಯನ್ನು ನಿರ್ವಹಣೆ ಮಾಡುವ ಸಿಡಬ್ಲೂéಸಿ, ಜುಲೈ 4ರಂದು ತನ್ನ ಹೊಸ ಬುಲೆಟಿನ್‌ ಬಿಡುಗಡೆ ಮಾಡಿದೆ.

ಆಯೋಗದ ವರದಿಯ ಪ್ರಕಾರ, 150 ಜಲಾಶಯಗಳ ಪೈಕಿ 20 ಜಲಾಶಯಗಳು ಜಲವಿದ್ಯುತ್‌ ಯೋಜನೆಗಳಿಗೆ ಮೀಸಲಾಗಿದ್ದು, 35 ಶತಕೋಟಿ ಕ್ಯುಬಿಕ್‌ ಮೀಟರ್‌ನಷ್ಟು(ಬಿಸಿಎಂ) ಲೈವ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿವೆ. ಈ ಜಲಾಶಯಗಳಲ್ಲಿ  ಲೈವ್‌ ಸ್ಟೋರೇಜ್‌ನ ಶೇ.22ರಷ್ಟು ನೀರು ಸಂಗ್ರಹವಿದೆ ಎಂದು ಹೇಳಿದೆ.

ದಕ್ಷಿಣ ಭಾರತದಲ್ಲಿ ಎಷ್ಟಿದೆ ನೀರು?: ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಒಟ್ಟು 42 ಜಲಾಶಯಗಳಿದ್ದು, 53.334 ಶತಕೋಟಿ ಕ್ಯೂಬಿಕ್‌ ಮೀಟರ್‌(ಬಿಸಿಎಂ) ಲೈವ್‌ ಸ್ಟೋರೇಜ್‌ ಸಾಮರ್ಥ್ಯವಿದೆ. ಈ ಒಟ್ಟು ಸಾಮರ್ಥ್ಯದ ಪೈಕಿ 10.152 ಬಿಸಿಎಂ(ಶೇ.19.03) ಬಿಸಿಎಂ ಇದೆ. ಇದು ಕಳೆದ ವರ್ಷ ಶೇ.19.43  ಮತ್ತು ಸಾಮಾನ್ಯ ಮಟ್ಟವಾದ ಶೇ.24ಗಿಂತಲೂ ಕಡಿಮೆಯಾಗಿದೆ! ಇಷ್ಟಾಗಿಯೂ, ಮಹಾನದಿ, ಕಾವೇರಿ, ಬ್ರಹ್ಮಣಿ ಮತ್ತು ಬೈತರಿಣಿ ನದಿಗಳಲ್ಲಿ ನೀರಿನ ಪ್ರಮಾಣ ಕೊರತೆ ವರದಿಯಾಗಿದೆ. ವಿಶೇಷವಾಗಿ ಪೂರ್ವಾಭಿಮುಖೀಯಾಗಿ ಹರಿಯುವ ನದಿಗಳಲ್ಲಿ ಹೆಚ್ಚಿನ ನೀರಿನ ಕೊರತೆಯನ್ನು ಕಾಣಬಹುದಾಗಿದೆ ಎಂದು ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next