Advertisement

ಹೊಸ ಲುಕ್‌ನಲ್ಲಿ ಗೋಲ್ಡನ್‌ ಸ್ಟಾರ್‌!

08:43 AM Jul 03, 2020 | Lakshmi GovindaRaj |

ಗೋಲ್ಡನ್‌ ಸ್ಟಾರ್‌ ಗಣೇಶ್‌ ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ. ಹೌದು! ಸಿಂಪಲ್ ಸುನಿ ನಿರ್ದೇಶನದ  “ದಿ ಸ್ಟೋರಿ ಆಫ್ ರಾಯಗಢ’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಗಣೇಶ್‌ ಮೊದಲ ಬಾರಿಗೆ ಡಾರ್ಕ್‌ ಶೇಡ್‌ನಲ್ಲಿ ಗಡ್ಡ, ಹುರಿ ಮೀಸೆ ಬಿಟ್ಟು  ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ಲುಕ್‌ಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

ಸದಾ ಒಂದಿಲ್ಲೊಂದು ನಗುತ್ತಾ ಪಾತ್ರ ಮಾಡುತ್ತಿದ್ದ, ಗಣೇಶ್‌ ಮೊದಲ ಬಾರಿಗೆ “ದಿ ಸ್ಟೋರಿ ಆಫ್ ರಾಯಗಢ’ ಚಿತ್ರದಲ್ಲಿ ರಗಡ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ನಡೆಯುವ ಕಥೆಯನ್ನು ಈ ಚಿತ್ರ ಹೊಂದಿರಲಿದ್ದು, ಸಿನಿಮಾ ಟೈಟಲ್‌ನಷ್ಟೇ ಸ್ಟೋರಿ ಮಾಸ್ ಆಗಿದೆ. ಅಲ್ಲದೇ 2022ಕ್ಕೆ ಚಿತ್ರವು ಸೆಟ್ಟೇರಲಿದೆ.

ಇನ್ನು ಜನ್ಮದಿನದ  ಖುಷಿಯಲ್ಲಿರುವ ಗಣೇಶ್ ಟ್ವೀಟರ್‌ನಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡು “The story of Rayagada”  The untold story…….The new definition of mass by @SimpleSuni n team ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next