Advertisement

ಫ್ರೆಂಚ್‌ ಚಿತ್ರ ಪಾರ್ಟಿಕಲ್ಸ್‌ ಗೆ ಪ್ರಶಸ್ತಿ; ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ತೆರೆ

09:30 AM Nov 29, 2019 | Nagendra Trasi |

ಪಣಜಿ(ಉದಯವಾಣಿ ಪ್ರತಿನಿಧಿಯಿಂದ): ಗೋವಾದಪಣಜಿಯಲ್ಲಿ ನ.೨೦ ರಿಂದಆರಂಭವಾಗಿದ್ದ ೫೦ ನೇಭಾರತೀಯಅಂತಾರಾಷ್ಟ್ರೀಯಚಿತ್ರೋತ್ಸವಕ್ಕೆಗುರುವಾರತೆರೆಬಿದ್ದಿದ್ದು, ಬ್ಲೇಸ್‌ ಹ್ಯಾರಿಸನ್‌ ನಿರ್ದೇಶನದಫ್ರೆಂಚ್‌ ಭಾಷೆಯ ‘ಪಾರ್ಟಿಕಲ್ಸ್‌’ ಈ ಬಾರಿಯಗೋಲ್ಡನ್‌ ಪೀಕಾಕ್‌ ಪ್ರಶಸ್ತಿಯನ್ನು ಗಳಿಸಿದೆ. ಪ್ರಶಸ್ತಿಯು ೪೦ ಲಕ್ಷರೂ. ನಗದು,  ಪಾರಿತೋಷಕ ಹಾಗೂ ಅಭಿನಂದನಾ ಪತ್ರವನ್ನು ಒಳಗೊಂಡಿರಲಿದೆ. ಈ  ಪ್ರಶಸ್ತಿಯ ಮೊತ್ತ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಸಮನಾಗಿ ಹಂಚಲಾಗುವುದು.

Advertisement

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಮಲಯಾಳಂನ ಜಲ್ಲಿಕಟ್ಟು ನಿರ್ದೇಶನದಲಿ ಜೋಜೋಸ್‌ ಪೆಲ್ಲಿ ಸೆರಿ ಆಯ್ಕೆಯಾಗಿದ್ದರೆ, ಬ್ರೆಜಿಲಿಯನ್‌ ಸಿನಿಮಾ ಮಾರಿಗೆಲ್ಲಾದಲ್ಲಿ ಕಾರ್ಲೋ ಸ್ಮಾರಿಗೆಲ್ಲಾ ಪಾತ್ರವನ್ನು ನಿಭಾಯಿಸಿದ್ದ ಸಿಯೊಜಾರ್ಜ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಮರಾಠಿ ಚಿತ್ರಮಾಯ್‌ ಘಾತ್ :ಕ್ರೈಮ್‌ ನಂ. ೧೦೩/೨೦೦೫’ ಚಿತ್ರದಲ್ಲಿನ ನಟನೆಗಾಗಿ ಉಷಾಜಾಧವ್‌ ರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಪೀಮಸೀಡನ್‌ ಅವರಬಲೂನ್‌ ಸಿನಿಮಾಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ, ಅಮಿನ್‌ ಸಿದಿಬೊ ಮೆದಿಸಿನ್‌ ಮತ್ತು ಮಾರಿಯಸ್‌ ಒಲ್ಟೇನೊ ಅವರಿಗೆ ಚೊಚ್ಚಲ ಸಿನಿಮಾ ನಿರ್ದೇಶನ ಪ್ರಶಸ್ತಿ ನೀಡಲಾಗಿದೆ. ಅಬುಲೈಲಾ ಮತ್ತು ಮಾನ್ಟ್ಸರ್ಸ್‌ ಅವರ ಚಿತ್ರಗಳಾಗಿದ್ದವು.

Advertisement

ಅತ್ಯುತ್ತಮ ಸಂಗೀತಕ್ಕಾಗಿ ವಿಶೇಷ ಪ್ರಶಂಸೆಗೆ ಗುಜರಾತಿಯ ಅಭಿಷೇಕ್‌ ಷಾ ನಿರ್ದೇಶನದ ಹೆಲರೋ ಚಿತ್ರ ಪಾತ್ರವಾಯಿತು.  ರುವಾಂಡಾ ಚಿತ್ರಕ್ಕೆ ಐಸಿಎಫ್‌ಟಿ-ಯುನೆಸ್ಕೊ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ನಿರ್ದೇಶಕರಿಗೆ 15 ಲಕ್ಷರೂ. ನಗದು, ಅತ್ಯುತ್ತಮ ನಟ ಮತ್ತು ನಟಿಗೆ ತಲಾ ಹತ್ತು ಲಕ್ಷ ರೂ. ನಗದು, ಪಾರಿತೋಷಕ ಹಾಗೂ ಅಭಿನಂದನಾ ಪತ್ರ ನೀಡಲಾಗುವುದು.

ಅದ್ದೂರಿಯ ತೆರೆ

ಒಂಬತ್ತು ದಿನಗಳಲ್ಲಿ 76 ದೇಶಗಳ 200ಕ್ಕೂ ಚಲನಚಿತ್ರಗಳನ್ನು ಉಣಬಡಿಸಿದ್ದ ಚಿತ್ರೋತ್ಸವಕ್ಕೆ ಅದ್ದೂರಿಯ ತೆರೆಬಿದ್ದಿತು. ಈ ಮೂಲಕ ಚಿತ್ರೋತ್ಸವದ ಸುವರ್ಣ ಅಧ್ಯಾಯ ಇತಿಹಾಸದ ಪುಟಕ್ಕೆ ಸೇರಿತು.

ಡಾ. ಶ್ಯಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌, ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಕೇಂದ್ರ ಸರಕಾರದ ರಾಜ್ಯಸಚಿವ ಬಬುಲ್ಸುಪ್ರಿಯೊ ಮತ್ತಿತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ, ಹಿರಿಯ ನಟ ಪ್ರೇಮ್‌ ಚೋಪ್ರಾ, ಚಿತ್ರ ನಿರ್ದೇಶಕ ಟಕಾ ಶಿಮಿಕೆ, ವಿಜಯ್‌ ದೇವರಕೊಂಡ, ಆನಂದ್‌ ಎಲ್. ರಾಯ್‌ ಅವರು ರೆಡ್ಕಾರ್ಪೆಟ್‌ ನಲ್ಲಿ ನಡೆದು ಮೆರುಗು ತುಂಬಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಮಿತ್‌ ಖಾರೆ, ಮುಂದಿನ ವರ್ಷದ ಉತ್ಸವವನ್ನು ಖ್ಯಾತ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ನೆನಪಿನಲ್ಲಿ ಆಚರಿಸಲಾಗುವುದು. ಯಾಕೆಂದರೆ ಆ ವರ್ಷ ರೇ ಅವರ ಜನ್ಮ ಶತಮಾನೋತ್ಸವ ವರ್ಷ ಎಂದು ಹೇಳಿದರು.

ಸುಮಾರು 12 ಸಾವಿರ ಮಂದಿ ಪ್ರತಿನಿಧಿಗಳು ಒಂಬತ್ತು ದಿನಗಳ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು.

ಇಳಯರಾಜ, ಪ್ರೇಮ್‌ ಚೋಪ್ರಾ, ನಿರ್ದೇಶಕಿ ಮಂಜುಬೋರಾ, ನಟ ಅರವಿಂದ ಸ್ವಾಮಿ ಹಾಗೂ ಹೌಬಂಪಬನ್‌ ಕುಮಾರ್  ಅವರನ್ನುಸನ್ಮಾನಿಸಲಾಯಿತು. ನಟಿಸೋನಾಲ್‌ ಕುಲಕರ್ಣಿ, ಕುನಾಲ್‌ ಕಪೂರ್‌ ಕಾರ್ಯಕ್ರಮನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಮನೋಹರ್‌ ಐಗನೋಕರ್‌, ಚಂದ್ರಕಾಂತ್‌ ಕವಲೇಕರ್‌, ಸಂಸದೆ ರೂಪಾ ಗಂಗೂಲಿ ಮತ್ತಿತರರು ಭಾಗವಹಿಸಿದ್ದರು. ಇಫಿಸ್ಟೀರಿಂಗ್‌ ಸಮಿತಿಯ ಷಾಜಿ ಕರುಣ್‌, ರಾಹುಲ್‌ ರವಾಯ್‌, ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದ ತೀರ್ಪುಗಾರರಾದ ಜಾನ್‌ ಬೆಲಿ, ರಾಬಿನ್‌ ಕಂಪಿಲೊ, ರಮೇಶ್‌ ಸಿಪ್ಪಿಸಹ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next