Advertisement

Kasaragod ಎಡನೀರು ಕೇಶವಾನಂದ ಭಾರತೀ ಶ್ರೀಗಳ ಮೊಕದ್ದಮೆಯ ಸುವರ್ಣ ಮಹೋತ್ಸವ

11:57 PM Sep 02, 2023 | Team Udayavani |

ಕಾಸರಗೋಡು: ಸಂವಿಧಾನದ ಮೂಲಭೂತ ಘಟಕಗಳನ್ನು ಅದಲು ಬದಲುಗೊಳಿಸುವ ತಿದ್ದುಪಡಿಗಳನ್ನು ತರಬಾರದೆಂಬ ಅತೀ ಪ್ರಾಮುಖ್ಯವಾದ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಕಾರಣಕರ್ತರಾದ ಎಡನೀರು ಮಠಾಧಿಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಮೊಕದ್ದಮೆಯ ಸುವರ್ಣ ಮಹೋತ್ಸವ ಆಚರಣೆ ಶನಿವಾರ ಎಡನೀರು ಮಠದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಭೂ ಪರಿಷ್ಕರಣೆ ಕಾನೂನಿಗೆ ಸಂಬಂ ಧಿಸಿ ಕೇರಳ ಸರಕಾರವನ್ನು ವಿರೋ ಧಿಯನ್ನಾಗಿ ಮಾಡಿ 1970ರಲ್ಲಿ ಅಂದಿನ ಎಡನೀರು ಮಠಾ ಧೀಶರಾದ ಕೇಶವಾನಂದ ಭಾರತೀ ಸ್ವಾಮೀಜಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್‌ ಅಪೀಲ್‌ ಸಲ್ಲಿಸಿದ್ದರು. ಅನಂತರ ಕೆಲವು ವರ್ಷಗಳ ಕಾಲ ನಡೆದ ವಾದದ ಬಳಿಕ 1973 ಎಪ್ರಿಲ್‌ 24ರಂದು ಸರ್ವೋಚ್ಚ ನ್ಯಾಯಾಲಯವು ಅವರಿಗೆ ಪೂರಕವಾಗಿ ತೀರ್ಪು ಕಲ್ಪಿಸಿತು. ಅದರಂತೆ ಅದರ ಸಂತಸವಾಗಿ ಸುವರ್ಣ ಮಹೋತ್ಸವನ್ನು ಆಚರಿಸಲಾಯಿತು. ಸುವರ್ಣ ಮಹೋತ್ಸವ ಕಾರ್ಯಕ್ರಮಗಳು ಒಂದು ವರ್ಷಗಳ ಕಾಲ ಮುಂದುವರಿಯಲಿದೆ.

ಕಾರ್ಯಕ್ರಮವನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾ ಧೀಶ ಸರಸ ವೆಂಕಟನಾರಾಯಣ ಭಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ, ನ್ಯಾಯವಾದಿ ಎಂ. ನಾರಾಯಣ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧಿಧೀಶ ಎಂ.ನಾಗರೇಶ್‌ ಪ್ರಧಾನ ಭಾಷಣ ಮಾಡಿದರು. ಎಡನೀರು ಮಠಾ ಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಸಂಘಟನಾ ಸಮಿತಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಕೆ.ಆರ್‌. ಆಚಾರ್ಯ ಸ್ವಾಗತಿಸಿದರು. ಸಂಘಟನ ಕಾರ್ಯದರ್ಶಿ ನ್ಯಾಯವಾದಿ ಕೆ. ಮುರಳೀಧರ ಬಳ್ಳಕ್ಕುರಾಯ ವಂದಿಸಿದರು.

ಕೇಶವಾನಂದ ಭಾರತೀ ಮೊಕದ್ದಮೆ ಉಂಟು ಮಾಡಿದ ಸ್ವಾ ಧೀನ ಎಂಬ ವಿಷಯದ ಕುರಿತು ಕರ್ನಾಟಕದ ಮಾಜಿ ಅಡ್ವಕೇಟ್‌ ಜನರಲ್‌ ಉದಯ ಹೊಳ್ಳ, ಕೇರಳದ ಮಾಜಿ ಡೈರೆಕ್ಟರ್‌ ಜನರಲ್‌ ಪ್ರೊಸಿಕ್ಯೂಟರ್‌, ನ್ಯಾಯವಾದಿ ಅಸಫ್‌ ಅಲಿ ತರಗತಿ ನಡೆಸಿದರು. ಮಂಗಳೂರು ಬಾರ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಪೃಥ್ವಿರಾಜ್‌ ಸ್ವಾಗತಿಸಿದರು. ಕಾಸರಗೋಡು ಬಾರ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಕೆ. ಮಣಿಕಂಠನ್‌ ನಂಬ್ಯಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next