ತೀರ್ಥಹಳ್ಳಿ:ಆಗುಂಬೆ ಘಾಟಿಯಲ್ಲಿ ವಾಹನಗಳು ಕೆಟ್ಟ ನಿಂತ ಪರಿಣಾಮ ಭಾನುವಾರ(ಡಿ.22) ರಸ್ತೆಯಲ್ಲಿ ವಾಹನ ಸವಾರರ ಪರದಾಡುವಂತಾಗಿದೆ.
ಆಗುಂಬೆ ಘಾಟಿಯಲ್ಲಿ ಎರಡು ಮೂರು ವಾಹನಗಳು ಕೆಟ್ಟು ನಿಂತ ಪರಿಣಾಮ ವಾಹನಗಳ ಸಂಚಾಕ್ಕೆ ತೊಂದರೆ ಉಂಟಾಗಿದೆ.
ಘಾಟಿಯಲ್ಲಿ ವಾಹನಗಳು ಕೆಟ್ಟನಿಂತ ಪರಿಣಾಮ ಟ್ರಾಫಿಕ್ ಜ್ಯಾಮ್ ನಿಂದ ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಘಾಟಿಯಲ್ಲೇ ವಾಹನಗಳು ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವಂತಾಗಿದೆ.ಘಾಟಿಯ ಎರಡನೇಯ ತಿರುವು ಮತ್ತು ಐದನೇ ತಿರುವಿನಲ್ಲಿ ಎರಡೆರಡು ಕಾರುಗಳು ಕೆಟ್ಟು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಆಗಿದೆ ಪ್ರತಿ ಶನಿವಾರ ಮತ್ತು ಭಾನುವಾರ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ದಟ್ಟವಾಗಿರುವುದರಿಂದ ಇಂದು ಭಾನುವಾರ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ.
ಆಗುಂಬೆ ಪೊಲೀಸರು ಸಹ ವಾಹನ ಸಂಚಾರ ಸುಗಮಗೊಳಿಸಲು ಯತ್ನಿಸುತ್ತಿದ್ದರೂ ವಾಹನ ಸಂಚಾರ ನಿಯಂತ್ರಣಗೊಳ್ಳುತ್ತಿಲ್ಲ. ಇದರಿಂದ ಗಂಟೆ ಗಟ್ಟಲೆ ಕಾಯುವಂತಾಗಿದೆ ಎಂದು ವಾಹನ ಸವಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.