ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಿಂದ ಅನಿರೀಕ್ಷಿತವಾಗಿ ಅರ್ಧದಲ್ಲೇ ಆಚೆ ಬಂದಿದ್ದಕ್ಕೆ ಕೊನೆಗೂ ಗೋಲ್ಡ್ ಸುರೇಶ್ (Gold Suresh) ಅವರೇ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಆಟದಿಂದ ಗಮನ ಸೆಳೆದಿದ್ದ ಸುರೇಶ್ ಅವರು ಅರ್ಧದಲ್ಲೇ ಮನೆ ಬಿಟ್ಟು ಆಚೆ ಬಂದಿದ್ದರು. ಅವರು ಹೊರಗೆ ಬಂದ ಕಾರಣಕ್ಕೆ ನಾನಾ ರೀತಿಯ ಮಾತುಗಳು ಕೇಳಿ ಬಂದಿತ್ತು.
ಅವರ ತಂದೆ ನಿಧನರಾಗಿದ್ದಾರೆ ಎನ್ನುವ ಮಾತುಗಳು ಹರಿದಾಡಿತ್ತು. ಇದೀಗ ಸುರೇಶ್ ಅವರೇ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ. ʼಕಲರ್ಸ್ ಕನ್ನಡʼ ಲೈವ್ನಲ್ಲಿ ಬಂದು ಮಾತನಾಡಿ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ.
“ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ನನ್ನ ಪತ್ನಿಗೆ ನನ್ನ ಬ್ಯುಸಿನೆಸ್ ನೋಡಿಕೊಳ್ಳಲು ಹೇಳಿ ಹೋಗಿದ್ದೆ. ನಾನು ನನ್ನದೇ ಆದ ಬ್ಯುಸಿನೆಸ್ ಮಾಡುತ್ತಿದ್ದೇನೆ. ಅದನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಆದರೆ ನನ್ನ ಪತ್ನಿಗೆ ಬ್ಯುಸಿನೆಸ್ ಹ್ಯಾಂಡಲ್ ಮಾಡಲು ಆಗಿಲ್ಲ. ಕೆಲಸ ಒತ್ತಡದಿಂದಾಗಿ ಅದು ಅವರಿಂದ ಸಾಧ್ಯವಾಗಿಲ್ಲ. ಅವರಿಗೆ ಗೊಂದಲ ಉಂಟಾಗಿತ್ತು. ಹಾಗಾಗಿ ನಾನು ಹೊರಗೆ ಬಂದು ಅದನ್ನು ನೋಡಿಕೊಳ್ಳಬೇಕಿತ್ತು. ಹಾಗಾಗಿ ಹೊರಗಡೆ ಬರಬೇಕಾಯಿತು ಎಂದು ಸುರೇಶ್ ಹೇಳಿದ್ದಾರೆ.
ದೊಡ್ಮನೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಹನುಮಂತು, ಧನರಾಜ್, ತ್ರಿವಿಕ್ರಮ್, ಮಂಜಣ್ಣ, ಚೈತ್ರಾ ಇವರನ್ನು ಎಲ್ಲರನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇನ್ನೊಂದು ಸಲಿ ಬಿಗ್ ಬಾಸ್ ಹೋಗುವ ಅವಕಾಶ ಸಿಕ್ಕರೆ ಖಂಡಿತ ಹೋಗುತ್ತೇನೆ ಎಂದು ಸುರೇಶ್ ಹೇಳಿದ್ದಾರೆ.
ಜನ ಕೊಟ್ಟಿರುವ ಪ್ರೀತಿ ವಿಶ್ವಾಸವನ್ನು ಹಾಗೆಯೇ ಉಳಿಸಿಕೊಳ್ಳುತ್ತೇನೆ. ನನ್ನ ಕಡೆಯಿಂದ ಯಾರಿಗೆಲ್ಲ ನಿರಾಶೆ ಆಗಿದೆಯೇ ಅವರಿಗೆಲ್ಲ ನಾನು ಕ್ಷಮೆಯಾಚಿಸುತ್ತೇನೆ. ನನಗೆ ನನ್ನದೇ ಆದ ಬ್ಯುಸಿನೆಸ್ ಇದೆ. ಹಾಗಾಗಿ ನಾನು ಹೊರಗಡೆ ಬರಬೇಕಾಯಿತು ಎಂದು ಅವರು ಹೇಳಿದ್ದಾರೆ.