Advertisement

ಪಶ್ಚಿಮ ಕರಾವಳಿಯತ್ತ ಪಾಕ್‌ ಉಗ್ರರು ? ಗೋವಾ ತೀರದಲ್ಲಿ ಕಟ್ಟೆಚ್ಚರ

10:58 AM Apr 07, 2018 | udayavani editorial |

ಪಣಜಿ : ಮೀನುಗಾರಿಕೆ ಟ್ರಾಲರ್‌ ಮೂಲಕ ಭಯೋತ್ಪಾದಕರು ಗೋವೆಯ ಕಡಲ ಕಿನಾರೆಯತ್ತ ಬರುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನು ಅನುಸರಿಸಿ ಗೋವೆಯ ದೂರ ತೀರದಲ್ಲಿ ವ್ಯವಹರಿಸುತ್ತಿರುವ ನಾವೆಗಳು ಮತ್ತು ಕ್ಯಾಸಿನೋಗಳಿಗೆ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ ಎಂದು ರಾಜ್ಯದ ಬಂದರು ಸಚಿವರು ಹೇಳಿದ್ದಾರೆ.

Advertisement

ಪಶ್ಚಿಮ ಕರಾವಳಿಯನ್ನು ಗುರಿ ಇರಿಸಿಕೊಂಡು ಉಗ್ರರು ದಾಳಿ ಮಾಡಲಿದ್ದಾರೆ ಎಂಬ ಗುಪ್ತಚರ ಮಾಹಿತಿಯನ್ನು ಕೋಸ್ಟ್‌ ಗಾರ್ಡ್‌ ಪಡೆಗಳು ಹಂಚಿಕೊಂಡ ಪ್ರಕಾರ ಗೋವೆಯ ದೂರ ತೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಯಾಸಿನೋಗಳು, ಜಲ ಕ್ರೀಡಾ ನಿರ್ವಾಹಕರು, ಬಾರ್ಜ್‌ಗಳು ಮುಂತಾಗಿ ಎಲ್ಲರಿಗೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಗಿದೆ ಎಂದು ರಾಜ್ಯದ ಬಂದರು ಸಚಿವ ಜಯೇಶ್‌ ಸಾಲ್‌ಗಾಂವ್‌ಕರ್‌ ಮಾಧ್ಯಮಗಳಿಗೆ ತಿಳಿಸಿದರು.

ಈ ಕಟ್ಟೆಚ್ಚರದ ಸೂಚನೆಯು ಕೇವಲ ಗೋವೆಗೆ ಮಾತ್ರವೇ ಸೀಮಿತವಾಗಿಲ್ಲ; ಬದಲು ಇಡಿಯ ಪಶ್ಚಿಮ ಕರಾವಳಿಗೆ ಸಂಬಂಧಿಸಿದ್ದಾಗಿದೆ. ಭಯೋತ್ಪಾದಕರ ಗುರಿ ಮುಂಬಯಿ ಅಥವಾ ಗುಜರಾತ್‌ ಕರಾವಳಿ ಕೂಡ ಇರಬಹುದು. ಆದುದರಿಂದ ಪಶ್ಚಿಮ ಕರಾವಳಿಯ ಉದ್ದಕ್ಕೂ ಕಾರ್ಯನಿರ್ವಹಿಸುತ್ತಿರುವ ನಾವೆಗಳು ಮತ್ತು ಬೋಟುಗಳಿಗೆ, ಕ್ಯಾಸಿನೋಗಳಿಗೆ, ಬಾರ್ಜ್‌ಗಳಿಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ ಎಂದು ಸಾಲ್‌ಗಾಂವ್‌ಕರ್‌ ಹೇಳಿದರು. 

ಕೆಲ ಸಮಯದ ಹಿಂದೆ ಪಾಕಿಸ್ಥಾನ ಭಾರತೀಯ ಫಿಶ್ಶಿಂಗ್‌ ಟ್ರಾಲರ್‌ ಒಂದನ್ನು ವಶಕ್ಕೆ ತೆಗೆದುಕೊಂಡು ಅನಂತರದಲ್ಲಿ ಅದನ್ನು ಬಿಡುಗಡೆ ಮಾಡಿತ್ತು. ಈ ಟ್ರಾಲರ್‌ ಪಾಕಿಸ್ಥಾನದಿಂದ ಮರಳಿ ಬರುವ ವೇಳೆ ಅದು ಭಯೋತ್ಪಾದಕರನ್ನು ಒಳಗೊಂಡಿರಬಹುದು ಎಂಬ ಶಂಕೆ ಇದೆ ಎಂದು ಸಚಿವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next