Advertisement

ಪಣಜಿ: ತೆರೆದುಕೊಂಡ ಚಿತ್ರ ಜಗತ್ತು ; ಎರಡನೇ ದಿನ ಪರವಾಗಿಲ್ಲ

03:39 PM Jan 17, 2021 | Team Udayavani |

ಪಣಜಿ : ಜಗತ್ತನ್ನು ಕಾಡುತ್ತಿರುವ ಕೊರೊನಾ ಸಾಂಕ್ರಾಮಿಕಕ್ಕೆ ಲಸಿಕೆ ಸಿಕ್ಕ ಶುಭ ದಿನದಂದೇ (ಶನಿವಾರ ದೇಶಾದ್ಯಂತ ಲಸಿಕೆ ಹಾಕಿದ ದಿನ) ಗೋವಾದ ರಾಜಧಾನಿಯಲ್ಲಿ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ ಮಂದಹಾಸ ಬೀರಿದ್ದು ವಿಶೇಷ.

Advertisement

ಶನಿವಾರ ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ನಟ ಸುದೀಪ್ ಸಂಜೀವ್‌ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹೇಳಿದ ಮಾತು ಸದಾಶಯವಾದದ್ದು. ‘ಸಿನಿಮಾ ಎಂಬುದು ನ್ಯೂ ಕೊರೊನಾ, ನ್ಯೂ ಪಾಂಡೆಮಿಕ್‌ ಆಗಲಿ. ಎಲ್ಲರನ್ನೂ ಆವರಿಸಿಕೊಳ್ಳಲಿ, ಎಲ್ಲವನ್ನೂ ಆಕ್ರಮಿಸಿಕೊಳ್ಳಲಿ‘. ಈ ಹೇಳಿಕೆ ನಿಜಕ್ಕೂ ಸತ್ಯವಾಗಬೇಕು, ಸತ್ಯವಾಗಲಿ ಎಂಬುದು ಸಿನಿ ರಸಿಕರ ಮನದಾಳದ ಮಾತು.

ರವಿವಾರ ಚಿತ್ರೋತ್ಸವದ ಎರಡನೇ ದಿನ. ಈ ಬಾರಿ ಚಿತ್ರೋತ್ಸವ ಆರಂಭವಾದದ್ದೇ ವೀಕೆಂಡ್‌ನಲ್ಲಿ. ಉದ್ಘಾಟನಾ ಚಿತ್ರ ಅನದರ್‌ ರೌಂಡ್‌ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡ್ಯಾನಿಷ್‌ ಸಿನಿಮಾ ನಿರ್ದೇಶಕ ಥಾಮಸ್‌ ವಿಂಟರ್‌ ಬರ್ಗ್‌ನ ಸಿನಿಮಾ ಇದು. ಸಿನಿಮಾದಲ್ಲಿ ಕಾನ್‌ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಮಾಡ್ಸ್ ಮಿಕ್ಕೆಲ್ಸೆನ್ ಪ್ರಧಾನ ಪಾತ್ರದಲ್ಲಿರುವುದು ವಿಶೇಷ. ಆಸ್ಕರ್‌ ಪ್ರಶಸ್ತಿಗೆ ಕಳುಹಿಸಲ್ಪಟ್ಟಿರುವ ಡ್ಯಾನಿಷ್‌ ಭಾಷೆಯ ಸಿನಿಮಾ ಇದು.

ರವಿವಾರವಾದ ಕಾರಣ ಸಿನಿಮಾಹಾಲ್‌ಗಳಲ್ಲಿ ಸ್ವಲ್ಪ ಪ್ರೇಕ್ಷಕರಿದ್ದಾರೆ. ಚಿತ್ರೋತ್ಸವ ಇಲಾಖೆ ಹಾಗೂ ಇಎಸ್‌ಜಿ ಸುಮಾರು 2500 ಮಂದಿಗೆ ನೋಂದಣಿಗೆ ಅವಕಾಶ ನೀಡಲಾಗಿತ್ತು. ಲಭ್ಯ ಮಾಹಿತಿ ಪ್ರಕಾರ 1500 ಮಂದಿ ಈಗಾಗಲೇ ತಮ್ಮ ಕಾರ್ಡ್‌ ಪಡೆದಿದ್ದಾರೆ. ಸೋಮವಾರದಿಂದ ಚಿತ್ರೋತ್ಸವಕ್ಕೆ ಯಾವ ಬಗೆಯ ಪ್ರತಿಕ್ರಿಯೆ ಇದೆ ಎಂಬುದು ಖಚಿತವಾಗಲಿದೆ.

Advertisement

ಇದನ್ನೂ ಓದಿ:ಗೋವಾ ಚಿತ್ರೋತ್ಸವಕ್ಕೆ ಸುದೀಪ್‌ ಚಾಲನೆ : ಕನ್ನಡದಲ್ಲೇ ಮಾತು ಆರಂಭಿಸಿದ ಕಿಚ್ಚ

ಇದೇ ಸಂದರ್ಭದಲ್ಲಿ ಇದು ಹೈಬ್ರಿಡ್‌ ಚಿತ್ರೋತ್ಸವ. ಹಲವು ಮಂದಿ ಸಿನೆ ಪ್ರೇಕ್ಷಕರು ಆನ್‌ ಲೈನ್‌ ಮೂಲಕವೂ ನೋಂದಣಿ ಮಾಡಿಕೊಂಡಿದ್ದು, ಓಟಿಟಿ ಫ್ಲಾಟ್‌ ಫಾರಂನಲ್ಲೂ ಚಿತ್ರ ವೀಕ್ಷಣೆಗೆ ಅವಕಾಶವಿದೆ.

ಸಿನಿಮಾ ಕಡಿಮೆ

ಕಳೆದ ಚಿತ್ರೋತ್ಸವಗಳಿಗೆ ಹೋಲಿಸಿದರೆ ಈ ಬಾರಿ ಚಿತ್ರ ಪ್ರದರ್ಶನ ಕಡಿಮೆ. ಪ್ರತಿ ಪ್ರದರ್ಶನ ಮುಗಿದ ಮೇಲೂ ಇಡೀ ಚಿತ್ರಮಂದಿರವನ್ನು ಸ್ಯಾನಿಟೈಷನ್‌ ಮಾಡಬೇಕಾಗಿರುವುದರಿಂದ ಅದಕ್ಕೆ ಒಂದಿಷ್ಟು ಸಮಯವನ್ನು ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಿನದ ಪ್ರದರ್ಶನದಲ್ಲಿ ಕೊಂಚ ಕಡಿಮೆ ಆಗಿದೆ.

ಒಂಬತ್ತು ದಿನಗಳ ಚಿತ್ರೋತ್ಸವದಲ್ಲಿ 220 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, 60 ಕ್ಕೂ ಹೆಚ್ಚು ದೇಶಗಳ ಸಿನಿಮಾಗಳು ಭಾಗವಹಿಸಿವೆ.

ಸಾಂಸ್ಕೃತಿಕ ಸಂಭ್ರಮ

ಸಾಂಸ್ಕೃತಿಕ ಸಂಭ್ರಮದ ಮೂಲಕವೇ ಚಿತ್ರೋತ್ಸವಕ್ಕೆ ಭರ್ಜರಿ ಚಾಲನೆ ದೊರಕಿತು. ಹಲವಾರು ನೃತ್ಯಪಟುಗಳು ಪ್ರಸ್ತುತಪಡಿಸಿದ ನೃತ್ಯ ಪ್ರದರ್ಶನವನ್ನು ಚಿತ್ರ ರಸಿಕರು ವೀಕ್ಷಿಸಿ ಆನಂದ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next