ಕಂದಗಲ್ಲ: ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಮಾರು 200ರಿಂದ 300 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ಮಕ್ಕಳಿಗೆ ನಿತ್ಯವೂ ಬಿಸಿ ಊಟ ನೀಡಲಾಗುತ್ತಿದೆ. ಆದರೆ, ಆ ಮಕ್ಕಳು ಊಟ ಮಾಡಿದರೆ, ನೀರು ಕುಡಿಯಲು ಅರ್ಧ ಕಿ.ಮೀ ದೂರ ಕ್ರಮಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕೆಲವು ಮಕ್ಕಳು ಮಧ್ಯಾಹ್ನ ಊಟ ಮಾಡುವುದು ಬಿಟ್ಟರೆ, ಇನ್ನೂ ಕೆಲವರು ನೀರು ಕುಡಿಯದೇ ಮನೆಗೆ ತೆರಳುವ ಪ್ರಸಂಗ ಇವೆ ಎನ್ನಲಾಗಿದೆ.
ಹೌದು, ಸರ್ಕಾರಿ ಶಾಲೆಯಲ್ಲಿ ಮಕ್ಕಳ ಊಟಕ್ಕಾಗಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಸರಿಯಾದ ವೇಳೆಯಲ್ಲಿ ಹಾಲು ಕುಡಿದು ಮತ್ತು ಊಟ ಮಾಡಿ ಸದೃಢವಾಗಿ ಬೆಳೆಯಬೇಕೆನ್ನುವ ಉದ್ದೇಶ ಹೊಂದಿದ್ದರೂ, ಆ ಯೋಜನೆ ಈ ಶಾಲೆಯಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಶಾಲೆಯಲ್ಲಿ ಮಕ್ಕಳು ಊಟ ನಂತರ ಕುಡಿವ ನೀರಿಗಾಗಿ ಅರ್ಧ ಕಿ.ಮೀ ಕ್ರಮಿಸಿ, ಅಲ್ಲಿರುವ ಕೈ ಪಂಪ್‌ನ ನೀರು ಕುಡಿಯುತ್ತಾರೆ.
ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆ ಜಾರಿಗೆ ತಂದರೂ ಈ ಶಾಲೆಯಲ್ಲಿ ವಿಫಲವಾಗುತ್ತಿವೆ. ಸರ್ಕಾರ ಮಕ್ಕಳು ಪ್ರತಿ ದಿನ ಶಾಲೆಗೆ ಬಂದು ಗುರುಗಳು ಕಲಿಸಿದ ಪಾಠ ಅರಿತುಕೊಂಡು ಈ ದೇಶ ಉನ್ನತ ಮಟ್ಟದಲ್ಲಿ ಬೆಳೆದುಕೊಳ್ಳಲಿ ಮತ್ತು ದೇಶದ ಮಕ್ಕಳು ಉತ್ತಮ ಪ್ರಜೆಯನ್ನಾಲಿ ಎಂದು ಸರ್ಕಾರದ ಆಸೆಯಾಗಿದೆ. ಶಾಲೆಯ ಮಕ್ಕಳ ಮನಸ್ಸಿನಲ್ಲಿ ಏನು ಇದೆಯೋ ಏನು..ನಮಗ ಯಾವ ಯೋಜನೆಗಳು ಬ್ಯಾಡ ನಮಗ ಊಟ ಮಾಡಿಂದ ಕುಡಿಯುವುದಕ್ಕೆ ನೀರು ಕೊಡಿ ಸಾಕು ಎನ್ನುತ್ತಿದ್ದಾರೆ ಶಾಲೆ ವಿದ್ಯಾರ್ಥಿಗಳು. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಮಕ್ಕಳಿಗೆ ಕುಡಿಯುವುದಕ್ಕೆ ನೀರು ಕೊಡಿಸಿ ಸಾಕು ಎಂಬುದು ಪಾಲಕರ ಒತ್ತಾಯವಾಗಿದೆ.
ನೀರು ಕೊಡಿ
ನಮಗ ಯಾವ ಯೋಜನೆಗಳು ಬ್ಯಾಡ.. ನಮಗ ಊಟ ಮಾಡಿಂದ ಕುಡಿಯುವುದಕ್ಕೆ ನೀರು ಕೊಡಿ ಸಾಕು ಎನ್ನುತ್ತಿದ್ದಾರೆ ಶಾಲೆ ವಿದ್ಯಾರ್ಥಿಗಳು.
ನಾಗಭೂಷಣ ಸಿಂಪಿ