Advertisement
ಇದು ಯಾವುದೋ ಸಿನಿಮಾ ದೃಶ್ಯವಲ್ಲ. ಆನೇಕಲ್‌ನ ಹೃದಯಭಾಗದಲ್ಲಿರುವ ಅಲೆಯನ್ಸ್ ವಿವಿಯ ಆವರಣದಲ್ಲಿ ಕಂಡು ದೃಶ್ಯ. ವಿವಿಯನ್ನು ತಮ್ಮ ಕೈವಶ ಮಾಡಿಕೊಳ್ಳಬೇಕೆಂಬ ದಾಯಾದಿಗಳ ಕಲಹದಿಂದ ಇಡೀ ವಿವಿಯ ಆವರಣ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ.
Related Articles
Advertisement
ರೌಡಿಗಳ ಅಟ್ಟಹಾಸ: ಸೋಮವಾರ ಸಂಜೆ ವಿವಿ ಆವರಣದಲ್ಲಿ ಹೈಡ್ರಾಮಾ ನಡೆದಿದ್ದು, ರೌಡಿಗಳು ವಿವಿಯಲ್ಲಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ದಾಂಧಲೆ ಮಾಡಿದ್ದಾರೆ. ತನ್ಮೂಲಕ ವಿವಿಯನ್ನು ತಮ್ಮ ವಶಕ್ಕೆ ಪಡೆಯಲು ರೌಡಿಸಂ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರ ನಿರ್ಲಕ್ಷ್ಯ: ಇಷ್ಟೇಲ್ಲ ಘಟನೆ ಪೊಲೀಸರ ಮುಂದೆಯೇ ನಡೆಯುತ್ತಿದ್ದರೂ. ಪೊಲೀಸರು ಮಾತ್ರ ಯಾವುದೇ ಮೂಕಪ್ರೇಕ್ಷಕರಾಗಿದ್ದಾರೆ. ತಮ್ಮ ಮಂದೆಯೇ ಐದಾರು ಕಾರುಗಳಲ್ಲಿ ರೌಡಿಗಳು ವಿವಿಯ ಆವರಣ ಪ್ರವೇಶಿಸಿ ವಿದ್ಯಾರ್ಥಿಗಳು, ಸಿಬ್ಬಂದಿ ಅಟ್ಟಾಡಿಸುತ್ತಿದ್ದರು ಕಾನೂನು ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಕೆಲ ಪುಡಿರೌಡಿಗಳು ಪೊಲೀಸರನ್ನು ಕಂಡ ಕಾರುಗಳ ಕೆಳಗೆ ಮಚ್ಚು, ಲಾಂಗುಗಳನ್ನು ಬಿಸಾಡಿದರೆ, ಇನ್ನು ಕೆಲವರು ನೇರವಾಗಿಯೇ ಪೊಲೀಸರ ಎದುರೇ ಮಾರಕಾಸ್ತ್ರಗಳನ್ನು ಹಿಡಿದು ಹಲ್ಲೆಗೆ ಮುಂದಾಗುತ್ತಿದ್ದು, ಪೊಲೀಸರು ಯಾವೊಬ್ಬ ರೌಡಿಗಳನ್ನು ಬಂಧಿಸುವ ಧೈರ್ಯ ಮಾಡಿಲ್ಲ. ರೌಡಿಗಳ ಅಟ್ಟಹಾಸ ತೀವ್ರಗೊಂಡ ಮಾಹಿತಿ ಪಡೆದ ಮಾಧ್ಯಮಗಳು ಕ್ಯಾಮೆರಾ ಸಮೇತ ವಿವಿ ಆವರಣಕ್ಕೆ ಪ್ರವೇಶಿಸಿದಾಗ ಕಾಟಾಚಾರಕ್ಕೆ ಎಂಬಂತೆ ನಾಲ್ಕೈದು ಮಂದಿ ಪುಡಿರೌಡಿಗಳನ್ನು ವಶಕ್ಕೆ ಪಡೆದರು.
ಟಿಶರ್ಟ್ ವಿತರಣೆ: ಕಳೆದ ಎರಡು ವರ್ಷಗಳಿಂದ ಮಧುಕರ್ ಅಂಗರೂ ಮತ್ತು ಸಹೋದರಿ ಶೈಲಜಾ ಜಬ್ಬಿ ವಿವಿಯನ್ನು ತಮ್ಮ ವಶಕ್ಕೆ ಪಡೆಯಲು ಪರಸ್ಪರ ಬಹಿರಂಗವಾಗಿಯೇ ಹೊಡೆದಾಟ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕಾಗಿ ಚಾಮರಾಜಪೇಟೆ, ಕಲಾಸಿಪಾಳ್ಯ ಸೇರಿದಂತೆ ನಗರದ ವಿವಿಧ ಠಾಣಾ ವ್ಯಾಪ್ತಿಯ ರೌಡಿಗಳನ್ನು ಇಬ್ಬರು ಕರೆಸುತ್ತಾರೆ. ಇವರಿಗೆ ಸೆಕ್ಯೂರಿಟಿ ಗಾರ್ಡ್‌ಗಳ ಸಮವಸ್ತ್ರ ಕೊಟ್ಟ ವಿವಿಯ ಆವರಣದೊಳಗೆ ಪ್ರವೇಶಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.