Advertisement

ರಸ್ತೆ ಕಲ್ಪಿಸಿಕೊಡಿ, ಇಲ್ಲವೇ ದಯಾಮರಣ ಕೊಡಿ

06:00 PM Sep 14, 2021 | Team Udayavani |

ಕನಕಪುರ: ಬಲಾಡ್ಯರು ಒತ್ತುವರಿ ಮಾಡಿಕೊಂಡಿರುವ ಗ್ರಾಮ ಠಾಣಾ ಜಾಗ ತೆರವುಗೊಳಿಸಿ ನಮ್ಮ ಮನೆಗೆ ಓಡಾಡಲು ರಸ್ತೆ ನಿರ್ಮಾಣ ಮಾಡಿಕೊಡದಿದ್ದರೆ ದಯಾಮರಣ ಕೊಡುವವರೆಗೂ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಮತ್ತಿಕುಂಟೆ ಗ್ರಾಮದ ವಿಶ್ವನಾಥ್‌ ಅವರ ಕುಟುಂಬ ಅಸಹಾಯಕತೆ ವ್ಯಕ್ತಪಡಿಸಿದೆ.

Advertisement

ಬೇಡಿಕೆಗಳೇನು?: ತಾಲೂಕಿನ ಹಾರೋಹಳ್ಳಿ ಹೋಬಳಿ ದೊಡ್ಡಮುದುವಾಡಿ ಗ್ರಾಪಂ ವ್ಯಾಪ್ತಿಯ ಮತ್ತಿಕುಂಟೆ ಗ್ರಾಮದಲ್ಲಿ ಮಾತನಾಡಿ, ನಮ್ಮ ತಂದೆ ಕೃಷ್ಣಮೂರ್ತಿ ಕೂಲಿ ಮಾಡಿ ಕಳೆದ 30 ವರ್ಷಗಳ ಹಿಂದೆ ಮಡಿಕೊಪ್ಪ ಗ್ರಾಮ ಠಾಣಾ ಜಾಗದಲ್ಲಿ ನಿವೇಶನ ಖರೀದಿ ಮಾಡಿ ಸೋರು ಕಟ್ಟಿಕೊಂಡಿದ್ದೇವೆ. ಆದರೆ ‌ ಗ್ರಾಮದ ಐವರು ಅಣ್ಣತಮ್ಮಂದಿರು ಸುಮಾರು ಒಂದು ಎಕರೆ ಗ್ರಾಮಠಾಣಾ ಜಾಗ ಒತ್ತುವರಿ ಮಾಡಿ ನಮ್ಮ
ಮನೆಗೆ ಓಡಾಡಲು ರಸ್ತೆ ಬಿಡದೆ ಬೇಲಿ ಹಾಕಿಕೊಂಡಿದ್ದರು. ನಂತರ ತಂದೆ ಮನೆ ಉತ್ತರ ಭಾಗದಲ್ಲಿದ್ದ ಖಾಲಿ ನಿವೇಶನ ಖರೀದಿ ಮಾಡಿ ಮನೆಗೆ
ದಾರಿ ಮಾಡಿಕೊಂಡಿದ್ದರು. ಆ ಜಾಗವೂ ನಮಗೆಸೇರಬೇಕೆಂದು ಸ್ಥಳೀಯರು ಬೇಲಿ ಹಾಕಿಕೊಂಡಿದ್ದಾರೆ.

ಮನೆಗೆ ರಸ್ತೆ ಇಲ್ಲದೆ ಬೇರೆ ದಾರಿ ಕಾಣದೆ ವಲಸೆ ಹೋಗಿ ಬೆಂಗಳೂರಿನಲ್ಲಿ ವಾಸವಾಗಿದ್ದೆವು. ಆದರೆ ಕೋವಿಡ್‌ದಿಂದ ಬೆಂಗಳೂರು ತೊರೆದು ಸ್ವಗ್ರಾಮಕ್ಕೆ ಬಂದಿದ್ದೇವೆ. ಇನ್ನು ಗ್ರಾಪಂ ಅಧಿಕಾರಿಗಳು ಒತ್ತುವರಿದಾರರ ಬೆನ್ನಿಗೆ ನಿಂತು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ವರ್ಗಾಯಿಸಿದರು: ನಮ್ಮ ತಂದೆ ಕಷ್ಟಪಟ್ಟು ಕಟ್ಟಿದ ಮನೆಗೆ ರಸ್ತೆ ನಿರ್ಮಾಣ ಮಾಡಿಕೊಳ್ಳಲು ಅನೇಕ ಅಧಿಕಾರಿಗಳ ಕಚೇರಿಗಳ ಬಾಗಿಲನ್ನು ತಟ್ಟಿದ್ದೇವೆ. ಈ ಸಂಬಂಧ ಸೂಕ್ತ ಕ್ರಮವಹಿಸುವಂತೆ ಸಾರ್ವಜನಿಕ ಭೂ ಒತ್ತುವರಿಗಳ ನಿಗಮದಿಂದ ಜಿಲ್ಲಾಧಿಕಾರಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಜಿಪಂ ಸಿಇಒ ಅವರಿಗೆ ಸೂಚನೆ ಕೊಟ್ಟಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಸಿಇಒ ಅವರಿಗೆ ವರ್ಗಾಯಿಸಿ ಕೈತೊಳೆದುಕೊಂಡರು.ಸಿಇಒ ಅವರು ಇಒ ಮತ್ತು ಪಿಡಿಒ ಕ್ರಮ ವಹಿಸುವಂತೆ ಸೂಚಿಸಿದರು. ಆದರೆ, ಪಿಡಿಒ ಒತ್ತುವರಿದಾರರಬೆನ್ನಿಗೆ ನಿಂತಿದ್ದಾರೆಂದು ದೂರಿದರು.

ಇದನ್ನೂ ಓದಿ:ಕರೀನಾ ಬದಲಿಗೆ ಕಂಗನಾ : ಸೀತೆ ಪಾತ್ರಕ್ಕೆ ರಣಾವತ್ ಆಯ್ಕೆ  

Advertisement

ನೀರು ಹೋಗಲು ಅವಕಾಶವಿಲ್ಲ: ಇಡೀ ವ್ಯವಸ್ಥೆಯಿಂದ ಬೇಸತ್ತು ಕಳೆದ 3ತಿಂಗಳ ಹಿಂದೆ ದಯಾಮರಣ ಕೋರಿ ರಾಜ್ಯಪಾಲರಿಗೆ, ಕರ್ನಾಟಕ
ಮಾನವ ಹಕ್ಕುಗಳ ಆಯೋಗಕ, ಸ್ಕೆ ‌ರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಂಡಿದ್ದೆ. ಓಡೋಡಿ ಬಂದ ಅಧಿಕಾರಿಗಳು ಕಾಟಾಚಾರಕ್ಕೆ ನಕಾಶೆ ರಸ್ತೆ ಬಿಟ್ಟು ಮನೆ ಹಿಂಭಾಗದಲ್ಲಿ ಅವೈಜ್ಞಾನಿಕವಾಗಿ ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಿದರು. ಇದರಿಂದ ‌ ಮಳೆಗಾಲದಲ್ಲಿ ಮಳೆ ನೀರು ಹರಿದುಹೋಗಲು ಅವಕಾಶವಿಲ್ಲದೆ ವಾಸಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಜೊತೆಗೆ ಗ್ರಾಮಠಾಣಾ ಒತ್ತುವರಿ
ಮಾಡಿಕೊಂಡಿರುವ ಸ್ಥಳೀಯ ಪ್ರಭಾವಿಗಳು ನಮ್ಮ ‌ ಮನೆ ಜಾಗಕ್ಕೆ ಮಣ್ಣು ಸುರಿದು ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ನೊಂದಕುಟುಂಬ ಅಳಲು ತೋಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next