Advertisement
ವರಿಷ್ಠರಿಗೆ ಪತ್ರ ಬರೆದಿರುವ ಬಗ್ಗೆ ಖುದ್ದು ವಿ.ಸೋಮಣ್ಣನವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿ ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಪ್ರತಿಪಾದಿಸಿದ್ದಾರೆ. ನಾನು ಚುನಾವಣೆ ಮುಗಿದ ಬಳಿಕ ದೆಹಲಿಗೆ ಎರಡು ಬಾರಿ ಭೇಟಿ ನೀಡಿದ್ದೇನೆ. ಪಕ್ಷ ಸಂಘಟನೆಯ ದೃಷ್ಟಿಯಿಂದ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಎಂದು ಕೇಳಿದ್ದೇನೆ. ಜೊತೆಗೆ ವರಿಷ್ಠರಿಗೆ ಈ ಸಂಬಂಧ ಪತ್ರವನ್ನೂ ಬರೆದಿದ್ದೇನೆ. ನಾನು ಬಿಜೆಪಿಗೆ ಬಂದು 15 ವರ್ಷವಾಗಿದೆ. ಪಕ್ಷ ನನಗೆ ಸ್ಥಾನಮಾನ ನೀಡಿದ್ರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ.
Related Articles
Advertisement
ರಾಜ್ಯದ ಯಾವ ನಾಯಕರ ಜೊತೆಗೂ ನಾನು ಮಾತನಾಡಿಲ್ಲ. ಇವರ ಕೈಯಲ್ಲಿ ಆಗದೇ ಇರುವ ಕೆಲಸ ನಾನು ಮಾಡಿದ್ದೇನೆ. ಪ್ರಾಣದ ಹಂಗು ತೊರೆದು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನಾನು ಸೋತಿರಬಹುದು, ಆದರೆ ನನಗೆ ಕೊಟ್ಟ ಟಾಸ್ಕ್ ನಲ್ಲಿ ಸೋತಿಲ್ಲ, ಗೆದ್ದಿದ್ದೇನೆ. ಸೋಲಿನ ಬಗ್ಗೆ ಯಾರಿಗೆ ತಿಳಿಸಬೇಕೋ ಅವರಿಗೆ ನಾನು ತಿಳಿಸಿದ್ದೇನೆ. ನನಗೆ ರಾಜ್ಯಾಧ್ಯಕ್ಷ ಸ್ಥಾನ ಯಾಕೆ ಕೊಡಲ್ಲ? ಕೊಡಲೇಬೇಕು ಎಂದು ಆಗ್ರಹಿಸಿದರು.ಅಶೋಕ್ ರಾಜ್ಯಾಧ್ಯಕ್ಷ ಆದರೆ ಬೇಡ ಅಂತೀವಾ? ಕನಕಪುರದಲ್ಲಿ ಅಶೋಕ್ ರಿಸ್ಕ್ ತೆಗೆದುಕೊಂಡಿಲ್ಲ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಇವರೆಲ್ಲರಿಗಿಂತ ನಾನು ಚೆನ್ನಾಗಿ ಕೆಲಸ ಮಾಡಿದ್ದೇನೆ ಎಂದರು. ನಾನು ರಾಜ್ಯಾಧ್ಯಕ್ಷ ಆಗುವುದಕ್ಕೆ ಯಡಿಯೂರಪ್ಪ ನವರು ಒಪ್ಪಿಕೊಳ್ಳಬೇಕು, ಬೇರೆಯವರೂ ಒಪ್ಪಿಕೊಳ್ಳಬೇಕು. ನಾವು ಇಷ್ಟು ದಿನ ಯಡಿಯೂರಪ್ಪ ಹೇಳಿದ್ದನ್ನು ಕೇಳಿಲ್ವಾ? ಚುನಾವಣೆ ಮುಗಿದ ನಂತರ ಒಂದು ಫೋನ್ ಕೂಡ ಅವರು ನನಗೆ ಮಾಡಿಲ್ಲ. ಯಾರು ಯಾರಿಗಿಂತಲೂ ದೊಡ್ಡವರಲ್ಲ. ಪಕ್ಷ ಮಾತ್ರ ದೊಡ್ಡದು. ನಂದು ನಂದೇ, ಅವರದ್ದು ಅವರದ್ದೇ. ನನಗೆ ಅವರ ಮೇಲೆ ಗೌರವ ಇದೆ. ನಾನು ಚುನಾವಣೆಗೆ ಮುನ್ನವೇ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೆ ಎಂದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಎದುರು ಕೆಲಸ ಮಾಡಲು ನಮ್ಮ ಅತಿರಥ ಮಹಾರಥರು ಮುಂದಾಗಿರಲಿಲ್ಲ. ಆದರೆ ನಾನು ಮಾಡಿದ್ದೇನೆ. ಇಲ್ಲವಾಗಿದ್ದರೆ ಸಿದ್ದರಾಮಯ್ಯ ಎದುರು ನಿಲ್ಲಲು ನನಗೆ ಹುಚ್ಚು ಹಿಡಿದಿತ್ತಾ? ಯಡಿಯೂರಪ್ಪ ಪಕ್ಷ ಕಟ್ಟಿ ಬೆಳೆಸಿ¨ªಾರೆ. ಆದರೆ ಬಿಜೆಪಿ ಕೆಜೆಪಿ ಆದಾಗ ಏನೆಲ್ಲಾ ಆಗಿದೆ ಎಂಬುದು ಗೊತ್ತಿದೆ. ನೂರು ದಿನಗಳ ಕಾಲ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ. ಪಕ್ಷದ ಸಂಘಟನೆಯನ್ನು ಯಾವ ರೀತಿ ತೊಡಗಿಸಿಕೊಳ್ಳಬಹುದು ಎಂದು ತೋರಿಸಿಕೊಡುತ್ತೇನೆ ಎಂದರು.