Advertisement

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ನೀಡಿ

03:05 PM Nov 28, 2021 | Team Udayavani |

ಲಕ್ಷ್ಮೇಶ್ವರ: ವಿದ್ಯೆ ಎಂಬುದು ಯಾರೂ ದೋಚಲಾಗದ, ಬಳಸಿದಷ್ಟು ಸಮೃದ್ಧವಾಗಿ ಬೆಳೆಯುವ, ಎಲ್ಲ ಸಂಪತ್ತಿಗಿಂತ ಮಿಗಿಲಾದದ್ದು. ಆದ್ದರಿಂದ ತಾಯಂದಿರು ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಮಕ್ಕಳ ಜ್ಞಾನ ಭಂಡಾರದ ಶ್ರೀಮಂತಿಕೆ ಹೆಚ್ಚಿಸಬೇಕು ಎಂದು ಸಾಹಿತಿ ಲಲಿತಾ ಸಿ. ಕೆರಿಮನಿ ಹೇಳಿದರು.

Advertisement

ಪಟ್ಟಣದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಗಿದು ಹೋಗುವ ಸಂಪನ್ಮೂಲಗಳ ಸದ್ಬಳಕೆ ಕುರಿತು ಮಾತನಾಡಿದರು. ಗದಗ ಜಿಲ್ಲೆಯ ಧ.ಗ್ರಾ. ಸಂಸ್ಥೆ ನಿರ್ದೇಶಕರಾದ ಶಿವಾನಂದ ಆಚಾರ್ಯರು ಮಾತನಾಡಿ, ಮಹಿಳೆಯರು ಸಂಸ್ಥೆಯ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕ ಸಬಲೀಕರಣ ಹೊಂದುವ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ಸಂಪ್ರದಾಯಗಳನ್ನು ರೂಢಿಸಬೇಕು ಎಂದರು.

ಪುರಸಭೆ ಅಧ್ಯಕ್ಷ ಪೂರ್ಣಿಮಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡರಾದ ಸಂತೋಷ ಬಾಳಿಕಾಯಿ, ರುದ್ರಯ್ಯ ಘಂಟಾಮಠ, ಸಿ.ಎಸ್‌. ಕೋರಿ, ಸಂಸ್ಥೆ ಯೋಜನಾಧಿಕಾರಿ ಶಿವಣ್ಣ ಎಸ್‌., ಹನಮಂತ ಅಂಗಡಿ, ಗಿರಿಜಾ ಧೂಳಿಕೊಪ್ಪ ಇದ್ದರು. ಸಂಸ್ಥೆ ಸೇವಾ ಪ್ರತಿನಿಧಿಗಳಾದ ಶೋಭಾ, ನಿರ್ಮಲಾ, ಲಲಿತಾ, ಮಂಜುಳಾ, ಲತಾ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next