Advertisement

ಗರ್ಲ್ಸ್‌ v/s ಗಿರೀಶ್‌

03:50 AM Mar 14, 2017 | |

ಹೈಸ್ಕೂಲಿನಲ್ಲಿ ಕಳೆದ ದಿನಗಳೇ ಹಾಗೇನೋ. ಹದಿಹರೆಯಕ್ಕೆ ಕಾಲಿಟ್ಟಾಗ ಹುಡುಗ ಮತ್ತು ಹುಡುಗಿಯರ ನಡುವೆ ಇರುವುದು ಆಕರ್ಷಣೆ ಎಂಬುದು ಅರಿವಾಗದೇ ಆ ವಯಸ್ಸಿನಲ್ಲಿ ಹುಡುಗ ಮತ್ತು ಹುಡುಗಿಯ ನಡುವೆ ಇರುವುದು ಪ್ರೀತಿ ಮಾತ್ರ ಎಂದು ನಮಗೆ ನಾವೇ ಅರ್ಥೈಸಿಕೊಂಡು ಸಿನಿಮಾ ಹೀರೋಗಳಂತೆ ಮೆರೆದಾಡುವ ದಿನಗಳವು. ಯಾರಾದರೂ ಹುಡುಗಿ ತನ್ನತ್ತ ನೋಡಿ ನಕ್ಕರೆ ಸಾಕು; ಅವಳು ನನ್ನನ್ನು ಪ್ರೀತಿಸುತ್ತಿ¨ªಾಳೆ ಎಂಬ ಭಾವನೆ ಹುಡುಗನ ಮನದಲ್ಲಿ ಮೂಡದಿದ್ದರೂ ಅವನ ಸ್ನೇಹಿತರು ಬಿಡುವುದಿಲ್ಲ.
“ಮಗಾ, ನಮ್ಮ ಮಾತು ಕೇಳ್ಳೋ… ಅವಳು ನಿನ್ನನ್ನು ನೋಡಿ ನಗುತ್ತಾಳೆ. ಅವಳು ನಿನ್ನನ್ನು ಪ್ರೀತಿಸುತ್ತಿ¨ªಾಳೆ ಕಣೋ’ ಎಂದು ಹೇಳಿ ಆಕಾಶಕ್ಕೆ ಏಣಿ ಹಾಕಿ ಮೇಲಕ್ಕೇರಿಸುವ ದಿನಗಳವು.

Advertisement

ನಾನು ಕೊನೆಯ ಬೆಂಚಿನ ವಿದ್ಯಾರ್ಥಿಯಾಗಿರುವುದರಿಂದ ನನ್ನ ನಾಮಧೇಯ ನಮ್ಮ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸುಪರಿಚಿತವಾಗಿತ್ತು ಆ ಕಾರಣದಿಂದಲೇ ನಮ್ಮ ಶಾಲಾ ಶಿಕ್ಷಕರಿಗೂ ನಾನು ಸುಪರಿಚಿತ. ಲಾ… ಬೆಂಚ್‌ ಸ್ಟೂಡೆಂಟ… ಆಗಿರುವುದರಿಂದ ನಮ್ಮ ತರಗತಿಯ ಹುಡುಗಿಯರನ್ನು ಚುಡಾಯಿಸುವುದು, ಅವರು ಬೈದರೆ ಬೈಯ್ಯಿಸಿಕೊಳ್ಳುವುದು ನನಗೆ 
ಮಾಮೂಲಿ. ಈ ಕಾರಣದಿಂದಲೇ ನನಗೂ ಹುಡುಗಿಯರಿಗೂ ಒಬ್ಬರನ್ನೊಬ್ಬರು ಕಂಡರೆ ಆಗುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಶಾಲಾ ಶಿಕ್ಷಕರೊಬ್ಬರು ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಸ್ಟೇಜ… ಮೇಲೆ ಬಂದು ಒಂದೊಂದು ಸೆಮಿನಾರ್‌  
ಮಾಡಬೇಕೆಂದು(ಅಂದರೆ ಒಂದೊಂದು ಪೀರಿಯಡ್‌ಪಾಠ ಮಾಡ ಬೇಕೆಂದು) ಆದೇಶ ನೀಡಿದರು. ಯಾರೂ ಹೆದರಿಕೊಳ್ಳದೇ ಈ ಸ್ಟೇಜ… ಮೇಲೆ ನಾನೊಬ್ಬ ಶಿಕ್ಷಕ ಎಂದು ಭಾವಿಸಿಕೊಂಡು ಸೆಮಿನಾರ್‌ ಮಾಡಿ ಎಂದು ಹೇಳಿದರು. ನಂತರ, ಯಾರು ಮೊದಲು ಸೆಮಿನಾರ್‌ ಮಾಡುತ್ತೀರಾ? ಕೈ ಎತ್ತಿ ಎಂದು ಕೇಳಿದರು. ಯಾರೊಬ್ಬರೂ ಕೈಯನ್ನು ಮೇಲಕ್ಕೆತ್ತಲಿಲ್ಲ. ಈ ಕಾರಣದಿಂದಲೇ ಲಾ… ಬೆಂಚಿನಿಂದ ನಾನೊಬ್ಬನು ಕೈ ಎತ್ತಿದೆ. ಅದರಿಂದ ಮೊದಲು ಸೆಮಿನಾರ್‌ ಮಾಡುವ ಅವಕಾಶ ನನಗೆ ಸಿಕ್ಕಿತು.

ನಾನು ಸೆಮಿನಾರ್‌ ಮಾಡಲು ಸ್ಟೇಜನ್ನು ಹತ್ತಿ ಸ್ಟೇಜ… ಫೀಯರ್‌ ಇಲ್ಲದಿರುವ ಕಾರಣ ಸ್ವಲ್ಪ ಗಡಸು ಧ್ವನಿಯಲ್ಲಿಯೇ ಸೆಮಿನಾರ್‌
ಪ್ರಾರಂಭಿಸಿದೆ. ಹತ್ತು ನಿಮಿಷದ ನಂತರ ಒಂದು ಪ್ರಶ್ನೆಯನ್ನು ಮೊದಲನೇ ಬೆಂಚಿನಲ್ಲಿ ಕುಳಿತಿರುವ ಮೊದಲ ಹುಡುಗಿಯನ್ನು ಕೇಳಿದೆ. ಆ ಹುಡುಗಿಗೆ ನಾನು ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿರುವ ಕಾರಣ ಸುಮ್ಮನೆ ನಿಂತಿದ್ದಳು. ನಾನು ನಮ್ಮ ಮೇಷ್ಟ್ರಂತೆ ನೆಕ್ಸ್ಟ್ ಎಂದೆ. ಆಗ ಆ ಹುಡುಗಿಯ ಪಕ್ಕದ ಹುಡುಗಿ ಎದ್ದು ನಿಂತಳು. ಅವಳೂ ಉತ್ತರ ಹೇಳಲಿಲ್ಲ.  ಇದರಿಂದ ನಾನು
ನೆಕ್ಸ್ಟ್ ನೆಕ್ಸ್ಟ್ ನೆಕ್ಸ್ಟ್ ನೆಕ್ಸ್ಟ್ ಎಂದು ಹೇಳುತ್ತಾ ಹೋದೆ. ನಮ್ಮ ತರಗತಿಯ ಎಲ್ಲಾ ಹುಡುಗಿಯರೂ ನಿಂತುಕೊಂಡರು. ಆದರೆ ಯಾರೊಬ್ಬರೂ ನಾನು ಕೇಳಿದ ಪ್ರಶ್ನೆಗೆ ಉತ್ತರ ನೀಡಲಿಲ್ಲ.

ನಾನು ಹುಡುಗಿಯರಿಗೆ “ದಿನಾ ರಾತ್ರಿ ಸೀರಿಯಲ… ನೋಡುವುದರ ಬದಲು ಸ್ವಲ್ಪ ಪಠ್ಯಪುಸ್ತಕ ಓದಿ. ಸಿಟ… ಡೌನ್‌’ ಎಂದು ಹೇಳಿದೆ. ಆಗ ಒಂದು ಹುಡುಗಿ “ಎಲ್ಲಾ ಹುಡುಗಿಯರನ್ನೂ ಕೇಳಿದ್ದೀಯಾ, ಆ ಪ್ರಶ್ನೆಯನ್ನು. ಹುಡುಗರಿಗೂ ಕೇಳಿ ಅವರನ್ನೂ ಎದ್ದು ನಿಲ್ಲುವಂತೆ ಮಾಡು’ ಎಂದು ಕೇಳಿದಳು. ಆದರೆ ನಾನು ಯಾವ ಹುಡುಗನನ್ನೂ ಕೇಳಿ ನಿಲ್ಲಿಸಲಿಲ್ಲ. ಹೀಗೆ ನನ್ನ ಸೆಮಿನಾರ್‌ನಲ್ಲಿ ಪಾಠಕ್ಕಿಂತ ಹೆಚ್ಚಾಗಿ ಹುಡುಗಿಯರ ಮೇಲಿನ ಸೇಡನ್ನು ತೀರಿಸಿಕೊಳ್ಳುವ ಮೂಲಕ ಸೆಮಿನಾರನ್ನು ಮುಗಿಸಿದೆ. ನಾನು ಕನಸಿನಲ್ಲೂ ಊಹಿಸದಂತೆ ಹುಡುಗಿಯರು ನನ್ನ ಮೇಲೆ ಹಾವಿನಂತೆ ದ್ವೇಷ ಸಾಧಿಸಲು ನಿರ್ಧರಿಸಿ ಬಿಟ್ಟಿದ್ದರು! ಮರುದಿನದಿಂದ ಅವರೂ 
ಸೆಮಿನಾರ್‌ ಮಾಡಲು ಆರಂಭಿಸಿ ಪ್ರತಿಯೊಂದು ಪ್ರಶ್ನೆಯನ್ನೂ ನನ್ನನ್ನೇ ಗುರಿಯಾಗಿಸಿ ಕೇಳಿ ನಾನು ಉತ್ತರ ನೀಡದಿ¨ªಾಗ ವ್ಯಂಗ್ಯವಾಗಿ ನೋಡುತ್ತಾ, ಮಾತನಾಡುತ್ತಾ ನನ್ನ ಮೇಲೆ ಇರುವ ದ್ವೇಷವನ್ನೆಲ್ಲಾ ತೀರಿಸಿಕೊಳ್ಳುತ್ತಿದ್ದರು. 

ಅಷ್ಟೇ ಅಲ್ಲ, ನಮ್ಮ ತರಗತಿಯಲ್ಲಿ ಎಷ್ಟು ಹುಡುಗರಿದ್ದರೂ ಹುಡುಗಿಯರು ನನ್ನನ್ನೇ ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳಿ ನಾನು ಆ ಪ್ರಶ್ನೆಗಳಿಗೆ ಉತ್ತರಿಸದಿ¨ªಾಗ ನನ್ನನ್ನು ಮನಸಾರೆ ಬಯ್ಯುತ್ತಿದ್ದರು. ಹೀಗೆ ನಾನು ಒಂದು ಸೆಮಿನಾರಿನಲ್ಲಿ ಮಾಡಿದ ಅವಾಂತರದಿಂದಾಗಿ ನಮ್ಮ ಪ್ರತಿಯೊಂದು ಸೆಮಿನಾರ್‌ ಸಹ “ಗರ್ಲ್ಸ್‌ v/s ಗಿರೀಶ್‌’ ಎಂಬಂತಾಗಿ ನಮ್ಮ ತರಗತಿಯ ಎಲ್ಲಾ ಸೆಮಿನಾರ್‌ಗಳು ಮುಗಿದುಹೋದವು. ನಂಬಿದರೆ ನಂಬಿ ಬಿಟ್ಟರೆ ಬಿಡಿ: ನನ್ನನ್ನು ಬಯ್ಯುವುದಕ್ಕಾಗಿಯೇ ಹುಡುಗಿಯರು ಸೆಮಿನಾರ್‌ 
ಗಳನ್ನು ಮಾಡುತ್ತಿದ್ದರು. ಹೀಗೆ ಹೈಸ್ಕೂಲಿನಲ್ಲಿ ನಡೆದ ಇಂತಹ ಘಟನೆಗಳು ನೆನಪಾದಾಗಲೆಲ್ಲ ತುಟಿಯ ಮೇಲೆ ನಗು ಮೂಡಿ ಮುಖದಲ್ಲಿ ಕಾಂತಿ ಹೊರಹೊಮ್ಮುತ್ತದೆ.

Advertisement

ಗಿರೀಶ್‌ ಚಂದ್ರ ವೈ. ಆರ್‌., ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next