Advertisement
ಮೊಬೈಲ್ ಕರೆ, ಮೆಸೇಜುಗಳ ಮೂಲಕ ಮೋಸಗೊಳಿಸುವವರು ಹೆಚ್ಚುತ್ತಿದ್ದಾರೆ. ಇಂತಹ ಕರೆ, ಮೆಸೇಜುಗಳನ್ನು ತಿರಸ್ಕರಿಸುವುದೇ ಇದಕ್ಕೆ ಪರಿಹಾರವಾಗಿದೆ. ಯಾವುದೇ ಕಾರಣಕ್ಕೂ ಅಂತಹ ಮೊಬೈಲ್ ಕರೆಗೆ ಮಾಹಿತಿ ಕೊಡಬೇಡಿ ಎಂದು ಎಸ್‌ಪಿ ತಿಳಿಸಿದರು.
ಶನಿವಾರ ಬಂದ 26 ಕರೆಗಳ ಪೈಕಿ ಸಂಚಾರ, ಪಾರ್ಕಿಂಗ್ ಸಮಸ್ಯೆ ಕುರಿತು ಹೆಚ್ಚಿನ ದೂರುಗಳು ಬಂದಿದ್ದವು. ಬ್ರಹ್ಮಾವರ ಆಕಾಶವಾಣಿ ಸರ್ಕಲ್ ಬಳಿ ಸಂಚಾರಕ್ಕೆ ತೊಂದರೆ, ಬ್ರಹ್ಮಾವರ ರಥಬೀದಿಯಲ್ಲಿ ಎರಡೂ ಕಡೆ ವಾಹನ ಪಾರ್ಕಿಂಗ್ ಮಾಡುತ್ತಿರುವುದು, ಉದ್ಯಾವರ ಗುಡ್ಡೆಯಂಗಡಿ ಬಲಾಯಿಪಾದೆಯಲ್ಲಿ ಸಂಚಾರ ಸಮಸ್ಯೆ, ಸಚಿವರ ಕಾರ್ಯಾಲಯ ಎದರು ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್, ಉಡುಪಿ ಪೈ ಇಂಟರ್ ನ್ಯಾಷನಲ್-ಉಡುಪಿ ಸಂಚಾರ ಠಾಣೆವರೆಗೆ ಎರಡೂ ಕಡೆ ಪಾರ್ಕಿಂಗ್, ಆಶೀರ್ವಾದ್-ಮಲ್ಪೆ ರಸ್ತೆಯಲ್ಲಿ ಟ್ರಾನ್ಸ್‌ಪೊàರ್ಟ್ ಏಜೆನ್ಸಿಯಿಂದ ರಸ್ತೆ ಸಂಚಾರಕ್ಕೆ ತೊಂದರೆ, ಮಣಿಪಾಲ ಆರ್‌ಎಸ್‌ಬಿ ಸಭಾ ಭವನ ಬಳಿ ಟ್ರಾಫಿಕ್ ಜಂಕ್ಷನ್‌ಗೆ ಆಗ್ರಹ, ಸೂಚನಾ ಫಲಕ ಅಳವಡಿಸದೆ ಅಪಾಯಕಾರಿಯಾಗಿ ಬಿಟ್ಟಿರುವುದು. ಇಡೂರು-ಕುಂಜಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಪಾಯಕಾರಿ ತಿರುವು, ಕೂರಾಡಿ ಕೊಕ್ಕರ್ಣೆ ಮಧ್ಯೆ ಬೆಳಗ್ಗಿನ ಅವಧಿಯಲ್ಲಿ ಬಸ್ ಸಂಚಾರ ಹೆಚ್ಚಿಸುವ ಬಗ್ಗೆ, ಶಿರ್ವ ಕುಂಜಾರುಗಿರಿ ಬಸ್ ವೇಳಾಪಟ್ಟಿ ಸರಿಯಿರುವುದಿಲ್ಲ ಮತ್ತು ಬಸ್ ಸಂಚಾರ ಹೆಚ್ಚಿಸುವ ಬಗ್ಗೆ, ಅಂಬಲಪಾಡಿ ಸರ್ವಿಸ್ ರೋಡ್‌ನಲ್ಲಿ ವಾಹನ ನಿಲುಗಡೆ ಮಾಡುತ್ತಿರುವ ಬಗ್ಗೆ, ಸಿಂಡಿಕೇಟ್ ಬ್ಯಾಂಕ್ ಕೆಥೊಲಿಕ್ ಸೆಂಟರ್-ಟೀಚರ್ಸ್ ಟ್ರೈನಿಂಗ್ ಶಾಲೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ, ಉಪ್ಪುಂದ ಪೇಟೆಯಲ್ಲಿ ಮೀನು ಮಾರ್ಕೆಟ್ ಬಳಿ ಪಾರ್ಕಿಂಗ್ ಹಾಗೂ ಮುದ್ದೂರು ಕೂರಾಡಿಗೆ ಬೆಳಗ್ಗೆ ಬಸ್ ಪರ್ಮಿಟ್ ಇದ್ದರೂ ಬಸ್ ಬಿಡುತ್ತಿಲ್ಲ ಎನ್ನುವ ದೂರುಗಳು ಬಂದವು.
Related Articles
ಬ್ಲೂವೇಲ್ ಗೇಮ್ ಬಗ್ಗೆ ಆಯಾ ಶಾಲೆಗಳ ನೊಟೀಸು ಬೋರ್ಡಿನಲ್ಲಿ ಪ್ರಕಟನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಹೇಳಿದರು.ಡಿವೈಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಡಿಸಿಐಬಿ ಇನ್ಸ್‌ಪೆಕ್ಟರ್ ಸಂಪತ್ ಕುಮಾರ್ ಉಪಸ್ಥಿತರಿದ್ದರು.
Advertisement
ಅಕ್ರಮ ಗಣಿಗಾರಿಕೆ: ಮನೆಗಳಿಗೆ ಹಾನಿಶಂಕರನಾರಾಯಣ 74ನೇ ಉಳ್ಳೂರಿನಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಬಂಡೆ ಒಡೆಯುತ್ತಿರುವುದರಿಂದ ಮನೆಗಳಿಗೆ ಹಾನಿ, ಕೋಟ ಸಾಸ್ತಾನದಲ್ಲಿ ಲಾರಿಯಲ್ಲಿ ಮರಳನ್ನು ಸಾಮರ್ಥ್ಯಕ್ಕಿಂತ ಹೆಚ್ಚು ತುಂಬುತ್ತಿರುವ ಬಗ್ಗೆ, ಗಂಗೊಳ್ಳಿ ಆಲೂರು ಪಂಚಾಯತ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ಅನಂತರ ಹೊಂಡಕ್ಕೆ ಯಾವುದೇ ರೀತಿಯ ತಡೆಗೋಡೆ ನಿರ್ಮಿಸದಿರುವ ಬಗ್ಗೆ ದೂರು ಬಂದಿತ್ತು.