Advertisement

Cricket: ವಿಶ್ವ ಕ್ರಿಕೆಟನ್ನಾಳಿದ ದೈತ್ಯ: ವೆಸ್ಟ್‌ ಇಂಡೀಸ್‌

02:53 PM May 04, 2024 | Team Udayavani |

ಕ್ರಿಕೆಟ್‌ ಚರಿತ್ರೆಯಲ್ಲೇ ಏಕದಿನ ವಿಶ್ವಕಪ್‌ ಎಂಬ ಹೊಸ ಅಧ್ಯಾಯವೊಂದು ಶುರುವಾಗಿತ್ತು. 1975ರ ಮೊದಲ ವಿಶ್ವ ಸಮರದಲ್ಲಿ ವೆಸ್ಟ್‌ ಇಂಡೀಸ್‌ ತಂಡವು ರಾಜ ಗಾಂಭೀರ್ಯದಿಂದ ಮೊದಲ ಚೊಚ್ಚಲ ವಿಶ್ವಕಪ್‌ ಅನ್ನು ತನ್ನ ಮುಡಿಗೇರಿಸಿಕೊಂಡಿತು.

Advertisement

ಅನಂತರ 1979 ಎರಡನೇ ಆವೃತಿಯಲ್ಲೂ ವಿಶ್ವಕಪ್‌ ಅನ್ನು ಎತ್ತಿ ಹಿಡಿಯುವ ಮೂಲಕ ವಿಶ್ವಕ್ರಿಕೆಟ್‌ನ ಏಕೈಕ ಬಲಿಷ್ಠ ತಂಡವಾಗಿ ಹೊರಹೊಮ್ಮಿತು.

ವೆಸ್ಟ್‌ ಇಂಡೀಸ್‌ ಎಂಬ ಹೆಸರು ಕೇಳಿದರೆ ಸಾಕು ಇಡೀ ಕ್ರಿಕೆಟ್‌ ಜಗತ್ತೆ ಒಂದು ಕ್ಷಣ ದಂಗಾಗುತ್ತಿತ್ತು. ಯಾವುದೇ ಮೈದಾನವಾಗಲಿ, ಎದುರಾಳಿ ಯಾರೇ ಆಗಲಿ, ನಿರಾಯಾಸವಾಗಿ ಗೆದ್ದು ಬೀಗುತ್ತಿದ್ದ ತಂಡ ವೆಸ್ಟ್‌ ಇಂಡೀಸ್‌. 1983ರ ವಿಶ್ವ ಕಪ್‌ನಲ್ಲಿ ಸತತ ಮೂರನೇ ಬಾರಿಗೆ ಫೈನಲ್‌ಗೆ ಬಂದು ಹ್ಯಾಟ್ರಿಕ್‌ ಗೆಲುವು ಸಾಧಿಸುವ ವೆಸ್ಟ್‌ ಇಂಡೀಸ್‌ ಕನಸನ್ನು ಭಾರತದ ಹುಸಿಯಾಗಿಸಿತ್ತು.

ವೆಸ್ಟ್‌ ಇಂಡೀಸ್‌ ಎಂಬುದು ಒಂದು ದೇಶವಲ್ಲ. ಅದು 13 ದ್ವೀಪ ರಾಷ್ಟ್ರಗಳನೊಳಗೊಂಡ ಕ್ರಿಕೆಟ್‌ ಸಂಸ್ಥೆಯಾಗಿದೆ. 1960ರಿಂದ 1985ರ 25 ವರ್ಷ ಗಳ ಅವಧಿಯನ್ನು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನ ಸುವರ್ಣ ಯುಗ ಎಂದು ಕರೆಯುವುದುಂಟು. ಏಕೆಂದರೆ ಈ ಅವಧಿಯಲ್ಲಿ ಆಡಿದ ಟೆಸ್ಟ್‌ ಪಂದ್ಯ ಗಳಲ್ಲಿ ಒಂದನ್ನೂ ಸೋಲದೆ ಟೆಸ್ಟ್‌ ಕ್ರಿಕೆಟ್‌ ಜಗತ್ತಿನಸಾಮ್ರಾಟನಾಗಿತ್ತು.

ಕಾಲಿನ್‌ ಕ್ರಾಫ್ಟ್, ಆ್ಯಂಡಿ ರಾಬರ್ಟ್‌, ಕರ್ಟ್ಲಿ ಆ್ಯಂಬ್ರೋಸ್‌ನಂತಹ ವೇಗಿಗಳು ಎಸೆಯುತ್ತಿದ್ದ ಚೆಂಡು ಎದುರಾಳಿ ಬ್ಯಾಟ್ಸ್‌ ಮ್ಯಾನ್‌ಗಳ ದವಡೆಯನ್ನು ಒಡೆದು ಹಾಕುತ್ತಿದ್ದವು. ಬ್ಯಾಟಿಂಗ್‌ನಲ್ಲಿ ಬ್ರಿಯಾನ್‌ ಲಾರಾ, ರಿಚರ್ಡ್‌ನಂತಹ ಆಟಗಾರರು ಎದುರಾಳಿ ಬೌಲರ್‌ಗಳನ್ನು ದಂಡಿಸುತ್ತಿದ್ದರು.

Advertisement

ಟಿ20 ಮಾದರಿಯಲ್ಲಿ ಕ್ರಿಸ್‌ ಗೇಲ…, ಕರನ್‌ ಪೊಲಾರ್ಡ್‌, ಆ್ಯಂಡ್ರೆ ರಸೆಲ್‌, ಸುನಿಲ್‌ ನರೇನ್‌, ಡ್ಯಾರನ್‌ ಸಮಿ ಅಂತಹ ಆಟಗಾರರು ರಾಕ್ಷಸರಂತೆ ಆಡುತ್ತಿದ್ದರು. ಆದುದರಿಂದಲೇ 2002 ಮತ್ತು 2016ರ ಟಿ-20 ವಿಶ್ವಕಪ್‌ ಅನ್ನು ವೆಸ್ಟ್‌ ಇಂಡೀಸ್‌ ತನ್ನದಾಗಿಸಿಕೊಂಡಿತ್ತು.

ವಿಶ್ವ ಕಪ್‌ ಟೂರ್ನಿಯಿಂದ ಹೊರ ಉಳಿದ ವೆಸ್ಟ್‌ ಇಂಡೀಸ್‌

ಒಂದು ಕಾಲದಲ್ಲಿ ಕ್ರೆಕೆಟ್‌ ಜಗತ್ತನ್ನೇ ಆಳಿದ ವೆಸ್ಟ್‌ ಇಂಡೀಸ್‌ ತಂಡವು ಈಗ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಹರಸಾಹಸ ಪಡುತ್ತಿರುವುದು ಕರುಣಾಜನಕವಾದುದು. 2022ರ ಟಿ20 ವಿಶ್ವಕಪ್‌ಕ್ವಾಲಿಫೈಯರ್‌ ಹಂತದಲ್ಲಿ ಸ್ಕಾಟ್‌ ಲ್ಯಾಂಡ್‌ ವಿರುದ್ಧ ಸೋತು 2022ರ ಟಿ20 ವಿಶ್ವಕಪ್‌ನಿಂದ ದೂರ ಸರಿದಿತ್ತು. ಅನಂತರ 2023ರ ಏಕದಿನ ವಿಶ್ವಕಪ್‌ನ ಕ್ವಾಲಿಫೈಯರ್‌ ಹಂತದಲ್ಲಿ ನೆದರ್‌ ಲ್ಯಾಂಡ್‌ ವಿರುದ್ಧ ಸೋತು ತೀವ್ರ ಮುಖಭಂಗವನ್ನು ಅನುಭವಿಸಿ ಪ್ರಸಕ್ತ ವಿಶ್ವಕಪ್‌ನಿಂದಲೂ ಹೊರ ನಡೆಯಬೇಕಾಯಿತು.

ಆಟಗಾರರು ಮತ್ತು ಬೋರ್ಡ್‌ ನಡುವಿನ ಮನಸ್ತಾಪ

1997ರಲ್ಲಿ ಭಾರತದ ವಿರುದ್ಧ ಸರಣಿ ನಡೆಯುತ್ತಿದ್ದ ಸಮಯದಲ್ಲಿ ಇಂಡೀಸ್‌ ಆಟಗಾರನಾದ ಆ್ಯಂಬ್ರೋಸ್‌ ಅವರ ಮನೆ ಪ್ರಕೃತಿ ವಿಕೋಪಕ್ಕೆ ಸಿಲುಕಿ ನೆಲಸಮವಾಗುತ್ತದೆ. ಆಗ ಆಂಬ್ರೋಸ್‌ ಬೋರ್ಡ್‌ ಬಳಿ ಸಹಾಯ ಕೇಳುತ್ತಾನೆ. ಇದಕ್ಕೆ ಬೋರ್ಡ್‌ ಒಪ್ಪುವುದಿಲ್ಲ. ಅನಂತರ ಅವರೇ ಆಟವನ್ನು ಅರ್ಧಕ್ಕೆ ನಿಲ್ಲಿಸಿ ತನ್ನ ದೇಶಕ್ಕೆ ಮರಳುತ್ತಾರೆ. ಇದರ ಪರಿಣಾಮವಾಗಿ ಆಟಗಾರರು ಮತ್ತು ಬೋರ್ಡ್‌ನ ನಡುವೆ ಮನಸ್ತಾಪ ಹೆಚ್ಚಾಗುತ್ತದೆ.

ವಿಶ್ವಾದ್ಯಂತ ಹಲವಾರು ಕ್ರಿಕೆಟ್‌ ಲೀಗ್‌ಗಳು ನಡೆಯುತ್ತವೆ. ಅದರಲ್ಲಿ ಮುಂಚೂಣಿಯಲ್ಲಿರುವುದು ಬಿಸಿಸಿಐ ನಡೆಸುವ ಐಪಿಎಲ್ ವೆಸ್ಟ್‌ ಇಂಡೀಸ್‌ ಆಟಗಾರರಿಗೆ ಐಪಿಎಲ್‌ನಲ್ಲಿ ಬಹು ಬೇಡಿಕೆ ಇದೆ. ಆಟಗಾರರು ತನ್ನ ಜೀವನವಿಡಿ ದುಡಿಯುತ್ತಿದ್ದ ಹಣವನ್ನು ಐಪಿಎಲ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಗಳಿಸಬಹುದು. ಹೀಗೆ ವೆಸ್ಟ್‌ ಇಂಡೀಸ್‌ನ ಬಹುತೇಕ ಆಟಗಾರರು ತಂಡಕ್ಕೆ ವಿದಾಯ ಹೇಳಿ ಲೀಗ್‌ಗಳಲ್ಲಿ ಮಿಂಚುತ್ತಿದ್ದಾರೆ.

ಆಟಗಾರರ ಸಂಬಳದಲ್ಲಿ ಕಡಿತ

2014ರಲ್ಲಿ ವೆಸ್ಟ್‌ ಇಂಡೀಸ್‌ ಬೋರ್ಡ್‌ ಆಟಗಾರರ ಸಂಬಳದಲ್ಲಿ ಶೇ. 25ರಷ್ಟು ಕಡಿತಗೊಳಿಸುತ್ತದೆ. ಇದರಿಂದ ಸಿಟ್ಟಾದ ಆಟಗಾರರು ಭಾರತದ ವಿರುದ್ಧ ಆಡಬೇಕಿದ್ದ ಸರಣಿಯನ್ನು ಬಹಿಷ್ಕರಿಸುತ್ತಾರೆ.

ಆಟಗಾರರ ಆಯ್ಕೆಯಲ್ಲಿ ಗೊಂದಲ

ವೆಸ್ಟ್‌ ಇಂಡೀಸ್‌ ಹಲವು ದೇಶಗಳು ಸೇರಿಕೊಂಡು ಮಾಡಿರುವ ಕ್ರಿಕೆಟ್‌

ಬೋರ್ಡ್‌ ಆಗಿರುವುದರಿಂದ ಆಟಗಾರರನ್ನು ಆಯ್ಕೆ ಮಾಡುವ ಸಮಯದಲ್ಲಿ ದೊಡ್ಡ ಮಟ್ಟದ ರಾಜಕೀಯ ನಡೆಯುತ್ತದೆ. ಉದಾಹರಣೆಗೆ ಆಟಗಾರ ಶಿಮ್ರಾನ್‌ ಹೆಟ್‌ಮೈರ್‌ ತನ್ನ ವಿಮಾನದಲ್ಲಿ ಬರುವುದು ತಡ  ಮಾಡಿದ್ದಕ್ಕಾಗಿ ವಿಶ್ವಕಪ್‌ ತಂಡದಿಂದಲೇ ಹೊರ ಹಾಕಲಾಯಿತು.

ಈ ಎಲ್ಲ ಅಂಶಗಳಿಂದ ಕ್ರಿಕೆಟ್‌ ಜಗತ್ತಿನ ಬಲಿಷ್ಟ ತಂಡ ವೆಸ್ಟ್‌ ಇಂಡೀಸ್‌ ಪತನವಾಯಿತು. ವಿಶ್ವಕಪ್‌ನಲ್ಲೂ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಅಸಾಧ್ಯವಾದಷ್ಟು.

-ಶಿವರಾಜು ವೈ. ಪಿ.

ತುಮಕೂರು ವಿವಿ

Advertisement

Udayavani is now on Telegram. Click here to join our channel and stay updated with the latest news.

Next