ಭಾರತ ಜನಪದಗಳಲ್ಲಿ ಒಂದಾದ ತೊಗಲುಗೊಂಬೆ ಆಟ ಪ್ರಸಿದ್ಧ ಜನಪದ ಕಲೆಯಾಗಿತ್ತು. ಈ ತೊಗಲುಗೊಂಬೆ ಆಟವನ್ನು ಶಾತವಾಹನ ಪಲ್ಲವ ಮತ್ತು ಕಾಕತಿಯ ರಾಜ ಮನೆತನಗಳಲ್ಲಿ ಪ್ರಸಿದ್ಧ ಮನರಂಜನೆ ವಿಧಾನವಾಗಿತ್ತು. ಮಹಾಭಾರತದಲ್ಲಿ ನೆರಳು ಗೊಂಬೆ ಆಟ ಎಂದು ಕರೆಯುತ್ತಿದ್ದರು.
ಈ ಗೊಂಬೆಯನ್ನು ತಯಾರು ಮಾಡಲು ಜಿಂಕೆ ಮತ್ತು ಆಡಿನ ಚರ್ಮ ಉಪಯೋಗಿಸುತ್ತಿದ್ದರು. ವಿಶೇಷವಾಗಿ ದೇವರ ಗೊಂಬೆಯನ್ನು ಮಾಡಲು ಜಿಂಕೆ ಚರ್ಮವನ್ನು ಮಾತ್ರ ಉಪಯೋಗಿಸುತ್ತಿದ್ದರು.
ಹೆಣ್ಣು ಗೊಂಬೆಗಳಿಗೆ ಸೀರೆ ಮತ್ತು ಗಂಡು ಗೊಂಬೆಗಳಿಗೆ ಪಂಚೆ ಉಡಿಸಿ ಬಣ್ಣಗಳಿಂದ ಅಲಂಕಾರ ಮಾಡುತ್ತಿದ್ದರು. ಆ ಗೊಂಬೆಗಳ ಮೂಲಕ ಹೆಣ್ಣಿನ ಜೀವನ ಹೇಗೆ ಕಷ್ಟಗಳಿಂದ ತುಂಬಿರುತ್ತದೆ ಎಂಬುದನ್ನು ಚಿತ್ರಿಸುತ್ತಿದ್ದರು. ಅಲ್ಲದೆ ಹಲವು ಗ್ರಾಮಗಳ ಜೀವನ ಚಿತ್ರಿಸುತ್ತಿದ್ದರು. ಪರದೆ ಹಿಂದೆ ನಿಂತು ಗೊಂಬೆಯನ್ನು ಕುಣಿಸುತ್ತಾ ಎಲ್ಲರಿಗೂ ಮನೋರಂಜನೆ ನೀಡುವ ತೊಗಲುಗೊಂಬೆ ಆಟ ಇಂದು ಕಣ್ಮರೆಯಾಗಿದೆ.
ತೊಗಲುಗೊಂಬೆ ಆಟಕ್ಕೆ ಜನಪ್ರಿಯತೆ ಕಡಿಮೆಯಾದಂತೆ. ಆಡಿಸುವ ಕಲಾವಿದರಿಗೂ ಬೇಡಿಕೆ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಯಾವುದೇ ಆದಾಯವಿಲ್ಲದೆ ಬೇರೆ ಕೆಲಸಕ್ಕೆ ಹುಡುಕಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ನಮ್ಮ ಪ್ರತಿಯೊಂದು ಜನಪದ ಕಲೆಯೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಸಾರುತ್ತದೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆ ಎಂದಿಗೂ ನಾಶವಾಗಬಾರದು. ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ.
-ಅನಿತಾ ಹೂಗಾರ್
ಕೊಣಾಜೆ