Advertisement

Photography: ಎಲ್ಲೆಲ್ಲೂ ಫೋಟೋಗ್ರಫಿ

11:06 AM Jan 05, 2025 | Team Udayavani |

ಪ್ರಸ್ತುತ ಫೋಟೋಗ್ರಫಿ ಜೀವನದ ಒಂದು ಭಾಗವೇ ಆಗಿಹೋಗಿದೆ. ಹಿಂದೆಲ್ಲ ಫೋಟೋಗ್ರಫಿ, ಫೋಟೋ ಶೂಟ್‌ಗಳು ಬರೀ ಶ್ರೀಂಮತರ ಪಾಲಿನ ಸ್ವತ್ತಾಗಿತ್ತು. ಆದರೆ ಜಗತ್ತಿಗೆ ಮೊಬೈಲ್‌ ಪರಿಚಯವಾದ ಅನಂತರ ಈಗ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಫೋಟೋ ಪ್ರಿಯರೇ ಆಗಿ ಹೋಗಿದ್ದಾರೆ. ಈ ಫೋಟೋಗ್ರಫಿ ಎಂಬ ಶಬ್ದವನ್ನು ಮೊದಲು ಪರಿಚಯಿಸಿದ್ದು 1839ರಲ್ಲಿ ಜಾನ್‌ ಹರ್ಷಲ್‌. ಈ ಫೋಟೋಗ್ರಫಿ ಶಬ್ದ ಗ್ರೀಕ್‌ ಮೂಲದಿಂದ ಬಂದಿದ್ದು ಇದರ ಅರ್ಥ ಬೆಳಕಿನ ಜತೆ ಬರವಣಿಗೆ ಎಂದು.

Advertisement

ಮೊದಲಿಗೆ ಚೀನ ದೇಶದವರು ಬೆಳೆಸಿಕೊಂಡ ಈ ಫೋಟೋಗ್ರಫಿ ಹವ್ಯಾಸ ಇಂದು ಜಗತ್ತಿನಾದ್ಯಂತ ಪಸರಿಸಿದೆ. ಅದರಲ್ಲೂ ಇತ್ತೀಚಿಗಂತೂ ಕಾರ್ಯಕ್ರಮದಲ್ಲಿ ಫೋಟೋಶೂಟ್‌ ನಡೆಯಲಿಲ್ಲವೆಂದರೆ ಆ ಕಾರ್ಯಕ್ರಮ ಸಂಪೂರ್ಣವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಫೋಟೋಗ್ರಫಿ ಜಗಜ್ಜಾಹಿರವಾಗಿದೆ. ಆ ಕಾಲದ ಕೊಡಕ್‌ ಕೆಮರಾದಿಂದ ಹಿಡಿದು ಇಂದಿನ ಡಿಎಸ್‌ಎಲ್‌ಆರ್‌ ವರೆಗೂ ಎಷ್ಟೋ ಕೆಮರಾಗಳ ಪರಿಚಯ ಪ್ರಪಂಚದಲ್ಲಿ ಆಗಿ ಹೋಗಿದೆ. ಕಾಲ ಕಳೆದಂತೆ, ಫೋಟೋಗ್ರಫಿಯಲ್ಲಿ ಆಧುನಿಕತೆ ಬಂದಂತೆ ಅದರಲ್ಲಿ ಅನೇಕ ವಿಧಗಳು ಹುಟ್ಟಿಕೊಂಡವು. ಇತ್ತೀಚಿಗೆ ನಾವು ನೋಡಬಹುದು ಪ್ರೀ ವೆಡ್ಡಿಂಗ್‌ ಶೂಟ್, ವೆಡ್ಡಿಂಗ್‌ ಶೂಟ್, ಬೇಬಿ ಶೂಟ್, ಪ್ರಗ್ನೆನ್ಸಿ ಶೂಟ್, ಬರ್ತ್‌ಡೇ ಶೂಟ್, ಅದರಲ್ಲೂ ಇತ್ತೀಚಿಗೆ ಎಲ್ಲರ ಬಾಯಿ ಮೇಲೆ ಬೆರಳಿಟ್ಟು ನೋಡುವಂತೆ ಮಾಡಿದ ವಿಚಿತ್ರ ಫೋಟೋಶೂಟ್‌ ಅಂದರೆ ಡಿವೋರ್ಸ್‌ ಫೋಟೋಶೂಟ್.

ಹಿಂದೆ ಮದುವೇಗೋ ಅಥವಾ ಯಾವುದೋ ಶುಭಕಾರ್ಯದಲ್ಲಿ ಮಾತ್ರ ಇಂತಹ ವ್ಯವಸ್ಥೆಯಿತ್ತು. ಆದರೀಗ ಜಗತ್ತು ತುಂಬಾ ಬೆಳೆದು ನಿಂತಿದೆ. ಫೋಟೋಗ್ರಫಿ ಇಲ್ಲದೆ ಜೀವನವೇ ಬೇಸರ ಎನ್ನುವಷ್ಟು. ಟ್ರಾವೆಲ್‌ಗೆ ಹೋದರೆ ಟ್ರಾವೆಲ್‌ ಫೋಟೋಗ್ರಫಿ, ರಸ್ತೆ ಬದಿಯಲ್ಲಿ ನಿಂತು ಚೈನೀಸ್‌ ಫ‌ುಡ್‌ ತಿಂದು ಫೋಟೋ ಕ್ಲಿಕಿಸಿದರೆ ಸ್ಟ್ರೀಟ್‌ ಫೋಟೋಗ್ರಫಿ, ಹೀಗೆ ವೆಡ್ಡಿಂಗ್‌ ಫೋಟೋಗ್ರಾಫಿ, ನೇಚರ್‌ ಫೋಟೋಗ್ರಫಿ, ವೈಲ್ಡ್‌ ಲೈಫ್ ಫೋಟೋಗ್ರಫಿ, ಅನೇಕ ವಿಧಗಳು.

ಭಾರತದಲ್ಲಿ ಫೋಟೋಗ್ರಫಿ ಪರಿಚಯವಾದದ್ದು ಎರಡನೇ ಮಹಾಯುದ್ಧದ ಸಮಯದಲ್ಲಿ ತದನಂತರ ಭಾರತದಲ್ಲಿಯೂ ಫೋಟೋಗ್ರಫಿ ಅಭಿವೃದ್ಧಿ ಪಡೆಯುತ್ತಾ ಹೋಯಿತು.

ಕೆಮರಾ, ಮೊಬೈಲ್‌ ಇದ್ದ ಮಾತ್ರಕ್ಕೆ ಫೋಟೋಗ್ರಾಫ‌ರ್‌ ಆಗಿಬಿಡಲು ಅಸಾಧ್ಯ. ತಾಳ್ಮೆ, ಬೆಳಕಿನ ಸಂಯೋಜನೆ, ಸೃಜನಶೀಲತೆ, ಒಬ್ಬ ಫೋಟೋಗ್ರಾಫ‌ರ್‌ಗೆ ಇರಬೇಕಾದ ಬಹುಮುಖ್ಯವಾದ ಗುಣಲಕ್ಷಣ. ಅದರ ಜತೆಗೆ ಯಾವ ಫೋಟೋಗ್ರಫಿಗೆ ಯಾವ ಲೆನ್ಸ್‌ ಸೂಕ್ತ, ಯಾವ ಆ್ಯಂಗಲ್‌ ಬೇಕು, ಜತೆಗೆ ಮುಖ್ಯವಾಗಿ ಅವರು ಆಯ್ದುಕೊಂಡ ವಿಷಯದ ಬಗ್ಗೆ ಸಂಪೂರ್ಣ ತಿಳುವಳಿಕೆ ಅಗತ್ಯ. ವೈಲ್ಡ್‌ಲೈಫ್ ಫೋಟೋಗ್ರಫಿಯಲ್ಲಿ ಹೇಳುವುದಾದರೆ ಇದಕ್ಕೆ ಮೊದಲು ಪ್ರಾಣಿಗಳ ನಡವಳಿಕೆಗಳ ಬಗ್ಗೆ ಜ್ಞಾನ ಅಗತ್ಯ. ಬಣ್ಣ ಬಣ್ಣದ ಬಟ್ಟೆ, ಸುಗಂಧ ದ್ರವ್ಯಗಳನ್ನು ಈ ಪೋಟೋಗ್ರಫಿಯಲ್ಲಿ ಬಳಸುವಂತಿಲ್ಲ. ಹೀಗೆ ಫೋಟೋಗ್ರಫಿ ಕೂಡ ಅದರದ್ದೇ ಆಯಾಮವನ್ನು ಹೊಂದಿದೆ. ಬಡವನಾಗಲಿ, ಸಿರಿವಂತನಾಗಲಿ ಕಲೆಯನ್ನು ತೋರಿಸಲು ದುಬಾರಿ ಬೆಲೆಯ ವಸ್ತುವೇ ಇರಬೇಕೆಂದಿಲ್ಲ.

Advertisement

- ದಿವ್ಯಾ

ನಾಯ್ಕನಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next