Advertisement

ದೆವ್ವ ಒಂದು; ಪಾತ್ರ ಎರಡು

10:48 AM Feb 02, 2018 | Team Udayavani |

ಇದು ಬೆಳಗಿನ ಹಾರರ್‌ ಚಿತ್ರ

Advertisement

“ಇದು ನನಗೆ ತುಂಬಾ ಹೊಸ ಅನುಭವ. ಗ್ಯಾಪ್‌ ತಗೊಂಡ ನಂತರ ಸಿಕ್ಕ ವಿಭಿನ್ನ ಪಾತ್ರ …’
– ಹೀಗೆ ಹೇಳಿ ನಕ್ಕರು ರೂಪಿಕಾ. ಹೊಸ ಪಾತ್ರ ಮಾಡಿದ ಖುಷಿಯಲ್ಲೇ ಮಾತನಾಡುತ್ತಾ ಹೋದರು. ಅವರ ಮಾತಿಗೆ ಕಾರಣವಾಗಿದ್ದು “ಮಂಜರಿ’. ಇದು ರೂಪಿಕಾ ನಾಯಕಿಯಾಗಿ ನಟಿಸಿರುವ ಚಿತ್ರ. ಚಿತ್ರ ಇಂದು ತೆರೆಕಾಣುತ್ತಿದೆ. ಸಹಜವಾಗಿಯೇ ರೂಪಿಕಾ ಕೂಡಾ ಎಕ್ಸೆ„ಟ್‌ ಆಗಿದ್ದಾರೆ. “ಒಂದೂವರೆ ವರ್ಷ ಗ್ಯಾಪ್‌ನ ನಂತರ ಬಂದ ನಾನು, ವಿಭಿನ್ನವಾದ, ನಟನೆಗೆ ಹೆಚ್ಚು ಅವಕಾಶವಿರುವಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದುಕೊಂಡಿದ್ದೆ. ಅದರಂತೆ ಈಗ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಅದರಲ್ಲಿ “ಮಂಜರಿ’ ಕೂಡಾ ಒಂದು. ಈ ಚಿತ್ರದ ಪಾತ್ರ ತುಂಬಾ ಭಿನ್ನವಾಗಿದೆ. ಎರಡು ಶೇಡ್‌ನ‌ ಪಾತ್ರ’ ಎಂದು ಖುಷಿಯಿಂದ ಹೇಳುತ್ತಾರೆ. ಚಿತ್ರದಲ್ಲಿ ರೂಪಿಕಾ ಸಖತ್‌ ರಿಸ್ಕಿ ಸ್ಟಂಟ್‌ ಮಾಡಿದ್ದಾರಂತೆ. ಸ್ಟಂಟ್‌ ಎಂದರೆ ಹೊಡೆದಾಟ ಮಾಡಿಲ್ಲ. ಬದಲಾಗಿ ಕೆಲವು ಏರಿಯಲ್‌ ಶಾಟ್‌ಗಳಲ್ಲಿ ರೂಪಿಕಾ  ಯಾವುದೇ ಡ್ನೂಪ್‌ ಇಲ್ಲದೇ ಪಾಲ್ಗೊಂಡಿದ್ದಾರೆ. ಇದು ಒಳ್ಳೆಯ ಅನುಭವ ಕೊಟ್ಟಿದೆಯಂತೆ. ಮೂಲತಃ ರೂಪಿಕಾ ಡ್ಯಾನ್ಸರ್‌ ಆಗಿದ್ದು, ಇಲ್ಲಿ ಅವರ ಕಣ್ಣುಗಳನ್ನು, ಹಾವ-ಭಾವಗಳನ್ನು ಚೆನ್ನಾಗಿ ಬಳಸಿಕೊಳ್ಳುವ ಅವಕಾಶ ಸಿಕ್ಕಿದೆಯಂತೆ. ಚಿತ್ರದಲ್ಲಿ ರೂಪಿಕಾ, ಮಂಜರಿ ಹಾಗೂ ಕಾವ್ಯಾ ಎಂಬ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ನಾಯಕರಾಗಿ ಪ್ರಭು ಮುಂಡ್ಕರ್‌  ನಟಿಸಿದ್ದಾರೆ. ಅವರಿಗೂ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ.

ಈ ಚಿತ್ರವನ್ನು ವಿಶೃತ್‌ ನಾಯಕ್‌ ನಿರ್ದೇಶಿಸಿದ್ದಾರೆ. ಈ ಹಿಂದೆ “ರಿಂಗ್‌ ಮಾಸ್ಟರ್‌’ ಎಂಬ ಸಿನಿಮಾ ಮಾಡಿರುವ ವಿಶೃತ್‌ ಈ ಬಾರಿ “ಮಂಜರಿ’ ಎಂಬ ಹಾರರ್‌ ಸಿನಿಮಾ ಮಾಡಿದ್ದಾರೆ. “ನಾನು ಬೇರೆ ಬೇರೆ ದೇಶಗಳ ಸಿನಿಮಾ ನೋಡಿದ್ದರಿಂದ ಆ ಸಿನಿಮಾಗಳಿಂದ ಪ್ರೇರಣೆಗೊಂಡು “ರಿಂಗ್‌ ಮಾಸ್ಟರ್‌’ ಚಿತ್ರ ಮಾಡಿದ್ದೆ. ಆದರೆ, “ಮಂಜರಿ’ ಪಕ್ಕಾ ಮಣ್ಣಿನ ಸಿನಿಮಾ. ಇದು ಹಾರರ್‌ ಸಿನಿಮಾವಾದರೂ ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ಮಾಡಿದ್ದೇನೆ. ಸಾಮಾನ್ಯವಾಗಿ ಹಾರರ್‌ ಸಿನಿಮಾ ಎಂದರೆ ಕತ್ತಲೆ, ಆ ಕಡೆ ತಿರುಗಿದರೂ ದೆವ್ವ, ಈ ಕಡೆ ತಿರುಗಿ ದೆವ್ವ ಎಂಬಂತಿದೆ. ಆದರೆ, ಇದು ಹಾರರ್‌ ಸಿನಿಮಾವಾದರೂ ಬಹುತೇಕ ಹಗಲಲ್ಲೇ ನಡೆಯುತ್ತದೆ’ ಎಂದು ಚಿತ್ರದ ವಿವರ ನೀಡಿದರು. 

ಧಾರಾವಾಹಿಗಳಲ್ಲಿ ನೆಗೆಟಿವ್‌ ಶೇಡ್‌ನ‌ಲ್ಲಿ ಕಾಣಿಸಿಕೊಳ್ಳುತ್ತಿರುವ ನಾಗೇಶ್‌ ಅವರಿಗೆ ಈ ಚಿತ್ರದಲ್ಲಿ ಪಾಸಿಟಿವ್‌ ರೋಲ್‌ ಸಿಕ್ಕಿದೆಯಂತೆ. ಚಿತ್ರದಲ್ಲಿ ಅಂಜನಪ್ಪ ಅವರು ಕೂಡಾ ನಟಿಸಿದ್ದು, ಚಿತ್ರೀಕರಣದ ವೇಳಾದ ಅನುಭವವನ್ನು ಹಂಚಿಕೊಂಡರು. ಚಿತ್ರಕ್ಕೆ ಮ್ಯಾಥ್ಯೂಸ್‌ ಮನು ಸಂಗೀತ ನೀಡಿದ್ದಾರೆ. ಈ ಚಿತ್ರವನ್ನು ಕಿರಣ್‌ ಹಾಗೂ ಶಂಕರ್‌ ನಿರ್ಮಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next