Advertisement

ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ವಾರ್ಷಿಕ ಮಹೋತ್ಸವದ ಧಾರ್ಮಿಕ ಸಭೆ

05:18 PM Feb 25, 2017 | Team Udayavani |

ನವಿಮುಂಬಯಿ: ಮನುಷ್ಯರು ತಮ್ಮ ಸ್ವಾರ್ಥಕ್ಕೋಸ್ಕರ ಸೇವೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ನಿಸ್ವಾರ್ಥವಾಗಿ ದೇವರ ಸೇವೆ ಮಾಡುವುದರಿಂದ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇಂತಹ ದೇವಾಲಯಗಳನ್ನು ನಿರ್ಮಿಸಿದ್ದರಿಂದ ನಮಗೆ ಧಾರ್ಮಿಕ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಅದನ್ನು ಉನ್ನತ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಾಗಿದೆ. ಮಕ್ಕಳಿಗೆ ಎಳೆಯ ಹರೆಯದಲ್ಲೇ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಒಂದು ದಿನದ ದೇವರ ಸೇವೆಯಿಂದ ಏನೂ ಪ್ರಯೋಜನವಿಲ್ಲ. ನಮ್ಮ ಜೀವಮಾನವಿಡೀ ದೇವರ ಸ್ಮರಣೆ ಮಾಡಿದರೆ ಮಾತ್ರ ಆತ್ಮಸಂತೃಪ್ತಿ ದೊರೆಯುತ್ತದೆ. ಭಜನೆಯ ಮೂಲಕ ಸ್ಥಾಪನೆಗೊಂಡ ಈ ದೇವಾಲಯ ಕಾರಣಿಕ ಕ್ಷೇತ್ರವಾಗಿ ಬೆಳೆದಿದೆ. ಇದರಿಂದಲೇ ತಿಳಿಯುತ್ತದೆ ಭಜನೆಗೆ ಎಷ್ಟು ಶಕ್ತಿಯಿದೆ ಎಂದು. ಇಲ್ಲಿ ಪ್ರತಿಯೊಂದು ಕಾರ್ಯವೂ ಶಾಸ್ತೋಕ್ತವಾಗಿ ನಡೆಯುತ್ತಿದ್ದು, ಇಂತಹ ಸೇವೆಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಶ್ರೀ ಮೂಕಾಂಬಿಕಾ ದೇವಾಲಯದ ತಂತ್ರಿಗಳಾದ ವಿದ್ವಾನ್‌ ರಾಮಚಂದ್ರ ಬಾಯರಿ ಅವರು ನುಡಿದರು.

Advertisement

ಫೆ. 21ರಂದು ಸಂಜೆ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಜರಗಿದ ದೇವಾಲಯದ 14ನೇ ವಾರ್ಷಿಕ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಸಮಿತಿಯವರು ದೇವಾಲಯದ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಮಿತಿಯ ಮುಂದಿನ ಯೋಜನೆಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ನುಡಿದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ಹೆಚ್ಚಿನ ದೇವಾಲಯಗಳು ಭಜನೆಯಿಂದ ಆರಂಭವಾದವುಗಳು. ಸಂಸ್ಥೆಯನ್ನು  ಸ್ಥಾಪಿಸಿ 44 ವರ್ಷಗಳಾದರೂ ದೇವಾಲಯ ನಿರ್ಮಿಸಿ 14 ವರ್ಷಗಳಾಗಿವೆ. ಆಗ ಸಿಡ್ಕೊàದಿಂದ ದೊರೆತ ಜಾಗದಲ್ಲಿ ದೇವಾಲಯವನ್ನು ಮಾತ್ರ ನಿರ್ಮಿಸಿದ್ಧೇವೆ. ಪ್ರಸ್ತುತ ಸತತ ಪ್ರಯತ್ನದಿಂದ ಸಿಡ್ಕೊàದಿಂದ 700 ಚದರಡಿ ಜಾಗ ದೊರೆತಿದೆ. ಸಿಕ್ಕಿದ ಜಾಗದಲ್ಲಿ ಸಭಾಭವನ, ಕಚೇರಿ, ಅರ್ಚಕರ ವಸತಿಗೃಹ ಇತ್ಯಾದಿಗಳನ್ನು ನಿರ್ಮಿಸಲು ಯೋಜನೆಯ ತಯಾರಿಸಲಾಗಿದೆ. ಅದಕ್ಕಾಗಿ ದೇವಾಲಯದ ಸದಸ್ಯರು ದೇಣಿಗೆ ಘೋಷಿಸಿದ್ದು, ಹಿರಿಯರಾದ ಅಣ್ಣಾವರ ಶಂಕರ್‌ ಶೆಟ್ಟಿ ಅವರ ಮಂದಾಳತ್ವದಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಯೋಜನೆಯ ಯಶಸ್ಸಿಗೆ ಎಲ್ಲರ ಸಹಕಾರವಿರಲಿ. ದೇವಿಯ ಅನುಗ್ರಹ ಸದಾ ನಿಮ್ಮ ಮೇಲಿರಲಿ ಎಂದರು.

ಮುಖ್ಯ ಅತಿಥಿಯಾಗಿ ಉದ್ಯಮಿ, ದೇವಾಲಯ ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಅಣ್ಣಾವರ ಶಂಕರ ಆರ್‌. ಶೆಟ್ಟಿ ಉಪಸ್ಥಿತರಿದ್ದರು. ಮಹಿಳಾ ವಿಭಾಗದವರು ಪ್ರಾರ್ಥನೆಗೈದರು. ದೇವಾಲಯ ಪದಾಧಿಕಾರಿಗಳು ಅತಿಥಿಗಳನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ದೇವಾಲಯದ ಮಾಜಿ ಕಾರ್ಯದರ್ಶಿ ಗಂಗಾಧರ ಅಂಚನ್‌ ದಂಪತಿ, ಕೋಶಾಧಿಕಾರಿ ಶೇಖರ್‌ ವಿ. ದೇವಾಡಿಗ ದಂಪತಿ, ಸದಸ್ಯರುಗಳಾದ ಪ್ರೇಮಾ ಶಂಕರ್‌ ಶೆಟ್ಟಿ, ಅನ್ನದಾನ ಹಾಗೂ ಯಕ್ಷಗಾನ ಸೇವಾಕರ್ತರಾದ ಶ್ರೀಧರ ಬಿ. ಪೂಜಾರಿ ದಂಪತಿ, ಯಕ್ಷಗಾನ ಮೇಳದ ಸಂಚಾಲಕ ಏಳಿಂಜೆ ಜಗದೀಶ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು. ಇತ್ತೀಚೆಗೆ ಮೂಕಾಂಬಿಕಾ ಚಾರಿಟೇಬಲ್‌ ಮಂಡಳದ ವತಿಯಿಂದ ನಡೆದ ಕ್ರೀಡೋತ್ಸವದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಯಾದಿಯನ್ನು ಹರೀಶ್‌ ಪಡುಬಿದ್ರೆ ಅವರು ಓದಿದರು.

ದೇವಾಲಯದ ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ದೇವಾಲಯದ ಸದಸ್ಯರಿಂದ, ತುಳುಕೂಟ ಐರೋಲಿ, ರಂಗಭೂಮಿ ಫೈನ್‌ಆರ್ಟ್ಸ್, ಚಿಣ್ಣರ ಬಿಂಬ ಮತ್ತು ಬಿಲ್ಲವರ ಅಸೋಸಿಯೇಶನ್‌ ನವಿಮುಂಬಯಿ ಸ್ಥಳೀಯ ಸಮಿತಿಯ ಸದಸ್ಯರಿಂದ ನೃತ್ಯ ವೈಭವ, ಕಿಶೋರ್‌ ಶೆಟ್ಟಿ ಪಿಲಾರ್‌ ರಚಿಸಿ, ಹರೀಶ್‌ ಪಡುಬಿದ್ರೆ ನಿರ್ದೇಶನದಲ್ಲಿ ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ ಅವರ ಸಹಕಾರದೊಂದಿಗೆ ಉಂದೆನಾÉ ನಂಬೋಲಿಯ ಹಾಸ್ಯ ನಾಟಕ ಪ್ರದರ್ಶನಗೊಂಡಿತು. ಅನಂತರ ಶ್ರೀಧರ ಪೂಜಾರಿ ಮತ್ತು ಕುಟುಂಬಸ್ಥರ ಸೇವಾರ್ಥಕವಾಗಿ ಶ್ರೀ ಸದ್ಗುರು ನಿತ್ಯಾನಂದ ಕೃಪಾಪೋಷಿತ ಯಕ್ಷಗಾನ ಮಂಡಳಿ ದಹಿಸರ್‌ ಅವರಿಂದ ಶ್ರೀ ದೇವಿ ಮಹಾತೆ¾ ಯಕ್ಷಗಾನ ಬಯಲಾಟ ನಡೆಯಿತು. ಶ್ರೀಧರ ಬಿ. ಪೂಜಾರಿ ಅವರ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ಶಂಕರ್‌ ಮೊಲಿ, ಹರೀಶ್‌ ಶೆಟ್ಟಿ ಪಡುಬಿದ್ರೆ, ಹರೀಶ್‌ ನಲ್ಲೂರು, ತಮ್ಮಯ್ಯ ಗೌಡ, ಗಣೇಶ್‌ ಶೆಟ್ಟಿ ಮೊದಲಾದವರು ಸಹಕರಿಸಿದರು.

Advertisement

ದೇವಾಲಯವು ವಿದ್ಯಾದಾನ, ಅನ್ನದಾನಕ್ಕೆ ಹೆಚ್ಚಿನ ಮಹತ್ವವವನ್ನು ನೀಡುತ್ತಿದೆ. ಮಂದಿರದ ಮುಂದಿನ ಯೋಜನೆಗಳಿಗೆ ನಮ್ಮೆಲ್ಲರ ಸಹಕಾರ ಸದಾಯಿದೆ 
   – ಸಿಬಿಡಿ ಭಾಸ್ಕರ ಶೆಟ್ಟಿ (ಅಧ್ಯಕ್ಷರು: ನಿತ್ಯಾನಂದ ಸೇವಾ ಟ್ರಸ್ಟ್‌).

ಇಂದಿನ ಸಭೆ ನೋಡುವಾಗ ತುಂಬಾ ಸಂತೋಷವಾಗುತ್ತಿದೆ. ಜತೆ ಶಂಕರ್‌ ಶೆಟ್ಟಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಆನಂದವಾಗುತ್ತಿದೆ. ಅವರನ್ನು ಮುಂದಿಟ್ಟುಕೊಂಡು ನೀವೆಲ್ಲರು ಮಾಡುವ ಕಾರ್ಯ ಯಶಸ್ವಿಯಾಗಲಿ    
    – ಜಗನ್ನಾಥ್‌ ಕೆ. ಶೆಟ್ಟಿ ( ಅಧ್ಯಕ್ಷರು: ಮಹಾರಾಷ್ಟÅ ಹೊಟೇಲ್‌ ಫೆಡರೇಷನ್‌).

ನವಿಮುಂಬಯಿಯ ಪ್ರಸಿದ್ಧ ಮೂರು ದೇವಾಲಯಗಳ ಅಧ್ಯಕ್ಷರು ಈ ವೇದಿಕೆಯಲ್ಲಿರುವುದು ಸಂತೋಷದ ಸಂಗತಿ. ಕಾರಣಿಕ ಕ್ಷೇತ್ರವಾಗಿರುವ ಈ ದೇವಾಲಯವು ಭಕ್ತಾದಿಗಳನ್ನು ಆಕರ್ಷಿಸುತ್ತಿದೆ. ಮಂದಿರದ ಯೋಜನೆಗಳಿಗೆ ನಮ್ಮ ಸಹಕಾರ ಸದಾಯಿದೆ 
  – ಶ್ಯಾಮ ಎನ್‌. ಶೆಟ್ಟಿ ( ಮಾಜಿ ಅಧ್ಯಕ್ಷರು: ಬೋಂಬೆ ಬಂಟ್ಸ್‌ ಅಸೋಸಿಯೇಶನ್‌).

ನಮ್ಮ ಎರಡೂ ದೇವಾಲಯಗಳು ಭಜನೆಯಿಂದಲೇ ಆರಂಭಗೊಂಡಿದೆ. ಇಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತಿರುವುದರಿಂದಲೇ ಇಷ್ಟು ಜನ ಭಕ್ತಾದಿಗಳು ಇಂದು ಸೇರಿದ್ದಾರೆ. ನಿಮಗೆಲ್ಲರಿಗೂ ಶ್ರೀ ಶನೀಶ್ವರ, ಮೂಕಾಂಬಿಕೆಯ ಅನುಗ್ರಹವಿರಲಿ 
– ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ (ಅಧ್ಯಕ್ಷರು: ಶ್ರೀ ಶನೀಶ್ವರ ಮಂದಿರ ನೆರೂಲ್‌).

ನಾವು ಹಿಂದು ಧರ್ಮದವರಾದರೂ ನಮಗೆ ದೇವಾಲಯಕ್ಕೆ ಬರಲು ಸಮಯ ಸಿಗುವುದಿಲ್ಲ. ಮುಸ್ಲಿಂಮರು ಶುಕ್ರವಾರ ಮತ್ತು ಕ್ರೈಸ್ತರು ಪ್ರತೀ ರವಿವಾರ ಕಡ್ಡಾಯವಾಗಿ ಪ್ರಾರ್ಥನೆಗೆ ಹೋಗುತ್ತಾರೆ. ಅದೇ ರೀತಿ ಹಿಂದುಗಳಾದ ನಾವು ಹೆಚ್ಚಿನ ಸಂಖ್ಯೆಯಲ್ಲಿ ಇಂದಹ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬೇಕು 
   – ಕಿಶೋರ್‌ ಎಂ. ಶೆಟ್ಟಿ (ಅಧ್ಯಕ್ಷರು: ಶ್ರೀ ಅಯ್ಯಪ್ಪ ಮಂದಿರ ನೆರೂಲ್‌).

ತುಳು-ಕನ್ನಡಿಗರಿಂದ ನಡೆಸಲ್ಪಡುವ 3-4 ದೇವಾಲಯಗಳು ನವಿಮುಂಬಯಿಯಲ್ಲಿವೆ. ರಂಗಭೂಮಿ, ತುಳುಕೂಟ ಸಂಸ್ಥೆಗಳೂ ಇಲ್ಲಿವೆ. ಅದರ ಮುಖಾಂತರ ಸಮಾಜ ಸೇವೆ ಮಾಡುವ ತುಂಬಾ ಅವಕಾಶವಿದೆ. ಅದರ ಲಾಭವನ್ನು ನಾವೆಲ್ಲರೂ ಪಡೆಯಬೇಕು. ದೇವಾಲಯದ ಮುಂದಿನ ಯೋಜನೆಗಳಿಗೆ ನಮ್ಮೆಲ್ಲರ ಸಹಕಾರ ಸದಾ ಇರಲಿದೆ  
   – ವಿಜಯ ಬಿ. ಹೆಗ್ಡೆ (ಅಧ್ಯಕ್ಷರು : ಹೆಗ್ಗಡೆ ಸೇವಾ ಸಂಘ ಮುಂಬಯಿ).

ಅಧ್ಯಕ್ಷ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ನಮಗೆ ಕೆಲಸ ಮಾಡಲು ತುಂಬಾ ಸಂತೋಷವಾಗುತ್ತಿದೆ. ಈಗ ಶಂಕರ್‌ ಶೆಟ್ಟಿ ಅವರು ನಮ್ಮ ಜತೆಗಿರುವುದರಿಂದ ನಮಗೆ ಆನೆ ಬಲ ಬಂದಂತಾಗಿದೆ. ನಮ್ಮ ಮುಂದಿನ ಯೋಜನೆಗಳಿಗೆ ನಿಮ್ಮೆಲ್ಲರ ಸಹಕಾರವಿರಲಿ. ಶ್ರೀಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ, ಇನ್ನಿತರ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದಲೇ ಇಷ್ಟೊಂದು ಪ್ರಸಿದ್ಧಿಯನ್ನು ಪಡೆದಿದೆ 
 -ನಂದಿಕೂರು ಜಗದೀಶ್‌ ಶೆಟ್ಟಿ  (ಅಧ್ಯಕ್ಷರು : ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆ).

Advertisement

Udayavani is now on Telegram. Click here to join our channel and stay updated with the latest news.

Next