Advertisement

ಜನರಲ್‌ ಮೋಟರ್ಸ್‌:ಸಿಎಫ್ಒ ಆಗಿ ಭಾರತೀಯ ಮೂಲದ  ದಿವ್ಯಾ ಸೂರ್ಯ ದೇವರ

11:57 AM Jun 15, 2018 | |

ಹ್ಯೂಸ್ಟನ್‌: ಅಮೆರಿಕದ ಜನಪ್ರಿಯ ಕಾರು ತಯಾರಕ ಕಂಪನಿ ಜನರಲ್‌ ಮೋಟರ್ಸ್‌ (ಜಿಎಂ)ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ)ಯಾಗಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ದಿವ್ಯಾ ಸೂರ್ಯ ದೇವರ (39) ಅವರನ್ನು ನೇಮಿಸಲಾಗಿದೆ. 

Advertisement

ಅಮರಿಕದ ಮೋಟಾರು ವಾಹನ ಉತ್ಪಾ ದನಾ ಸಂಸ್ಥೆಗಳ ಇತಿಹಾಸದಲ್ಲಿಯೇ ಈ ನೇಮಕ ಮೊದಲನೇಯದ್ದಾಗಿದೆ. ಚೆನ್ನೈನಲ್ಲಿ ಜನಿಸಿದ ದಿವ್ಯಾ ಸೂರ್ಯದೇವರ ಜಿ.ಎಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮೇರಿ ಬಾರ್ರಾ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ. ಗಮನಾರ್ಹ ಅಂಶವೆಂದರೆ ಜನರಲ್‌ ಮೋಟರ್ಸ್‌ನ (ಜಿ.ಎಂ.)ನ ಸಿಇಒ ಮೇರಿ ಅವರೂ ಕೂಡ 2014ರಲ್ಲಿ ನೇಮಕಗೊಂಡಿದ್ದು, ಅಟೊಮೊಬೈಲ್‌ ಕಂಪನಿಯೊಂದರ  ಸಿಇಒ ಹುದ್ದೆಯನ್ನು ನಿರ್ವಹಿಸುವ ಏಕೈಕ ಮಹಿಳೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ವಾಹನ ಉತ್ಪಾದನಾ ಕಂಪನಿ ಯೊಂದರ ಸಿಇಒ ಮತ್ತು ಸಿಎಫ್ಒ ಹುದ್ದೆ ಗಳನ್ನು ಮಹಿಳೆಯರೇ ನಿರ್ವಹಿಸುವಂತಾಗಿ ರು ವುದು ಸಾಧನೆಯೇ ಸರಿ. 

ಇತ್ತೀಚೆಗಷ್ಟೇ ಜಿಎಂನ ಪುನಾರಚನೆಯಲ್ಲಿ ದಿವ್ಯಾ ಪ್ರಮುಖ ಪಾತ್ರ ವಹಿಸಿದ್ದರು. ಐರೋಪ್ಯ ಒಕ್ಕೂಟದಲ್ಲಿರುವ ಅಂಗಸಂಸ್ಥೆ ಒಪೆಲ್‌ನಿಂದ ಬಂಡವಾಳ ಹಿಂಪಡೆಯುವ ಪ್ರಕ್ರಿಯೆ, ಸೆಲ್ಫ್  ಡ್ರೈವಿಂಗ್‌ ವಾಹನ ಸ್ಟಾರ್ಟಪ್‌ “ಕ್ರೂéಸ್‌’ ಅನ್ನು ಖರೀದಿ ಮಾಡು ವುದರಲ್ಲಿ, ಜಪಾನ್‌ನ ಸ್ಟಾಫ್ಟ್ ಬ್ಯಾಂಕ್‌ ಜಿಎಂನಲ್ಲಿ 225 ಕೋಟಿ ಡಾಲರ್‌ ಮೊತ್ತದಷ್ಟು ಹೂಡಿಕೆ ಮಾಡುವಲ್ಲಿಯೂ ದಿವ್ಯಾ ಪ್ರಮುಖ ಪಾತ್ರ ವಹಿಸಿದ್ದರು. ಇದರ ಜತೆಗೆ ಕಂಪನಿಯ ಸಿಇಒ ಮತ್ತು ಮುಖ್ಯ ಹೂಡಿಕೆ ಅಧಿಕಾರಿಯಾಗಿ 2013 ರಿಂದ 2017ರ ವರೆಗೆ ಕರ್ತವ್ಯ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next