Advertisement

Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್

03:31 PM Nov 02, 2024 | Team Udayavani |

ತಿರುವನಂತಪುರಂ: ಕಳೆದ ಕೆಲ ದಿನಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ಮದುವೆಯ ಫೋಟೋಗಳು ವೈರಲ್‌ ಆಗುತ್ತಿದೆ. ಗಡ್ಡ ಹಣ್ಣಾಗಿರುವ ವ್ಯಕ್ತಿಯ ಜತೆ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ವಿವಾಹವಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisement

ಮಲಯಾಳಂ ಕಿರುತೆರೆಯ ಜನಪ್ರಿಯ ನಟ ಕ್ರಿಸ್ ವೇಣುಗೋಪಾಲ್ (Kris Venugopal) ನಟಿ ದಿವ್ಯಾ ಶ್ರೀಧರ್(Actress Divya Sreedhar) ಜತೆ ಇತ್ತೀಚೆಗೆ ಗುರುವಾಯೂರು ದೇವಸ್ಥಾನದಲ್ಲಿ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಕ್ರಿಸ್‌ ವೇಣುಗೋಪಾಲ್‌ ಹಾಗೂ ದಿವ್ಯಾ ಶ್ರೀಧರ್‌ ಇಬ್ಬರು ಮಲಯಾಳಂ ಕಿರುತೆರೆಯಲ್ಲಿ ಜನಪ್ರಿಯ ಕಲಾವಿದರಾಗಿದ್ದಾರೆ. ಖಳನಾಯಕಿಯಾಗಿ ಕಿರುತೆರೆ ಲೋಕದಲ್ಲಿ ಹೆಚ್ಚಾಗಿ ದಿವ್ಯಾ ಕಾಣಿಸಿಕೊಂಡಿದ್ದಾರೆ.

ಕ್ರಿಸ್‌ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಧಾರಾವಾಹಿಯ ಶೂಟಿಂಗ್‌ ವೇಳೆ ಪರಿಚಯವಾಗಿ ಆತ್ಮೀಯರಾದರು. ಈ ಆತ್ಮೀಯತೆ ಪ್ರೀತಿಗೆ ತಿರುಗಿತು.  ದಿವ್ಯಾ ಅವರಿಗೆ ಇದು 2ನೇ ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ.

Advertisement

ಕ್ರಿಸ್‌ – ದಿವ್ಯಾ ಇಬ್ಬರ ಮದುವೆ ಫೋಟೋ, ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವುದರ ಜತೆಗೆ ಟ್ರೋಲ್‌ಗೆ ಒಳಗಾಗಿದೆ. ಅನೇಕರು ದಿವ್ಯಾ ಅವರು ತಮ್ಮ ಲೈಂಗಿಕ ಆಸೆಯನ್ನು ಪೂರ್ತಿ ಮಾಡಿಕೊಳ್ಳಲು 65 ವರ್ಷದ ಮುದುಕನನ್ನು ಮದುವೆಯಾಗಿದ್ದಾರೆ ಎಂದು ಕೆಟ್ಟದಾಗಿ ಕಮೆಂಟ್‌ ಮಾಡಿದ್ದಾರೆ.

ಇಂತಹ ಕಮೆಂಟ್‌ ಗಳನ್ನು ಓದಿರುವ ದಿವ್ಯಾ ಅವರು ನೊಂದಿದ್ದು, ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.

ನಾನು ಸೆ*ಕ್ಸ್‌ ಗಾಗಿ ಮದುವೆಯಾಗಿಲ್ಲ. ನಾನು ನನ್ನ ಮಕ್ಕಳು ಸುರಕ್ಷಿತವಾಗಿರಲು ಬಯಸುತ್ತೇನೆ. ಅವರಿಗೊಬ್ಬ ತಂದೆ ಬೇಕು. ನನಗೊಂದು ಐಡೆಂಟಿಟಿ ಬೇಕಿತ್ತು. ಲೈಂಗಿಕತೆ ಮಾತ್ರ ಜೀವನ ಎಂದು ಎಲ್ಲಿಯಾದರೂ ಬರೆಯಲಾಗಿದೆಯೇ? ಒಬ್ಬ ವ್ಯಕ್ತಿಯು ಲೈಂಗಿಕತೆ ಇಲ್ಲದೆ ಬದುಕಲು ಸಾಧ್ಯವಿಲ್ಲವೇ? ಸೆ*ಕ್ಸ್‌ ಜೀವನದ ಒಂದು ಭಾಗವಷ್ಟೇ. ಅವರಿಗೆ 49 ವರ್ಷ ನನಗೆ 40 ವರ್ಷವೆಂದು ನಟಿ ದಿವ್ಯಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next