Advertisement

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

01:48 AM Nov 26, 2024 | Team Udayavani |

ಹೊಸದಿಲ್ಲಿ: ರೈತರ ಜೀವನ ಸುಧಾರಣೆ, ಆದಾಯ ಹೆಚ್ಚಳ ಸೇರಿದಂತೆ ಕೃಷಿಯಲ್ಲಿ ಆವಿಷ್ಕಾರ, ಶಿಕ್ಷಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಬರೋಬ್ಬರಿ 14,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಈ ಯೋಜನೆಗಳನ್ನು ಜಾರಿ ಮಾಡಲು ಸೆಪ್ಟೆಂಬರ್‌ನಲ್ಲೇ ಸಚಿವ ಸಂಪುಟ ಅನುಮೋದನೆ ನೀಡಿತ್ತು.

Advertisement

ಯೋಜನೆಯ ಬಗ್ಗೆ ಸೋಮವಾರ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌, 2,817 ಕೋಟಿ ರೂ. ಕೃಷಿ ಡಿಜಿಟಲ್‌ ಮಿಷನ್‌ಗೆ, ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಗೆ 3,979 ಕೋಟಿ ರೂ. ಯೋಜನೆ ಸೇರಿದಂತೆ 7 ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಇದಲ್ಲದೇ ಕೃಷಿ ಶಿಕ್ಷಣ, ನಿರ್ವಹಣೆಗೆ 2,291 ಕೋಟಿ ರೂ.ಗಳನ್ನು ನೀಡಲಾಗಿದೆ.

ಸುಸ್ಥಿರ ಜಾನುವಾರು ಆರೋಗ್ಯ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು 1,702 ಕೋಟಿ ರೂ., ತೋಟಗಾರಿಕೆ ಅಭಿವೃದ್ಧಿಗೆ 1,129 ಕೋಟಿ ರೂ., ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿಗೆ 1,202 ಕೋಟಿ ರೂ., ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ 1,115 ಕೋಟಿ ರೂ. ಯೋಜನೆಯನ್ನು ಘೋಷಿಸಲಾಗಿತ್ತು. ಇದೇ ವೇಳೆ, ಮುಂಬಯಿ- ಇಂದೋರ್‌ ನಡುವೆ 309 ಕಿ.ಮೀ. ಉದ್ದದ ರೈಲ್ವೇ ಲೈನ್‌ ನಿರ್ಮಾಣ ಯೋಜನೆಗೂ ಸಂಪು ಟ ಒಪ್ಪಿಗೆ ನೀಡಿದೆ ಎಂದೂ ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next