Advertisement

Gandhiji: ಸರ್ವೋದಯ ಆಶಯದೊಂದಿಗೆ GCPAS

11:43 PM Oct 01, 2023 | Team Udayavani |

ವೈದ್ಯಕೀಯ, ಎಂಜಿನಿಯರಿಂಗ್‌, ಫಾರ್ಮಾ ಸ್ಯೂಟಿಕಲ್‌ ಮೊದಲಾದ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಮಣಿಪಾಲದ ಮಾಹೆ ವಿ.ವಿ. ಕಲೆ, ಸಂಸ್ಕೃತಿ ವಿಭಾಗದಲ್ಲಿಯೂ ಮುಂಚೂಣಿಯಲ್ಲಿದೆ. ಇಲ್ಲಿ ಗಾಂಧೀಜಿ ತತ್ತ್ವಾದರ್ಶಗಳ ಅಧ್ಯಯನಕ್ಕಾಗಿ ಪ್ರತ್ಯೇಕ ಕೋರ್ಸ್‌ ನಡೆಯುತ್ತಿದೆ.

Advertisement

ಒಂದಲ್ಲ ಒಂದು ರೀತಿಯಲ್ಲಿ ಮಾಹೆ ವಿ.ವಿ. ಯಲ್ಲಿ ಗಾಂಧೀ ಅಧ್ಯಯನ ನಡೆಯುತ್ತಿದ್ದರೂ, ಅದು ಪೂರ್ಣ ಪ್ರಮಾಣದ ವಿಭಾಗವಾಗಿ 2014 ಡಿಸೆಂಬರ್‌ನಲ್ಲಿ ಆರಂಭಗೊಂಡಿತು. ಪ್ರಾರಂಭಿಕ ವರ್ಷಗಳಲ್ಲಿ ಗಾಂಧಿ ಕುರಿತು ಅಲ್ಪಾವಧಿಯ ಕೋರ್ಸ್‌ಗಳಿಗೆ ಸೀಮಿತವಾಗಿದ್ದ ಈ ವಿಭಾಗ 2019ರಲ್ಲಿ ನವೀಕರಿಸಿಕೊಂಡು ಹೊಸ ಹೆಸರಿನೊಂದಿಗೆ ಪೂರ್ಣ ಪ್ರಮಾಣದ ಶೈಕ್ಷಣಿಕ ಕಾರ್ಯಕ್ರಮಗಳಿಗೆ ವಿಸ್ತರಿಸಿಕೊಂಡಿತು. 2014 ರಲ್ಲಿ ಗಾಂಧಿಯನ್‌ ಆ್ಯಂಡ್‌ ಪೀಸ್‌ ಸ್ಟಡೀಸ್‌ ಎಂದು ರಚನೆಗೊಂಡಿದ್ದ ವಿಭಾಗ 2019ರಲ್ಲಿ ಗಾಂಧಿಯನ್‌ ಸೆಂಟರ್‌ ಫಾರ್‌ ಫಿಲೊಸೊಫಿಕಲ್‌ ಆಟ್ಸ…ì ಆಂಡ್‌ ಸೈನ್ಸಸ್‌ (ಜಿಸಿಪಿಎಎಸ್‌) ಎಂದು ಮರುನಾಮಕರಣ ಗೊಂಡಿತು.

2019ರಲ್ಲಿ ಗಾಂಧಿ, ಗುರುದೇವ ರವೀಂದ್ರನಾಥ ಠಾಗೋರ್‌, ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ಇವರೆಲ್ಲರ ವಿಚಾರ ಗಳನ್ನು ಮೇಳೈಸಿಕೊಂಡು ಇಕೊಸೊಫಿಕಲ್‌ ಎಸ್ತೆಟಿಕÕ… ಎನ್ನುವ ವಿನೂತನ ಮಾದರಿಯ ಸ್ನಾತ ಕೋತ್ತರ ಪದವಿಯನ್ನು (ಪಿಜಿ) ಪ್ರಾರಂಭಿಸಿತು. ಪರಿಸರ ತಣ್ತೀಶಾಸ್ತ್ರದಲ್ಲಿ ಬೇರೂರಿಟ್ಟು ಹಲವು ಕಲೆಗಳ ಅಧ್ಯಯನ, ವಿಮರ್ಶೆಗೆ ಈ ಪದವಿ ಮುಡಿಪಾಗಿದೆ. ವಿದ್ಯಾರ್ಥಿಗಳು ಸಂಗೀತ, ನೃತ್ಯ, ಸಾಹಿತ್ಯ, ನಾಟಕ, ಸಿನೆಮಾ, ಚಿತ್ರಕಲೆಯನ್ನು ಒಳಗೊಂಡಂತೆ ಎಲ್ಲ ಕಲೆಗಳ ವಿಮಶಾì ಬರವಣಿಗೆ ಯನ್ನು ಕಲಿಯುತ್ತಾರೆ. 2020ರಲ್ಲಿ ಈ ವಿಭಾಗ ದಿಂದ ಆರ್ಟ್‌ ಆ್ಯಂಡ್‌ ಪೀಸ್‌ ಸ್ಟಡೀಸ್‌ ಎನ್ನುವ ಇನ್ನೊಂದು ವಿನೂತನ ಸ್ನಾತ ಕೋತ್ತರ ಪದವಿಯನ್ನು ಪ್ರಾರಂಭಿಸ ಲಾಯಿತು. ವಿವಿಧ ಕಲಾ ಮಾಧ್ಯಮಗಳ ಮೂಲಕ ಅಂತರಂಗದ ನೆಮ್ಮದಿಯಿಂದ ಅಂತಾರಾಷ್ಟ್ರೀಯ ಶಾಂತಿಯವರೆಗೆ ಹಲವು ಮಜಲು ಗಳನ್ನು ಹೇಗೆ ಸಾಧಿಸ ಬೇಕು ಎನ್ನುವುದು ಇಲ್ಲಿಯ ಪಠ್ಯಕ್ರಮ  ವಾಗಿದೆ. ಇಲ್ಲಿ ಶಾಂತಿ ಎನ್ನುವುದು ವೈಯಕ್ತಿಕ ಸಮಾಜೋ ಆರ್ಥಿಕ, ಕಲಾತ್ಮಕ ಹಾಗೂ ವಿಶ್ವಾತ್ಮಕ ದೃಷ್ಟಿಕೋನಗಳಿಂದ ಅಭ್ಯಸಿಸಲ್ಪಡುತ್ತದೆ.

ಪಿಜಿ ಪದವಿಗಳಿಗೆ ಬುನಾದಿಯಾಗಬಹುದಾದ ಬಿ.ಎ. (ಎಸ್ತೆಟಿಕ್ಸ್‌ ಆಂಡ್‌ ಪೀಸ್‌ ಸ್ಟಡೀಸ್‌) ಪದವಿ ಯನ್ನು 2020ರಲ್ಲಿ ಪ್ರಾರಂಭಿಸಿತು. ಬರವಣಿಗೆ ಆಧಾರಿತ ಕಲಿಕೆಯಾದ್ದರಿಂದ ಪತ್ರಿಕೋದ್ಯಮ, ಮಾಧ್ಯಮ, ಸಂವಹನ ಕ್ಷೇತ್ರ ಗಳು ಮೂಲಾಧಾರವಾಗಿವೆ. ಇದನ್ನು ಓದು ವವರಿಗೆ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ನೈಪುಣ್ಯ ದೊರೆಯುವುದಾದ ಕಾರಣ ಹಲವು ಕಲೆಗಳ, ಅಂತಾರಾಷ್ಟ್ರೀಯ ವಿದ್ಯಮಾನಗಳ ತಿಳಿವಳಿಕೆಯೊಂದಿಗೆ ಮಾಧ್ಯಮಗಳಲ್ಲಿ ತೊಡಗಿಸಿ ಕೊಳ್ಳಬಹುದು. ಸಾಹಿತ್ಯವನ್ನು ಒಳಗೊಂಡಂತೆ ಹಲವು ಕಲೆಗಳು, ಅಂತಾರಾಷ್ಟ್ರೀಯ ಶಾಂತಿ ಕ್ಷೇತ್ರ ದಲ್ಲಿ ಸಂಶೋಧನೆ, ಅಧ್ಯಾಪನ ವೃತ್ತಿ ಕೈಗೊಳ್ಳ ಬಹುದು. ಪರಿಸರ, ಸಾಮಾಜಿಕ ಸಂಸ್ಥೆಗಳು, ಮುದ್ರಣೋದ್ಯಮ, ಯುನೆಸ್ಕೋ ರೀತಿಯ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡ ಬಹುದು. ಯುಪಿಎಸ್ಸಿ ಪರೀಕ್ಷೆಗಳ ಸಿದ್ಧತೆಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ಇಲ್ಲಿ ಓದಿದವರು ಮಾಧ್ಯಮ, ಶಿಕ್ಷಣ, ಕಲಾಕ್ಷೇತ್ರ ಗಳಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಗಿರೀಶ್‌ ಕಾಸರವಳ್ಳಿ, ಪ್ರೊ| ಎಂ.ಡಿ.ನಲಪತ್‌, ಪ್ರೊ| ಮಾರ್ಕ್‌ ಲಿಂಡ್ಲೆ, ಹಿರಿಯ ಪತ್ರಕರ್ತ ಸುಧೀಂದ್ರ ಕುಲಕರ್ಣಿ ಮೊದಲಾದವರು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದ್ದಾರೆ.

ಗಾಂಧೀ ಹೆಸರಿನ ಸಂಸ್ಥೆಯು ಇದೀಗ ತನ್ನ ಸಾರ್ಥಕ ನಾಲ್ಕು ವರ್ಷಗಳನ್ನು ಮುಗಿಸಿ “ಸರ್ವೋದಯ’ದ ಆಶಯದೊಂದಿಗೆ ಐದನೇ ವರ್ಷಕ್ಕೆ ಕಾಲಿಡುತ್ತಿದೆ. ಗಾಂಧೀ ತತ್ತ್ವಾದರ್ಶಗಳ ಅಧ್ಯಯನಕ್ಕಾಗಿ ಕೋರ್ಸ್‌ನ್ನು ನಡೆಸಲಾಗುತ್ತಿದೆ.
-ಪ್ರೊ | ವರದೇಶ್‌ ಹಿರೇಗಂಗೆ ಮುಖ್ಯಸ್ಥರು, ಗಾಂಧಿಯನ್‌ ಸೆಂಟರ್‌ ಫಾರ್‌ ಫಿಲೊಸೊಫಿಕಲ್‌ ಆರ್ಟ್ಸ್ ಆ್ಯಂಡ್‌ ಸೈನ್ಸಸ್‌, ಮಾಹೆ, ಮಣಿಪಾಲ

Advertisement
Advertisement

Udayavani is now on Telegram. Click here to join our channel and stay updated with the latest news.

Next