Advertisement

Rai Estate: ಪುತ್ತೂರಿನಲ್ಲಿ ನ. 2ರಂದು “ಅಶೋಕ ಜನ- ಮನ’ ಕಾರ್ಯಕ್ರಮ

03:34 AM Oct 28, 2024 | Team Udayavani |

ಮಂಗಳೂರು: ಪುತ್ತೂರಿನ ರೈ ಎಸ್ಟೇಟ್ಸ್‌ ಎಜುಕೇಶನ್‌ ಆ್ಯಂಡ್‌ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ “ಅಶೋಕ ಜನ- ಮನ’ ಕಾರ್ಯಕ್ರಮ ನ. 2ರಂದು ಬೆಳಗ್ಗೆ 9ರಿಂದ ಪುತ್ತೂರಿನ ಕೊಂಬೆಟ್ಟು ಜೂನಿಯರ್‌ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

12ನೇ ವರ್ಷದ ಈ ಕಾರ್ಯಕ್ರಮದಲ್ಲಿ ಸುಮಾರು 75 ಸಾವಿರ ಮಂದಿಗೆ ವಸ್ತ್ರ ವಿತರಣೆಗೆ ತಯಾರಿಯಾಗಿದೆ. ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಮತ್ತು ಪುರುಷರಿಗೆ ಬೆಡ್‌ ಶೀಟ್‌ ವಿತರಣೆ ನಡೆಯಲಿದೆ. ಮಧ್ಯಾಹ್ನ ಸಹ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಜತೆಗೆ ಗೂಡು ದೀಪ ಸ್ಪರ್ಧೆಯನ್ನೂ ಆಯೋಜಿಸಲಾಗಿದ್ದು, ಈಗಾಗಲೇ ಸುಮಾರು 500 ಮಂದಿ ನೋಂದಾಯಿಸಿಕೊಂಡಿದ್ದಾರೆ. ವಿಜೇತರಿಗೆ ಪ್ರಥಮ 10 ಸಾವಿರ ರೂ., ದ್ವಿತೀಯ 7,500 ರೂ., ತೃತೀಯ 5 ಸಾವಿರ ರೂ. ಬಹುಮಾನ ದೊರೆಯಲಿದೆ ಎಂದರು.

ಧರ್ಮವನ್ನು ಬಿಡಲು ಸಾಧ್ಯವಿಲ್ಲ
ವಿಶ್ವ ಹಿಂದೂ ಪರಿಷತ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬ ಹಿಂದೂ ಆಗಿ ವಿಶ್ವ ಹಿಂದೂ ಪರಿಷತ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಪರಿಷತ್‌ನ ಪ್ರಮುಖರು ಗೌರವದಿಂದ ಬಂದು ಕರೆದಿದ್ದಾರೆ. ನನಗೆ ನನ್ನ ಧರ್ಮವನ್ನು ಬಿಡಲು ಸಾಧ್ಯವಿಲ್ಲ. ಜತೆಗೆ ಇನ್ನೊಂದು ಧರ್ಮದ ವಿರೋಧವನ್ನು ನಾನು ಮಾಡುವುದಿಲ್ಲ ಎಂದರು. ದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಪರವಾದ ಅಲೆ ಎಲ್ಲ ಕಡೆ ಕಾಣಿಸುತ್ತಿದ್ದು, ಪಕ್ಷ ನನಗೆ ಅವಕಾಶ ಕೊಟ್ಟಿದೆ. ಹಾಗಾಗಿ ಪಕ್ಷ ಬಿಟ್ಟು ಹೋಗುವ ವಿಚಾರವೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಂಗಳೂರಿನಲ್ಲಿ ಕಂಬಳ ನಡೆಸಿಯೇ ಸಿದ್ಧ

ಬೆಂಗಳೂರು ಕಂಬಳವನ್ನು ಯಾವುದೆ ಕಾರಣಕ್ಕೂ ರದ್ದು ಮಾಡುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಯವರು ಕಂಬಳ ಆಯೋಜಿಸಲು ಅನುಮತಿ ನೀಡಿದ್ದಾರೆ. ಮಹಾರಾಣಿಯವರ ಅನುಮತಿ ಬೇಕಾಗಿದ್ದು, ಅದು ಕೂಡ ಶೀಘ್ರದಲ್ಲೇ ದೊರೆಯಲಿದೆ. ಫೆಬ್ರವರಿ ಅಥವಾ ಮಾರ್ಚ್‌ ನಲ್ಲಿ ಕಂಬಳ ಆಯೋಜಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next