Advertisement

ರಸ್ತೆ ಪಕ್ಕ,ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ: ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ

03:35 PM May 22, 2023 | Team Udayavani |

ಕುಂಬಳೆ: ತ್ಯಾಜ್ಯವನ್ನು ರಸ್ತೆ ಪಕ್ಕದಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಂದು ಸುರಿಯುವವರ ವಿರುದ್ಧ ಕೇಸು ದಾಖಲಿಸಿ ದಂಡ ಪಾವತಿ ಶಿಕ್ಷೆಯನ್ನು ರಾಜ್ಯ ಉತ್ಛ ನ್ಯಾಯಾಲಯ ವಿಧಿಸಿದ್ದರೂ ಕೆಲವರು ಸಾರ್ವಜನಿಕ ಸ್ಥಳದಲ್ಲೇ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ.

Advertisement

ಹೊಸಂಗಡಿಯಿಂದ ಕುಂಬಳೆ ತನಕ ರಸ್ತೆ ಪಕ್ಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯದ ರಾಶಿ, ರಾಶಿಯನ್ನೇ ಕಾಣಬಹುದು. ಅದರಲ್ಲೂ ಮಂಗಲ್ಪಾಡಿ ಗ್ರಾ.ಪಂ.ವ್ಯಾಪ್ತಿಯ ಕೆಲಕಡೆಗಳಲ್ಲಿ ಇದು ಜಾಸ್ತಿಯಾಗಿದ್ದು, ಹಿಂದಿನ ಮಹಿಳಾ ಜಿಲ್ಲಾಧಿಕಾರಿ ಮಂಗಲ್ಪಾಡಿ ಸ್ಥಳೀಯಾಡಳಿತದ‌ ಆಡಳಿತದವರೊಂದಿಗೆ ಸಭೆ ನಡೆಸಿ ತಕ್ಷಣ ಇದನ್ನು ತೆರವುಗೊಳಿಸಿ, ತ್ಯಾಜ್ಯ ಸುರಿದವರ ವಿರುದ್ಧ ಕ್ರಮ ಕೈಗೊಳ್ಳಬೆಕೆಂದು ಆದೇಶಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಹಿಳಾ ಜಿಲ್ಲಾಧಿಕಾರಿ ವರ್ಗಾವಣೆ ನಂತರ ರಾಜ್ಯ ಸ್ಥಳೀಯಾಡಳಿತ ಸಚಿವರು ಕಾಸರಗೋಡು ಜಿಲ್ಲೆಗೆ ಆಗಮಿಸಿದಾಗ ಈ ಸಮಸ್ಯೆಯ ಮಾಹಿತಿ ತಿಳಿದು ಕಾಸರಗೋಡು ನಗರ ಸಭೆ ಮತ್ತು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷರನ್ನು ಮತ್ತು ಕಾರ್ಯದರ್ಶಿಯವರನ್ನು ಪ್ರತ್ಯೇಕಸಭೆ ಕರೆದು ತ್ಯಾಜ್ಯ ಮಾಲಿನ್ಯದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂಬುದಾಗಿ ಆದೇಶಿಸಿದರು.

ಈ ಆದೇಶಕ್ಕೆ ಎಚ್ಚೆತ್ತ ಸ್ಥಳೀಯಾಡಳಿತ ಮಾಲಿನ್ಯ ರಾಶಿಯ ಬಳಿ ಸಿ ಸಿ ಕೆಮರಾ ಅಳವಡಿಸಿದೆ. ತಾಜ್ಯವನ್ನು ಕೊಚ್ಛಿ ಸಂಸ್ಕರಣಾ ಘಟಕ್ಕೆ ಒಯ್ಯಲು ರಾಶಿ ಹಾಕಿದೆ.ಆದರೆ ಇದನ್ನು ಒಯ್ಯದೆ ಕೆಲ ತಿಂಗಳ ಕಾಲ ಹೆದ್ದಾರಿ ಪಕ್ಕದಲ್ಲೇ ಇದೆ. ಉಪ್ಪಳ ಬಸ್‌ ನಿಲ್ದಾಣದ ಬಳಿ,ಹನಫಿ ಬಜಾರ್‌ ಮುಂತಾದೆಡೆಗಳಲ್ಲಿ ಕಸದ ರಾಶಿಯನ್ನು ಕಾಣಬಹುದಾಗಿದೆ.ಇದು ಹೆದ್ದಾರಿ ಷಟ#ಥ ಕಾಮಗಾರಿಗೂ ತೊಡಕಾಗಿದೆ.ಮಳೆ ಸುರಿದಾಗ ಸಾಂಕ್ರಾಮಿಕ ರೋಗಾಣುಗಳಿಗೆ ಆವಾಸ ಸ್ಥಳವಾಗಿರುವ ತ್ಯಾಜ್ಯ ಮಾಲಿನ್ಯಗಳನ್ನು ತೆರವುಗೊಳಿಸದೆ ಅಂದೇ ಕ್ಲೀನ್ ಕೇರಳ ಬಿರುದು ಗಿಟ್ಟಿಸಿದ ಗ್ರಾ.ಪಂ.ಇದರತ್ತ ಕಣ್ಣು ತೆರೆಯಬೇಕಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next