Advertisement

Gangavathi: ಸಾವಿಗೆ ಆಹ್ವಾನ ನೀಡುತ್ತಿರುವ ಬಸ್ ನಿಲ್ದಾಣದ ವಿದ್ಯುತ್ ಟ್ರಾನ್ಸ್ ಫಾರ್ಮರ್

10:04 AM Jul 23, 2023 | Team Udayavani |

ಗಂಗಾವತಿ: ಶಾಲಾ ಕಾಲೇಜು ಮಕ್ಕಳು ಸೇರಿ ಸಾರ್ವಜನಿಕರಿಗೆ ಕಂಟಕವಾಗಿರುವ ವಿದ್ಯಾನಗರದ ಬಸ್ ನಿಲ್ದಾಣದಲ್ಲಿನ ಅಸ್ವಚ್ಛತೆ ಮತ್ತು ವಿದ್ಯುತ್ ಟ್ರಾನ್ಸ್ ಫಾರ್ಮರ್ ಸಾವಿಗೆ ಆಹ್ವಾನ ನೀಡುವಂತಿದೆ. ‌

Advertisement

ಸ್ವಚ್ಚತೆ ಕಾಪಾಡಬೇಕಾದ ನಗರಸಭೆ ಮತ್ತು ವಿದ್ಯುತ್ ಅವಘಡ ಸಂಭವಿಸದಂತೆ ತಡೆಯಬೇಕಾಗಿರುವ ಜೆಸ್ಕಾಂ ಇಲಾಖೆಯ ಅಧಿಕಾರಿಗಳಲ್ಲಿ ನಿರ್ಲಕ್ಷ್ಯ ಕಾಣುತ್ತಿದ್ದು ಹಲವು ಬಾರಿ ಸಾರ್ವಜನಿಕರು ನಗರಸಭೆ ಮತ್ತು ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ವಿದ್ಯಾನಗರದ ಬಸ್ ನಿಲ್ದಾಣದಲ್ಲಿ ಇಲ್ಲಿರುವ ಶಾರದ ಎಜುಕೇಶನ್ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಇಲ್ಲಿಂದಲೇ ಬಸ್ ನಲ್ಲಿ ಪ್ರಯಾಣ ಮಾಡುತ್ತಾರೆ.  ವಿದ್ಯಾರ್ಥಿಗಳು ಮಾತ್ರವಲ್ಲದೇ ವಿದ್ಯಾನಗರದ ನಿವಾಸಿಗಳು ಇಲ್ಲಿಂದಲೇ ಬಸ್ ಹತ್ತುತ್ತಾರೆ ಮತ್ತು ಇದೇ ಬಸ್‌ ನಿಲ್ದಾಣದಲ್ಲಿ ಇಳಿಯುತ್ತಾರೆ.

ಮಳೆಗಾಲ ಮತ್ತು ಬೇಸಿಗೆ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ನಿಲ್ಲಬೇಕಾಗುತ್ತದೆ. ಬಸ್ ಸ್ಟಾಂಡ್ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಜೋಡಣೆ ಮಾಡಿದ್ದು, ಸುತ್ತಲೂ ತಂತಿ ಬೇಲಿ ಹಾಕದೆ ತೆರೆದ ಸ್ಥಳದಲ್ಲಿ ಹಾಗೆಯೇ ಬಿಡಲಾಗಿದ್ದು, ಮಳೆಗಾಲ ಸಂದರ್ಭದಲ್ಲಿ ವಿದ್ಯುತ್ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿದೆ.

Advertisement

ಈ ಬಗ್ಗೆ ಜೆಸ್ಕಾಂ ಇಲಾಖೆಯವರು ಗಮನ ಹರಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ನಿತ್ಯವೂ ವಿದ್ಯುತ್ ಅವಘಡಗಳು ಸಂಭವಿಸಿ ಸಾವುಗಳು ಸಂಭವಿಸುತ್ತಿರುವ ಸಂದರ್ಭದಲ್ಲಿ ಜೆಸ್ಕಾಂ ಇಲಾಖೆಯವರು ನೂರಾರು ವಿದ್ಯಾರ್ಥಿಗಳು ನಿಂತುಕೊಳ್ಳುವ ವಿದ್ಯಾನಗರದ ಬಸ್ ನಿಲ್ದಾಣದಲ್ಲಿರುವ ಟ್ರಾನ್ಸ್ ಫಾರ್ಮರ್ ಸುತ್ತಲೂ ತಂತಿ ಬೇಲಿ ಹಾಕಬೇಕು ಹಾಗೂ ನಗರ ಸಭೆಯವರು ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next