Advertisement
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಮೂರ್ತಿಯ ರೂಪದಲ್ಲಿ ಆರಾಧಿಸಲ್ಪಡುವ ಗಣಪತಿ ಬೇರೆಲ್ಲ ದೇವತೆಗಳಿಗಿಂತ ಚಿಕ್ಕವನು. ಆದರೆ ಇವನ ಪ್ರಭಾವ ಮಾತ್ರ ಎಲ್ಲರಿಗಿಂತ ದೊಡ್ಡದು. ಲೋಕ ಪ್ರಿಯತೆಯೂ ಅಧಿಕ. ಇವನ ಗುಡಿ ಇಲ್ಲದ ಊರು, ಮಂದಿರಗಳಿಲ್ಲದ ನಗರ ಇಲ್ಲವೆಂದೇ ಹೇಳಬಹುದು. ಗಣಪತಿಯನ್ನು ವಿಘ್ನೇಶ್ವರ ಎಂದು ಕರೆಯುತ್ತಾರೆ. ಏಕೆಂದರೆ ಯಾವುದಾದರೂ ಒಂದು ಶುಭ ಕಾರ್ಯವನ್ನು ಪ್ರಾರಂಭ ಮಾಡುವಾಗ ಅವನ ಪ್ರಾರ್ಥನೆ ಮಾಡದಿದ್ದರೆ ಮುಂದೆ ವಿಘ್ನಗಳು ಬರುತ್ತವೆ ಎಂಬುದು ಜನರ ನಂಬಿಕೆ. ಆದುದರಿಂದ ಪ್ರತಿಯೊಂದು ಕಾರ್ಯದ ಪ್ರಾರಂಭದಲ್ಲಿ ವಿಘ್ನನಾಶಕನ ಪೂಜೆ ಮಾಡುವ ಪದ್ದತಿ ಇದೆ. ಇದರಿಂದ ಎಲ್ಲ ದೇವತೆಗಳ ಪೂಜೆಯೂ ಸಂಪನ್ನವಾಗುತ್ತದೆ.
Related Articles
* ಪಿ.ಜಯವಂತ ಪೈ, ಕುಂದಾಪುರ
Advertisement
ವಿಘ್ನ ನಿವಾರಕ ವಿಘ್ನೇಶ್ವರನ ಗಣೇಶೋತ್ಸವಗಣಪತಿಗೆ ಮೊದಲ ಪೂಜೆ ಏಕೆ ಎಂಬ ಜಿಜ್ಞಾಸೆ ಹಲವರಲ್ಲಿ ಮೂಡಿರುತ್ತದೆ. ವಿನಾಯಕ ಪೃಥ್ವೀಸ್ವರೂಪಿ. ಹಾಗಾಗಿ ಗಣನಾಯಕ ಭೂಮಿ ಅಂಶದವನು.ಆದ್ದರಿಂದ ಭೂಮಿಯ ಮೇಲೆ ವಾಸಿಸುವ ಚರಾಚರ ಪ್ರಾಣಿಗಳು ಸುಖವಾಗಿರಬೇಕಾದರೆ ಗಣಪತಿಗೆ ಮೊದಲು ಪೂಜಿಸಿ ಅನುಗ್ರಹ ಪಡೆಯುವಂತಾಗಬೇಕು. ಗಣೇಶ ಹಾಗೂ ಸುಬ್ರಹ್ಮಣ್ಯರು ಪಂಥ ಕಟ್ಟಿ ಯಾರು ಮೊದಲು ಪ್ರಪಂಚ ಸುತ್ತಿ ಬರುತ್ತಾರೋ ಅವರಿಗೆ ಮೊದಲ ಪೂಜೆ ಅಂತ. ಆಗ ಗಣಪತಿ ಪ್ರಪಂಚಕ್ಕೆ ತಂದೆ ತಾಯಿಯಾದ ಶಿವ ಪಾರ್ವತಿಯರಿಗೆ ಪ್ರದಕ್ಷಿಣೆ ಮಾಡಿ ತಂದೆ ತಾಯಿಯೇ ಈ ಜಗತ್ತು ಎಂಬುದನ್ನು ತೋರಿಸಿ ಕೊಟ್ಟ ಕಾರಣ ಶಿವ ಇನ್ನು ಮುಂದೆ ಗಣೇಶನಿಗೆ ಮೊದಲ ಪೂಜೆ ಆಗಲಿ ಎಂದು ಅನುಗ್ರಹಿಸಿದ ಎಂಬುದಾಗಿ. ಆನೆ ಮುಖದ ಗಜಾನನನಿಗೆ ಪುಟ್ಟ ಇಲಿ ವಾಹನ. ಇಲಿಯೇ ವಾಹನ ಏಕೆ ಅಂದರೆ ಮಾನವರು ಭೂಮಿಯಲ್ಲಿ ಬೆಳೆದ ಧಾನ್ಯ-ತರಕಾರಿ-ಬತ್ತ-ಹಣ್ಣುಗಳನ್ನು ತಿಂದು ಹಾಳುಮಾಡುವುದು ಈ ಮೂಷಿಕನ ಕೆಲಸ. ಹಾಗಾಗಿ ಈ ಮೂಷಿಕನನ್ನು ತನ್ನ ಬಳಿಯೇ ಇರಿಸಿ ಕೊಂಡು ನಿಯಂತ್ರಿಸುತ್ತಾನೆ ಈ ಗಜಮುಖನಾದ ವಿನಾಯಕ. ಈ ಕಾರಣದಿಂದಲೇ ತನ್ನ ವಾಹನ ಇಲಿಯನ್ನೇ ಮಾಡಿಕೊಂಡಿರುತ್ತಾನೆ. ಗಣಪತಿಯನ್ನು ವೇದಗಳು-ಪುರಾಣಗಳು ವಿಧ ವಿಧವಾಗಿ ಕೊಂಡಾಡಿ ಸ್ತುತಿಸಿವೆ. ಗಣೇಶನನ್ನು “ತತ್ವನಿ ’ ಗ್ರಂಥದಲ್ಲಿ ವಿಶೇಷವಾದ ಮೂವತ್ತೆರಡು ಗಣಪತಿಯ ದಿವ್ಯನಾಮಗಳನ್ನು ವರ್ಣಿಸಿದ್ದಾರೆ. ಮಹಾಮಹೀಮನಾದ ಗಣಪ ಭಕ್ತರ ಪಾಲಿಗೆ ಕ್ಷಿಪ್ರವಾಗಿ ಒಲಿದು “”ಕ್ಷಿಪ್ರಪ್ರಸಾದ ಗಣಪತಿ” ಎಂದೆನಿಸಿರುತ್ತಾನೆ. ಗಣಪತಿ ಮೋದಕಪ್ರಿಯ. ನೈವೇದ್ಯದಲ್ಲಿ ಮೋದಕಕ್ಕೆ ಅಗ್ರಸ್ಥಾನ. ಮೋದಕವೆಂದರೆ ಆನಂದ ಮತ್ತು ಮಹಾಬುದ್ಧಿಯ ಸಂಕೇತವೆನ್ನುತ್ತಾರೆ. ಗಣಪತಿ ಆನಂದವನ್ನು ಬುದ್ಧಿಯನ್ನು ತನ್ನ ಭಕ್ತರಿಗೆ ನೀಡುತ್ತಾನೆ. ಗಣಪತಿಯ ಕೈಯಲ್ಲಿರುವ ಅಂಕುಶವು ಜ್ಞಾನದ ಸಂಕೇತ ಇದು ಮಾನವನ ಅಜ್ಞಾನ ದೂರಮಾಡುವುದು. ಗಣೇಶನ ಕೈಯಲ್ಲಿರುವ
ಪಾಶ ಇದು ಸಂಸಾರಬಂಧನ ಸಂಕೇತವಾಗಿದೆ. ಗಣೇಶ ವಿಶ್ವರೂಪಿಯಾಗಿ ವಿಶ್ವವಿನಾಯಕನಾಗಿದ್ದಾನೆ. ಭಕ್ತರ ಸಂಕಷ್ಟ ಪರಿಹರಿಸುವ “”ಸಂಕಷ್ಟಹರ ಗಣಪತಿ”ಯಾಗಿ ಕೃಪೆ ತೋರುತ್ತಿದ್ದಾನೆ.ವ್ರತಗಳಲ್ಲೇ ಶ್ರೇಷ್ಠ ವ್ರತ ಎಂದೆನಿಸಿದ “”ಸಂಕಷ್ಟಹರ ಚತುರ್ಥಿàವ್ರತ” ಆಚರಿಸಿದವರ ಸಂಕಷ್ಟ ಪರಿಹಾರವಾಗಿ ಸುಖಸಂಪತ್ತು-ನೆಮ್ಮದಿ-ಆಯುರಾರೋಗ್ಯ ನೀಡಿ ಕಾಪಾಡುತ್ತಾನೆ ಗಣಪತಿ ಎಂಬ ಪ್ರತೀತಿ ಇದೆ. ಇಂತಹ ಗಣೇಶ ಭಕ್ತರ ನಿಷ್ಕಲ್ಮಶವಾದ ಶ್ರದ್ಧಾಪೂರ್ವಕ ಪೂಜೆಗೆ ಒಲಿಯುತ್ತಾನೆ.
ವೇ| ಮೂ| ವೈ. ಎನ್. ವೆಂಕಟೇಶಮೂರ್ತಿ ಭಟ್ಟ , ಕೋಟೇಶ್ವರ