ದಾವಣಗೆರೆ: ಆವರಗೆರೆಯ ಜಿಪಿಜಿಎಂ ಶಾಲೆಯಲ್ಲಿ ಗಾಂಧೀಜಿ, ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜಯಂತಿ ಆಚರಿಸಲಾಯಿತು. 10ನೇ ತರಗತಿ ವಿದ್ಯಾರ್ಥಿ ಆಸ್ಮಾ ಗಾಂಧೀಜಿಯವರ ಬಾಲ್ಯದ ಜೀವನ ಕುರಿತು ಮಾತನಾಡಿದರು. ಎ.ಎಚ್. ಶಿವಮೂರ್ತಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರು ಗಾಂಧೀಜಿಯವರ ಜೀವನ ಕುರಿತು ಮಾತನಾಡಿದರು.
ಜಿಎಂಐಟಿ: ಜಿಎಂಐಟಿಯಲ್ಲಿ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿಯವರ 148 ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ 114 ನೇ ಜಯಂತಿಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ| ಪಿ.ಪ್ರಕಾಶ್, ಗಾಂಧೀಜಿಯವರ ತತ್ವ, ಆದರ್ಶ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು. ಕಾಲೇಜಿನ ಉಪ-ಪ್ರಾಂಶುಪಾಲ ಡಾ| ಬಿ.ಆರ್. ಶ್ರೀಧರ್, ಕಾಲೇಜಿನ ಆಡಳಿತಾಧಿಕಾರಿ ವೈ.ಯು. ಸುಭಾಶ್‌ಚಂದ್ರ ಪಾಲ್ಗೊಂಡಿದ್ದರು.
ಬಾಪೂಜಿ ಶಾಲೆ: ಎಂಸಿ ಕಾಲೋನಿ ಬಿ ಬ್ಲಾಕ್‌ನ ಬಾಪೂಜಿ ಹೈಯರ್ ಪ್ರೈಮರಿ ಸಿಬಿಎಸ್‌ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಶಾಲೆಯ ನಿರ್ದೇಶಕ ಕೆ. ಇಮಾಂ ಮಾತನಾಡಿ, ಪೋಷಕರು ಹಾಗು ಶಿಕ್ಷಕರು ತಮ್ಮ ಪಾಲಿನ ಕರ್ತವ್ಯವನ್ನು ನಿಷ್ಟೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಕೊಡುವ ನಿಜವಾದ ಗೌರವವಾಗಿರುತ್ತದೆ ಎಂದರು. ಶಾಲೆಯ ಕನ್ನಡ ಶಿಕ್ಷಕ ಕೆ.ಎನ್. ಸಂದೀಪ್ ಶಾಲೆಯ ಉಪಪ್ರಾಂಶುಪಾಲ ಎಚ್.ವಿ. ಸತೀಶ್‌ಚಂದ್ರ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸ್ವಾತಂತ್ರ್ಯ ಯೋಧರ ಸಂಘ: ಕುಂಬಾರಪೇಟೆಯ ಜಿಲ್ಲಾ ಸ್ವಾತಂತ್ರ್ಯ ಯೋಧರ ಮತ್ತು ಉತ್ತರಾಧಿಕಾರಿಗಳ ಸಂಘದಿಂದ ಸಂಘದ ಕಚೇರಿಯಲ್ಲಿ ಸ್ವತಂತ್ರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಅಹಿಂಸೆಯಿಂದಲೇ ಸ್ವಾತಂತ್ರ್ಯ
ತಂದುಕೊಟ್ಟ ಮಹಾತ್ಮ ಗಾಂಧಿಯವರು ಮಹಾನ್ ಶಕ್ತಿ ಎಂದು ಸ್ವಾತಂತ್ರ್ಯ ಹೋರಾಟದ ಯೋಧರು ಬಣ್ಣಿಸಿದರು. ಚಿರಡೋಣಿ ಸಿದ್ದಪ್ಪ, ಬಿ. ಮರುಳಸಿದ್ದಪ್ಪ, ಬಿ.ಎಂ. ಶಿವಲಿಂಗಸ್ವಾಮಿ, ಆರ್. ಉಷಾರಾಣಿ, ಎ. ಚಂದ್ರಮ್ಮ ಬಸಪ್ಪ, ಅಬ್ದುಲ್ ಇದ್ದರು.
ಅರಸಾಪುರ: ಸಮಗ್ರ ಕರ್ನಾಟಕ ವಿಶೇಷಚೇತನರ ಕಲ್ಯಾಣಾಭಿವೃದ್ಧಿ ಸಂಘದಿಂದ ತಾಲೂಕಿನ ಅರಸಾಪುರ ಗ್ರಾಮದಲ್ಲಿ ವನ ಮಹೋತ್ಸವ, ಗಾಂಧಿ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರುದ್ರೇಶ್ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಇಂದಿನ ಸಸಿಗಳೇ ನಾಳಿನ ಹೆಮ್ಮರಗಳೆಂದರು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಯವರ ಕುರಿತು ಗಣ್ಯರು ಮಾತನಾಡಿದರು.
ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಸಸಿ ನೆಡಲಾಯಿತು.
ಅಂಗವಿಕಲರ ಕಲ್ಯಾಣಾಭಿವೃದ್ಧಿ ಸಂಘದ ಉಪಾಧ್ಯಕ್ಷ ಡಿ. ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ವೀರಣ್ಣ, ಸಹ ಕಾರ್ಯದರ್ಶಿ ಮಹಾಂತೇಶ್ ಎಸ್. ಅವರಗೆರೆ, ಖಜಾಂಚಿ ಡಿ.ಎಲ್.ರವಿಕುಮಾರ್, ನಿರ್ದೇಶಕರಾದ ಪರಶುರಾಮ್, ಶೇಖರಪ್ಪ, ಬೀರಪ್ಪ ಪಾಲ್ಗೊಂಡಿದ್ದರು.