Advertisement
ಆರಂಭದಲ್ಲಿ ಮರಳು ಮೇಲೆ ಅಕ್ಷರಭ್ಯಾಸ, ರಾಮಾಯಣ, ಮಹಾಭಾರತದ ವಿಷಯಗಳೇ ಪಠ್ಯಗಳು, ಪಾಠದ ಜತೆಗೆ ದೆ„ಹಿಕ ಶ್ರಮದ ಜೀವನ ಪಾಠದ ಪರಿಚಯ, ಒಟ್ಟಾರೆಯಾಗಿ ಗುರುಕುಲದಂತಹ ವಾತವರಣವೊಂದು ಆಗಿತ್ತು. ಅನಂತರ 1924 ಡಿಸೆಂಬರ್ 1ರಂದು ಶಾಲೆ ಈಗಿರುವ ಸ್ಥಳಕ್ಕೆ ಸ್ಥಳಾಂತರಗೊಂಡಿತು. ದೂರದ ಸಾಹೇಬ್ರಕಟ್ಟೆ, ಅಲ್ತಾರು ಬೀಡು, ಯಡ್ತಾಡಿ, ರಂಗನಕೆರೆ ಮೊದಲಾದ ದೂರದೂರುಗಳಿಂದ ಇಲ್ಲಿನ ಅಕ್ಷರಕಾಂಕ್ಷಿಗಳು ಶಿಕ್ಷಣಾರ್ಥಿಗಳು ಬರುತ್ತಿದ್ದರು.
Related Articles
ಇಲ್ಲಿ ಹತ್ತಾರು ಮಂದಿ ಶಿಕ್ಷಕ, ಮುಖ್ಯ ಶಿಕ್ಷಕರು ಸೇವೆ ಸಲ್ಲಿಸಿ ಶಾಲೆಯ ಕೀರ್ತಿಯನ್ನು ಬೆಳಗಿದ್ದಾರೆ. ಹಾಗೆ ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಶಿಕ್ಷಕ ಶೇಖರ ಶೆಟ್ಟಿಯವರಿಗೆ ರಾಜ್ಯ ಪ್ರಶಸ್ತಿ ದೊರೆತಿರುವುದು ಶಾಲೆಯ ಮುಕುಟಕ್ಕೆ ಚಿನ್ನದ ಗರಿ ಎಂದರೂ ತಪ್ಪಾಗಲಾರದು. ಆ ಬಳಿಕ ಅವರು ರಾಷ್ಟ್ರ ಪ್ರಶಸ್ತಿಗೂ ಭಾಜನರಾದರು ಹಾಗೂ ಶಾಲೆಯ ಶಿಕ್ಷಕಿ ಶಾಂತ ಪೈ ಅವರು 2021-22ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಭಾಜನರಾಗಿದ್ದರು.
Advertisement
ಒಟ್ಟಾರೆ ಯಡ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಊರಿನ ಪಾಲಿನ ಅಕ್ಷರ ದೇಗುಲ; ಹತ್ತಾರು ರಂಗದಲ್ಲಿ ನೂರಾರು ಮಂದಿ ಸಾಧಕರನ್ನು ಸೃಷ್ಟಿಸಿದ ಪುಣ್ಯ ಸ್ಥಳ. ಇದೀಗ ಈ ಸಂಸ್ಥೆ ಶತಮಾನೋತ್ಸವದ ಸಂಭ್ರಮದಲ್ಲಿದೆ.
ಶತಮಾನಗಳ ಹಿಂದೆ ಈ ಊರಿನಲ್ಲಿ ಅಕ್ಷರ ಕಲಿಯುವ ಆಸೆ ಇದ್ದರೂ ಪೂರಕ ವಾತಾವರಣವಿರಲಿಲ್ಲ. ಬ್ರಿಟೀಷ್ ಆಡಳಿತದ ಕಾಲಘಟ್ಟದ ನಡುವೆ ಶಿಕ್ಷಣ ವ್ಯವಸ್ಥೆ ಎನ್ನುವಂತದ್ದು ಜನಸಾಮಾನ್ಯರಿಗೆ ತೆರೆದುಕೊಳ್ಳಲು ಆರಂಭವಾದ ಕಾಲಘಟ್ಟದಲ್ಲಿ ನಮ್ಮೂರ ಸುತ್ತ-ಮುತ್ತಲಿನ ಮಕ್ಕಳು ಅಕ್ಷರವಿಲ್ಲದೆ ಪರಿತಪಿಸಬಾರದು. ನಮ್ಮೂರಿನಲ್ಲೂ ಶಿಕ್ಷಣ ಜ್ಯೋತಿ ಬೆಳಗಬೇಕು ಎನ್ನುವ ಆಸೆಯೊಂದಿಗೆ ಊರಿನ ಹಿರಿಯರೆಲ್ಲ ಅಲ್ತಾರಿನ ನಾಲ್ಕು ಮನೆಯವರ ಮುಂದಾಳತ್ವದಲ್ಲಿ 1924 ಜೂನ್ 1ರಂದು ಪಟೇಲರ ಮನೆಯ ಹೆಬ್ಟಾಗಿಲಿನಲ್ಲಿ ಯಡ್ತಾಡಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಯಿತು. ಮನೆಯ ಹೆಬ್ಟಾಗಿಲಿನಲ್ಲಿ ಆರಂಭವಾದ ಶಾಲೆ ಇದೀಗ ಈ ಊರಿನ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಟಾಗಿಲೇ ಆಗಿದ್ದು ಶತಮಾನೋತ್ಸವದ ಹೊಸ್ತಿಲಲ್ಲಿದೆ. ಶಾಲೆಯಲ್ಲಿ ಪ್ರಸ್ತುತ 1-7ನೇ ತರಗತಿ ತನಕ 97ಮಂದಿ ವಿದ್ಯಾರ್ಥಿಗಳಿದ್ದಾರೆ. ಏಳು ಮಂದಿ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡುತ್ತಿದ್ದು ಇಲ್ಲಿನ ಮಕ್ಕಳು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಬಹುಮಾನಗಳನ್ನು ಗಳಿಸಿದ್ದಾರೆ. ಶಾಲೆಯ ಉನ್ನತಿಗಾಗಿ ಲ್ಯಾಬ್, ಆಧುನಿಕ ತಾಂತ್ರಿಕತೆಯ ಕ್ಲಾಸ್ ರೂಮ್ ಮೊದಲಾದ ವ್ಯವಸ್ಥೆಗಳಿದ್ದು, ಶತಮಾನೋತ್ಸವ ಪ್ರಯುಕ್ತ ಸುಮಾರು 20 ಲಕ್ಷ ವೆಚ್ಚದಲ್ಲಿ ಸಂತೃಪ್ತಿ ಎನ್ನುವ ಅಕ್ಷರ ದಾಸೋಹ ಊಟದ ಕಟ್ಟಡವನ್ನು ನಿರ್ಮಿಸಲಾಗಿದೆ. ಜತೆಗೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದೆ. ವಿದ್ಯೆ ಕಲಿಸಿದ ಶಾಲೆಯನ್ನು ಸ್ಮರಿಸುವ
ಬುದ್ಧಿ ಕಲಿಸಿದ ತಾಯಿ ತಂದೆ, ವಿಧ್ಯೆ ಕಲಿಸಿದ ಶಾಲೆ ಹಾಗೂ ಅಲ್ಲಿನ ಶಿಕ್ಷಕರು ಜೀವನದಲ್ಲಿ ಎಂದೂ ಮರೆಯದ ವಿಚಾರಗಳಲ್ಲಿ ಒಂದು. ನಾವೆಲ್ಲ ವಿದ್ಯೆ ಕಲಿತ ಈ ಶಾಲೆ ಇದೀಗ ಶತಮಾನೋತ್ಸವದ ಹೊಸ್ತಿಲಲ್ಲಿದೆ. ಹೀಗಾಗಿ ಎಲ್ಲೇ ಇದ್ದರೂ; ಹೇಗೆ ಇದ್ದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾವು ವಿದ್ಯೆ ಕಲಿತ ಶಾಲೆಯ ಋಣ ತೀರಿಸೋಣ.
-ಕರುಣಾಕರ ಹೆಗ್ಡೆ, ಯಡ್ತಾಡಿ ಹೆಗ್ಡೇರಮನೆ, ಅಧ್ಯಕ್ಷರು ಶತಮಾನೋತ್ಸವ ಸಮಿತಿ ಶಾಲೆ ಅಭಿವೃದ್ಧಿಗೆ ಪೂರಕ
ಶತಮಾನೋತ್ಸವ ಎನ್ನುವುದು ಯಾವುದೇ ಸಂಸ್ಥೆಯ ಮೈಲಿಗಲ್ಲುಗಳಲ್ಲಿ ಒಂದು ಹೀಗಾಗಿ ಈ ಕಾರ್ಯಕ್ರಮದ ಮೂಲಕ ಶಾಲೆಗಾಗಿ ದುಡಿದವರನ್ನು ನೆನಪಿಸಿಕೊಳ್ಳುವ ಮೂಲಕ ಶಾಲೆಯ ಮುಂದಿನ ಅಭಿವೃದ್ಧಿಗೆ ಒಂದಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ.
-ಚಂದ್ರ ನಾಯ್ಕ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ ಸೇವೆ ಸಲ್ಲಿಸುವುದೇ ಭಾಗ್ಯ
ಶತಮಾನೋತ್ಸವ ಆಚರಿಸುತ್ತಿ ರುವ ಶಾಲೆಯಲ್ಲಿ ಸೇವೆ ಸಲ್ಲಿಸುತ್ತೇವೆ ಎನ್ನುವಂತದ್ದು ಹಾಗೂ ಇಂತಹ ಮಹಾನ್ ಕಾರ್ಯಕ್ರಮ ನಮ್ಮ ಅವಧಿಯಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ. ವಿಧ್ಯಾಭಿಮಾನಿಗಳು, ಊರಿನವರು, ಹಳೆ ವಿದ್ಯಾರ್ಥಿಗಳ ಸಹಕಾರದಲ್ಲಿ ಕಾರ್ಯಕ್ರಮದ ತಯಾರಿ ಗಳೆಲ್ಲ ನಡೆದಿದೆ. ನೀವೆಲ್ಲರು ಆಗಮಿಸಿ ಕಾರ್ಯಕ್ರಮ ಚೆಂದಗಾಣಿಸಬೇಕು.
-ಶ್ರೀನಿವಾಸ್ ಉಪ್ಪೂರು, ಮುಖ್ಯ ಶಿಕ್ಷಕರು ನಮ್ಮೂರಿಗೆ ಹೆಮ್ಮೆ
ಶತಮಾನ ಕಂಡ ಶಾಲೆಯೊಂದು ನಮ್ಮೂರಿನಲ್ಲಿ ಇದೆ ಎನ್ನುವುದೇ ನಮ್ಮೂರಿಗೆ-ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಹೀಗಾಗಿ ಈ ಕಾರ್ಯಕ್ರಮವನ್ನು ನಮ್ಮ ಮನೆಯ ಕಾರ್ಯಕ್ರಮ ಎನ್ನುವ ರೀತಿಯಲ್ಲಿ ಸಂಭ್ರಮಿಸಿ ನಾವೆಲ್ಲರೂ ಖುಷಿಪಡಬೇಕಾದ ಅಗತ್ಯವಿದೆ.
-ನಿರಂಜನ ಹೆಗ್ಡೆ, ಅಲ್ತಾರು ,ಮೊಕ್ತೇಸರರು ಶ್ರೀಕ್ಷೇತ್ರ ಕಾಜ್ರಲ್ಲಿ ಎಲ್ಲರೂ ಜತೆ ಸೇರಲು ಅವಕಾಶ
ಈ ಸಂಸ್ಥೆಯಲ್ಲಿ ವಿದ್ಯೆ ಕಲಿತವರು; ಪಾಠ ಮಾಡಿದವರು ಬೇರೆ-ಬೇರೆ ಕಾರಣದಿಂದ ಬೇರೆ-ಬೇರೆ ಊರುಗಳಲ್ಲಿದ್ದಾರೆ. ಅವರೆಲ್ಲ ಒಟ್ಟಾಗಿ ಒಂದಾಗಿ ನಲಿಯಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಹಾಗಾಗಿ ಇಲ್ಲಿನ ಹಳೆ ವಿದ್ಯಾರ್ಥಿಗಳು, ನಿವೃತ್ತ ಗುರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಬೇಕು.
-ಮಂಜುನಾಥ ಆಚಾರ್, ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ -ರಾಜೇಶ್ ಗಾಣಿಗ ಅಚ್ಲಾಡಿ