Advertisement

“ಗಾಂಧಿ ಪಾರ್ಕ್‌ ತಡೆಗೋಡೆ ಕಾಮಗಾರಿ ಪೂರ್ಣ’

09:38 AM May 25, 2020 | mahesh |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಣ್ಣಗುಡ್ಡ ವಾರ್ಡಿನ ಗಾಂಧಿ ಪಾರ್ಕ್‌ ತಡೆಗೋಡೆ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್‌ ಕಾಮತ್‌ ಅವರು ವೀಕ್ಷಣೆ ನಡೆಸಿದರು.

Advertisement

ಈ ಕುರಿತು ಮಾತನಾಡಿದ ಶಾಸಕ ಕಾಮತ್‌, ಮಣ್ಣಗುಡ್ಡ ಪರಿಸರದ ಮಹಾತ್ಮ ಗಾಂಧಿ ಉದ್ಯಾನವನದ ಆವರಣಗೋಡೆ ಅಭಿವೃದ್ಧಿ ಕಾಮಗಾರಿಗೆ 13.79 ಲಕ್ಷ ರೂ. ಅನುದಾನದಲ್ಲಿ ಪೂರ್ಣಗೊಂಡಿದೆ. ಈ ಪರಿಸರದ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಕ್‌ನಲ್ಲಿ ವಾಯುವಿಹಾರ, ವ್ಯಾಯಾಮ ಸೇರಿದಂತೆ ಮಕ್ಕಳನ್ನೂ ಕರೆತಂದು ಸಮಯ ಕಳೆಯುತ್ತಾರೆ. ಪಾರ್ಕಿನ ತಡೆಗೋಡೆ ದುರ್ಬಲವಾಗಿರುವ ಕಾರಣ ಅಪಾಯವಿತ್ತು. ಹಾಗಾಗಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲಾಗಿತ್ತು, ಸದ್ಯ ಕಾಮಗಾರಿ ಪೂರ್ಣಗೊಂಡಿದೆ ಎಂದರು.

ಪಾರ್ಕಿಗೆ ಆಗಮಿಸುವ ಮಕ್ಕಳ ಹಿತದೃಷ್ಟಿಯಿಂದ ತಡೆಗೋಡೆ ನಿರ್ಮಾಣ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಈ ಹಿಂದೆ ಸೂಚನೆ ನೀಡಿದ್ದೆ. ಅದರಂತೆ ನೀಡಿದ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಪಾರ್ಕ್‌ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಾಲಿಕೆ ಮೇಯರ್‌ ದಿವಾಕರ್‌ ಪಾಂಡೇಶ್ವರ, ಸ್ಥಳೀಯ ಪಾಲಿಕೆ ಸದಸ್ಯೆ ಸಂಧ್ಯಾ ಮೋಹನ್‌ ಆಚಾರ್‌, ಬಿಜೆಪಿ ಮುಖಂಡರಾದ ಮೋಹನ್‌ ಆಚಾರ್‌, ಮಹೇಶ್‌ ಕುಂದರ್‌, ಗೋಕುಲ್‌ ದಾಸ್‌ ಭಟ್‌, ವಂದನಾ ನಾಯಕ್‌, ಅಜಿತ್‌ ರಾವ್‌, ಡಾ| ಸಿ.ಜೆ. ಕಿಣಿ, ಎಸ್‌.ಆರ್‌. ಭಂಡಾರಿ, ವೆಂಕಟೇಶ್‌ ಆಚಾರ್‌, ಶ್ರೀರಾಮ್‌ ಪೈ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next