ಗಾಲೆ: ವೆಸ್ಟ್ ಇಂಡೀಸ್ನ ಸ್ಪಿನ್ದ್ವಯರಾದ ವೀರಸಾಮಿ ಪೆರುಮಾಳ್ ಮತ್ತು ಜೋಮೆಲ್ ವ್ಯಾರಿಕ್ಯಾನ್ ದಾಳಿಗೆ ತತ್ತರಿಸಿದ ಆತಿಥೇಯ ಶ್ರೀಲಂಕಾ ಗಾಲೆ ಟೆಸ್ಟ್ ಪಂದ್ಯದಲ್ಲಿ 204 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿದಿದೆ.
ವೆಸ್ಟ್ ಇಂಡೀಸ್ ಒಂದು ವಿಕೆಟಿಗೆ 69 ರನ್ ಮಾಡಿದೆ. ಮಳೆಯಿಂದ ದ್ವಿತೀಯ ದಿನದ ಆಟಕ್ಕೂ ಅಡಚಣೆಯಾಯಿತು.
ಪೆರುಮಾಳ್ 35ಕ್ಕೆ 5 ಹಾಗೂ ವ್ಯಾರಿಕ್ಯಾನ್ 50 ರನ್ನಿಗೆ 4 ವಿಕೆಟ್ ಉಡಾಯಿಸಿದರು. ಒಂದು ಹಂತದಲ್ಲಿ ಶ್ರೀಲಂಕಾ ವಿಕೆಟ್ ನಷ್ಟವಿಲ್ಲದೆ 106 ರನ್ ಗಳಿಸಿ ದೊಡ್ಡ ಮೊತ್ತದ ಸೂಚನೆ ನೀಡಿತ್ತು. ಆದರೆ 98 ರನ್ ಗಳಿಸುವಷ್ಟರಲ್ಲಿ ಹತ್ತೂ ವಿಕೆಟ್ ಕಳೆದುಕೊಂಡಿತು.
ಇದನ್ನೂ ಓದಿ:ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!
ಆರಂಭಿಕರಾದ ಪಥುಮ್ ನಿಸ್ಸಂಕ 73, ದಿಮುತ್ ಕರುಣಾರತ್ನೆ 42 ರನ್ ಮಾಡಿದರು. ಇವರಿಬ್ಬರನ್ನು ಹೊರತುಪಡಿಸಿದರೆ 29 ರನ್ ಮಾಡಿದ ಏಂಜೆಲೊ ಮ್ಯಾಥ್ಯೂಸ್ ಅವರದೇ ಹೆಚ್ಚಿನ ಗಳಿಕೆ.