ಕೊಪ್ಪಳ: ಕಳೆದ ವಿಧಾನಸೌಧ ಚುನಾವಣೆಯ ವೇಳೆ ಸ್ವಂತ ಪಕ್ಷ ಕಟ್ಟಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.
ಕೆಆರ್ ಪಿಪಿ ಪಕ್ಷದ ಸ್ಥಾಪಕ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಸೋಮವಾರ ಬೆಂಗಳೂರಿನಲ್ಲಿ ಕಮಳ ಪಾಳಯ ಸೇರಲಿದ್ದಾರೆ ಎನ್ನಲಾಗಿದೆ.
ಇತ್ತೀಚಿಗೆ ದೆಹಲಿಯಲ್ಲಿ ಬಿಜೆಪಿ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ್ದ ರೆಡ್ಡಿ, ಬಿಜೆಪಿ ಸೇರ್ಪಡೆ ಬಗ್ಗೆ ಬೆಂಗಳೂರಿನಲ್ಲಿ ಕೆಆರ್ಪಿಪಿ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ. ಸೋಮವಾರ ಅಧಿಕೃತ ಬಿಜೆಪಿ ಸೇರ್ಪಡೆ ಬಗ್ಗೆ ಆಪ್ತ ಮೂಲದಿಂದ ಮಾಹಿತಿ ಲಭ್ಯವಾಗಿದೆ.
ಗಣಿ ಹಗರಣದಲ್ಲಿ ಜೈಲು ಸೇರಿದ ಬಳಿಕ ಬಿಜೆಪಿ ಪಾಳಯವು ರೆಡ್ಡಿಯನ್ನು ದೂರ ಇರಿಸಿತ್ತು. ಕಳೆದ ವಿಧಾನಸಭಾ ಚುನಾವಣೆ ವೇಳೆ ಸ್ವಂತ ಪಕ್ಷ ಕಟ್ಟಿದ್ದ ರೆಡ್ಡಿ, ಆಗ ಬಿಜೆಪಿ ನಾಯಕರ ವಿರುದ್ದ ಗುಡುಗಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಿ ಗಂಗಾವತಿಯಿಂದ ಗೆಲುವು ಸಾಧಿಸಿದ್ದರು.
ಕಳೆದ ಕೆಲವು ತಿಂಗಳ ಹಿಂದಷ್ಟೇ ಕೆಆರ್ಪಿಪಿಯಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಮಾತನ್ನಾಡಿದ್ದರು. ಆದರೆ ಅಮಿತ್ ಶಾ ಭೇಟಿ ಬಳಿಕ ರಾಜಕೀಯ ನಡೆ ತಿರುವು ಪಡೆದಿದೆ.