Advertisement

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

09:14 PM Dec 24, 2024 | Team Udayavani |

ನವದೆಹಲಿ: ಮುಂದಿನ ವರ್ಷ ನಡೆಯುವ ಐಸಿಸಿ ಅಂಡರ್‌-19 ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಭಾರತದ 15 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.

Advertisement

ನಿಕಿ ಪ್ರಸಾದ್‌ ನಾಯಕಿಯಾಗಿ ಮುಂದುವರಿದಿದ್ದಾರೆ.ಕಳೆದ ಅಂಡರ್‌-19 ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲೂ ಇವರು ನಾಯಕಿಯಾಗಿದ್ದರು. ಭಾರತವಿಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಸಾನಿಯಾ ಚಲ್ಕೆ ಉಪನಾಯಕಿಯಾಗಿದ್ದಾರೆ.

ತಂಡದಲ್ಲಿ ಇಬ್ಬರು ವಿಕೆಟ್‌ ಕೀಪರ್‌ಗಳಿಗೆ ಸ್ಥಾನ ನೀಡಲಾಗಿದೆ. ಇವರೆಂದರೆ ಜಿ.ಕಮಲಿನಿ ಮತ್ತು ಭವಿಕಾ ಅಹಿರೆ. ಮೂವರು ಮೀಸಲು ಆಟಗಾರ್ತಿಯರೂ ಇದ್ದಾರೆ.

ಪಂದ್ಯಾವಳಿ ಜ.18ರಿಂದ ಫೆ. 2ರ ತನಕ ಕೌಲಾಲಂಪುರದಲ್ಲಿ ನಡೆಯಲಿದೆ. 16 ತಂಡಗಳು ಪಾಲ್ಗೊಳ್ಳಲಿವೆ. ಇವನ್ನು 4 ಗುಂಪುಗಳಾಗಿ ವಿಭಜಿಸಲಾಗಿದೆ.

ಭಾರತ ಎ’ ವಿಭಾಗದಲ್ಲಿದೆ. ಇಲ್ಲಿನ ಉಳಿದ ತಂಡಗಳೆಂದರೆ ವೆಸ್ಟ್‌ ಇಂಡೀಸ್‌, ಶ್ರೀಲಂಕಾ ಮತ್ತು ಆತಿಥೇಯ ಮಲೇಷ್ಯಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next