Advertisement
ಶ್ರೀಲಂಕಾ ರಾಜಧಾನಿ ಕೊಲಂಬೊ ದಿಂದ 119 ಕಿ.ಮೀ. ದೂರದಲ್ಲಿ ಗಾಲೆ ನಗರವಿದೆ. ಇಲ್ಲಿ ನಿರ್ಮಾಣವಾಗಿರುವ ಕ್ರಿಕೆಟ್ ಸ್ಟೇಡಿಯಂ ಹಿಂದೂ ಮಹಾ ಸಾಗರದ ಸನಿಹದಲ್ಲಿದೆ. ಇದೇ ನಗರದಲ್ಲಿ ಡಚ್ ನಿರ್ಮಾಣದ ಕೋಟೆಯಿದೆ. ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೊ ಘೋಷಿಸಿದೆ. ಕ್ರಿಕೆಟ್ ಮೈದಾನದಲ್ಲಿ ಪೆವಿಲಿಯನ್ ಸ್ಟಾಂಡ್ ನಿರ್ಮಾಣ ಗೊಂಡಿರುವುದರಿಂದ ಡಚ್ ಕೋಟೆಯನ್ನು ನೋಡಲು ಅಡ್ಡಿಯಾಗಿದೆ. ಆದ್ದರಿಂದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಿಂದ ಡಚ್ ಕೋಟೆಯನ್ನು ಕೈಬಿಡುವುದಾಗಿ ಯುನೆಸ್ಕೊ ಹೇಳಿದೆ. ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಬೇಕೆನಿಸಿದರೆ ಕ್ರಿಕೆಟ್ ಸ್ಟೇಡಿಯಂ ನೆಲಸಮವಾಗಬೇಕು, ಇಲ್ಲವಾ ದರೆ ಮಾನ್ಯತೆಯನ್ನು ಬಿಟ್ಟುಬಿಡಬೇಕು ಎನ್ನುವ ಸ್ಥಿತಿ ಶ್ರೀಲಂಕಾ ಸರಕಾರದ್ದು.
ಈ ಸ್ಥಿತಿಯನ್ನು ಶ್ರೀಲಂಕಾ ಸರಕಾರ ಪರಿಶೀಲಿಸುತ್ತಿದೆ. ವಿಶ್ವ ಪಾರಂಪರಿಕ ಸ್ಥಾನವನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿರುವುದರಿಂದ ಸುಂದರ ಗಾಲೆ ಕ್ರಿಕೆಟ್ ಸ್ಟೇಡಿಯಂ ನೆಲಕ್ಕುರುಳಲಿದೆ. ಇದರರ್ಥ ನ. 6ರಿಂದ 10ವರೆಗೆ ನಡೆಯುವ ಟೆಸ್ಟ್ ಪಂದ್ಯವೇ ಗಾಲೆಗೆ ಕೊನೆಯೆನಿಸಲಿದೆ. ಇದರ ಬದಲು ನೂತನ ಸ್ಟೇಡಿಯಂನಿರ್ಮಾಣ ಮಾಡುವ ಉದ್ದೇಶವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೊಂದಿದೆ.