ಗಜೇಂದ್ರಗಡ: ತಾಲೂಕಿನಾದ್ಯಂತ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದೆ. ಮುಂದೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಬಹುದೆಂಬ ಉದ್ದೇಶದಿಂದ ರೈತರು ಹೊಟ್ಟು-ಮೇವು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ.
Advertisement
ಬಹುತೇಕ ಅನ್ನದಾತರು ಮಳೆಯಾಶ್ರಿತ ಭೂಮಿ ಹೊಂದಿದ್ದು, ಮಳೆಯಾಗುವಿಕೆಯ ಪ್ರಮಾಣದ ಮೇಲೆ ತಾವು ಪಾರಂಪರಿಕವಾಗಿ ಬೆಳೆಯುತ್ತಿರುವ ಶೇಂಗಾ, ಜೋಳ, ಬದಲಾಗಿ ಉಳ್ಳಾಗಡ್ಡಿ, ಮೆಣಸಿನಕಾಯಿ, ಹತ್ತಿ, ಗೋವಿನಜೋಳದಂತಹವಾಣಿಜ್ಯ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಪರಿಣಾಮ ಜಾನುವಾರುಗಳ ಮುಖ್ಯ ಆಹಾರ ಶೇಂಗಾ ಹೊಟ್ಟು, ಜೋಳದ ಮೇವಿನ
ಕೊರತೆಯಾಗಿದೆ. ಇದರಿಂದ ಹೊಟ್ಟು-ಮೇವಿನ ಬೆಲೆ ಹೆಚ್ಚಾಗಿರುವುದು ರೈತ ಸಮೂಹವನ್ನು ಕಂಗೆಡಿಸಿದೆ.
ಎಲ್ಲಾದರೂ ಹೋಗಿ ಏನನ್ನಾದರೂ ತಿಂದು ಬದುಕಬಹುದ್ರೀ, ಆದ್ರ ಬಾಯಿಲ್ಲದ ಬಸವಣ್ಣನಿಗೆ ಹೊಟ್ಟು ಮೇವು ಇಲ್ಲಂದ್ರ ಹ್ಯಾಂಗ ಬದಕ್ತಾವರ್ರೀ..ಊರೂರು ಅಲ್ದು ಮೇವು ಖರೀದಿಸೀವಿ.
ಪರಿಯಪ್ಪ ಬೆನಕಪ್ಪನವರ, ರೈತ. ಮೇವು ಮತ್ತು ಹೊಟ್ಟಿನ ಕೊರತೆ ಬಗ್ಗೆ ತಾಲೂಕಾಡಳಿತದ ಗಮನಕ್ಕೆ ಬಂದಿಲ್ಲ.
ಈಚೆಗೆ ಶಾಸಕ ಜಿ.ಎಸ್.ಪಾಟೀಲ ನೇತೃತ್ವದಲ್ಲಿ
ನಡೆದ ಸಭೆಯಲ್ಲಿ ತಾಲೂಕಿನಲ್ಲಿ ಬರ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಯಾಗದಂತೆ ಮೇವು ಲಭ್ಯತೆ ಇರುವ ಕಡೆ ಖರೀದಿಸಿ ಸಂಗ್ರಹಿಸಲು ಪಶು ಸಂಗೋಪನಾ ಇಲಾಖೆಗೆ ಸೂಚಿಸಲಾಗಿದೆ.
ಕಿರಣ್ ಕುಮಾರ್ ಕುಲಕರ್ಣಿ,ತಹಶೀಲ್ದಾರ್, ಗಜೇಂದ್ರಗಡ.
Related Articles
Advertisement