Advertisement

GADAR 2:‌ ಈ ವಿಚಾರದಲ್ಲಿ ಕೆಜಿಎಫ್‌ -2, ಪಠಾಣ್‌‌, ದಂಗಲ್..‌ ದಾಖಲೆಯನ್ನು ಮುರಿದ ʼಗದರ್-2

11:54 AM Aug 19, 2023 | Team Udayavani |

ಮುಂಬಯಿ: ಬಾಲಿವುಡ್ ನಲ್ಲಿ ಇತ್ತೀಚೆಗೆ ಬಂದ ಕೆಲ ಸಿನಿಮಾಗಳು ಕೋಟಿ ಕ್ಲಬ್‌ ಸೇರಿದೆ. ಸದ್ಯ ಬಾಕ್ಸ್ ಆಫೀಸ್ ನಲಿ ಹೊಸ ದಾಖಲೆ ಬರೆಯುವುದಕ್ಕೆ ಸನ್ನಿ ಡಿಯೋಲ್‌ ಅವರ ʼಗದರ್-2‌ʼ ಮುಂದಾಗಿದೆ. ನಿರೀಕ್ಷೆಯಂತೆ ʼಗದರ್-2‌ʼ ಸಿನಿಮಾಕ್ಕೆ ಅಭೂತಪೂರ್ವ ರೆಸ್ಪಾನ್ಸ್‌ ವ್ಯಕ್ತವಾಗಿದೆ. ಸಿನಿಮಾ ರಿಲೀಸ್‌ ಆಗಿ 8 ದಿನ ಕಳೆದಿದೆ. ಈ 8 ದಿನಗಳಲ್ಲಿ ಸಿನಿಮಾ ಹಲವು ದಾಖಲೆಗಳನ್ನು ಉಡೀಸ್‌ ಮಾಡಿದೆ.

Advertisement

ಅನಿಲ್‌ ಶರ್ಮಾ ನಿರ್ದೇಶನದ ʼಗದರ್-2‌ʼ 2001 ರಲ್ಲಿ ಬಂದ ʼಗದರ್‌ʼ ಸಿನಿಮಾದ ಸೀಕ್ವೆಲ್.‌ ಸಿನಿಮಾದ ಮೊದಲ ಭಾಗಕ್ಕೆ ಅಂದು ದೊಡ್ಡಮಟ್ಟದಲ್ಲಿ ಯಶಸ್ಸು ಸಿಕ್ಕಿತ್ತು. ಅದೇ ರೀತಿಯ ಆರಂಭವನ್ನು ʼಗದರ್-2‌ʼ ಕೂಡ ಪಡೆದುಕೊಂಡಿದೆ.

ಅಕ್ಷಯ್‌ ಕುಮಾರ್‌ ಅವರ ʼಓಮೈಗಾಡ್-2‌ʼ ಸಿನಿಮಾದೊಂದಿಗೆ ಪೈಪೋಟಿಯಾಗಿ ತೆರೆಕಂಡ ʼಗದರ್-2ʼ 8 ದಿನದಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಆ ಮೂಲಕ ಹಲವು ದಾಖಲೆಗಳನ್ನು ಮುರಿದಿದೆ.

ಕೆಜಿಎಫ್‌ -2, ಪಠಾಣ್‌, ದಂಗಲ್..‌ ದಾಖಲೆಗಳನ್ನು ಮುರಿದ ʼಗದರ್-2‌ʼ :

‌ʼಗದರ್-2 ‌ʼ ಯಶಸ್ವಿಯಾಗಿ 2ನೇ ಶುಕ್ರವಾರಕ್ಕೆ ಕಾಲಿಟ್ಟಿದೆ. ಎರಡನೇ ಶುಕ್ರವಾರ ಅಂದರೆ 8ನೇ ದಿನಕ್ಕೆ ಸಿನಿಮಾ ಒಂದು ಅಂದಾಜಿನ ಪ್ರಕಾರ 19.05 ಕೋಟಿ ರೂಪಾಯಿಯ ಕಲೆಕ್ಷನ್‌ ಮಾಡಿದೆ. ಈ ಮೂಲಕ ಕೆಜಿಎಫ್‌ -2, ಪಠಾಣ್‌, ದಂಗಲ್, ಕಾಶ್ಮೀರ ಫೈಲ್ಸ್‌, ಬಜರಂಗಿ ಭಾಯಿಜಾನ್, ಸಂಜು ಹಾಗೂ ಪಿಕೆಯಂತಹ ಸಿನಿಮಾದ 2ನೇ ಶುಕ್ರವಾರದ ಕಲೆಕ್ಷನ್‌ ದಾಖಲೆಯನ್ನು ಮುರಿದಿದೆ.

Advertisement

2ನೇ ಶುಕ್ರವಾರ ʼಕಾಶ್ಮೀರ ಫೈಲ್ಸ್ʼ 19.00 ಕೋಟಿ ರೂಪಾಯಿಯನ್ನು ಸಂಗ್ರಹಿಸಿತ್ತು. ದಂಗಲ್, ಪಿಕೆ, ಬಜರಂಗಿ ಭಾಯಿಜಾನ್, ಸಂಜು, ಪಠಾಣ್ ಮತ್ತು ಕೆಜಿಎಫ್ 2 ಕ್ರಮವಾಗಿ 18.00 ಕೋಟಿ, 15.00 ಕೋಟಿ, 12.75 ಕೋಟಿ, 12.50 ಕೋಟಿ, 13.00 ಕೋಟಿ, ಮತ್ತು 11.25 ಕೋಟಿ ರೂಪಾಯಿಯ ಕಲೆಕ್ಷನ್‌ ನ್ನು 2ನೇ ಶುಕ್ರವಾರ ಮಾಡಿತ್ತು.

ಶುಕ್ರವಾರ (ಆ.18 ರಂದು) ʼಗದರ್-2‌‌ ʼ 19.05 ಕೋಟಿ ರೂ.ಗಳಿಸಿದೆ ಎನ್ನಲಾಗಿದೆ.  ʼಬಾಹುಬಲಿ -2ʼ ಎರಡನೇ ಶುಕ್ರವಾರ 19.50 ಕೋಟಿ ರೂಪಾಯಿಯನ್ನು 2ನೇ ಶುಕ್ರವಾರ ಗಳಿಸ ಮೊದಲ ಸ್ಥಾನದಲ್ಲಿದೆ.

ಸಾರ್ವಕಾಲಿಕ 2 ನೇ ಶುಕ್ರವಾರದ ಗಳಿಕೆ:

ಬಾಹುಬಲಿ 2: 19.50 ಕೋಟಿ ರೂ

ಗದರ್ 2: 19.05‌ ಕೋಟಿ ರೂ.

ಕಾಶ್ಮೀರ ಫೈಲ್ಸ್: 19 ಕೋಟಿ ರೂ.

ದಂಗಲ್: 18 ಕೋಟಿ ರೂ.

ಪಿಕೆ: 15 ಕೋಟಿ ರೂ.

ಪಠಾಣ್: 13 ಕೋಟಿ ರೂ.

ಬಜರಂಗಿ ಭಾಯಿಜಾನ್: 12.75 ಕೋಟಿ ರೂ.

ಸಂಜು: 12.50 ಕೋಟಿ ರೂ.

ಕೆಜಿಎಫ್ 2: 11.25 ಕೋಟಿ ರೂ.

 

Advertisement

Udayavani is now on Telegram. Click here to join our channel and stay updated with the latest news.

Next